ತುಟಿಗಳ ಅಂದ ಹೆಚ್ಚಿಸುವ ಈ ಲಿಪ್ ಸ್ಟಿಕ್​​​ನ್ನು ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2024 | 9:40 AM

ಲಿಪ್ ಸ್ಟಿಕ್ ಎಲ್ಲಾ ಹೆಣ್ಣು ಮಕ್ಕಳಿಗೆ ಇಷ್ಟ. ಊಟ ತಿಂಡಿ ಮಾಡದೇ ಇದ್ದರೂ ಕೂಡ ಪರವಾಗಿಲ್ಲ. ಆದರೆ ಹೆಣ್ಣು ಮಕ್ಕಳು ತುಟಿಯ ಅಂದವನ್ನು ಹೆಚ್ಚಿಸುವ ಈ ಲಿಪ್ ಸ್ಟಿಕ್ ಹಾಕದೇ ಇರರು. ಹೀಗಾಗಿ ಹೆಣ್ಣು ಮಕ್ಕಳು ಮೇಕಪ್ ಕಿಟ್ ಬ್ಯಾಗ್ ಮಲ್ಲಿಕಾರ್ಜುನ ವಿವಿಧ ಬಣ್ಣದ ಲಿಪ್ ಸ್ಟಿಕ್ ಕಲೆಕ್ಷನ್​​​​​ಗಳನ್ನು ಇರುತ್ತದೆ. ಕೆಲವೊಮ್ಮೆ ಈ ಲಿಪ್ ಸ್ಟಿಕ್​​ಗಳು ತುಟಿಗಳ ಅಂದವನ್ನು ಹೆಚ್ಚಿಸುವುದರ ಜೊತೆಗೆ ರಾಸಾಯನಿಕಗಳ ಕಾರಣ ತುಟಿಗಳ ಆರೋಗ್ಯವನ್ನು ಹಾಳು ಮಾಡಬಲ್ಲದು. ಹೀಗಾಗಿ ತುಟಿಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ತುಟಿಗಳ ಅಂದವನ್ನು ಹೆಚ್ಚಿಸಲು ಮನೆಯಲ್ಲಿಯೇ ಲಿಪ್ ಸ್ಟಿಕ್ ತಯಾರಿಸಿ ಬಳಸಬಹುದು.

ತುಟಿಗಳ ಅಂದ ಹೆಚ್ಚಿಸುವ ಈ ಲಿಪ್ ಸ್ಟಿಕ್​​​ನ್ನು ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸಿ
Follow us on

ಲಿಪ್ ಸ್ಟಿಕ್ ಎಲ್ಲಾ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚಾಗಿದ್ದು , ಮಹಿಳೆಯರ ಸೌಂದರ್ಯ ವರ್ಧಕಗಳಲ್ಲಿ ಲಿಪ್ ಸ್ಟಿಕ್​​​ಗೆ ಮೊದಲ ಆದ್ಯತೆ ಎನ್ನಬಹುದು. ಯುವತಿಯರು ಮೇಕಪ್ ಮಾಡದೇ ಇದ್ದರೂ ತುಟಿಗಳಿಗೆ ಗಾಢವಾದ ಲಿಪ್ ಸ್ಟಿಕ್ ಹಚ್ಚಿ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಈಗೀಗ ಲಿಪ್ ಸ್ಟಿಕ್ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಈ ಲಿಪ್ ಸ್ಟಿಕ್​​​ಗಳನ್ನು ರಾಸಾಯನಿಕಗಳನ್ನು ಬಳಸಿ ಮಾಡುವುದರಿಂದ ತುಟಿಗಳ ಆರೋಗ್ಯವು ಕ್ಷೀಣಿಸುವುದರ ಅರಿವು ಅನೇಕರಿಗಿಲ್ಲ. ಆದರೆ ರಾಸಾಯನಿಕಗಳ ಬಳಕೆ ಮಾಡುತ್ತಾರೆ ಎನ್ನುವುದರ ಬಗ್ಗೆ ಕೆಲವರಿಗೆ ತಿಳಿದಿದ್ದರೂ ಬಳಕೆ ಮಾಡುವುದು ಮಾತ್ರ ಕಡಿಮೆಯಿಲ್ಲ. ಬಹಳ ಬೇಡಿಕೆಯಿರುವ ಈ ಲಿಪ್ ಸ್ಟಿಕ್ ಅಂನ್ಚ್ ಮನೆಯಲ್ಲಿ ನೈಸರ್ಗಿಕವಾಗಿ ತಯಾರಿಸಬಹುದಾಗಿದ್ದು, ಅದೇಗೆ ಎನ್ನುವುದನ್ನು ಇಲ್ಲಿ ತಿಳಿಯೋಣ ಬನ್ನಿ.

ನೈಸರ್ಗಿಕ ಲಿಪ್ ಸ್ಟಿಕ್ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು

* ಶಿಯಾ ಬೆಣ್ಣೆ- 1 ಚಮಚ, ಜೇನುಮೇಣ- 1 ಚಮಚ, ಬಾದಾಮಿ ಅಥವಾ ಆಲಿವ್ ತೈಲ -1 ಚಮಚ, ದೊಡ್ಡ ಪಾತ್ರೆ ಅಥವಾ ತವಾ, ಚಾಪ್ ಸ್ಟಿಕ್ ಅಥವಾ ಲಿಪ್ ಸ್ಟಿಕ್ ಟ್ಯೂಬ್ ಅಥವಾ ಕಾಸ್ಮೆಟಿಕ್ ಪಾಟ್ ಹಾಗೂ ಬೀಟ್ ರೂಟ್ ಹುಡಿ.

ಇದನ್ನೂ ಓದಿ: ಸೌಂದರ್ಯ ವರ್ಧಕ ರೋಸ್ ವಾಟರ್ ಎಷ್ಟು ಪ್ರಯೋಜನಕಾರಿ ಗೊತ್ತಾ?

ನೈಸರ್ಗಿಕ ಲಿಪ್ ಸ್ಟಿಕ್ ತಯಾರಿಸುವ ವಿಧಾನ

* ಒಂದು ದೊಡ್ಡ ತವಾ ತೆಗೆದುಕೊಂಡು ಅದಕ್ಕೆ 5 ಸೆ.ಮೀ.ನಷ್ಟು ನೀರು ಹಾಕಿ ಬಿಸಿ ಮಾಡಿ.

* ಬಣ್ಣ ಹೊರತುಪಡಿಸಿ ಎಲ್ಲಾ ಸಾಮಗ್ರಿಗಳನ್ನು ಸಣ್ಣ ಪಾತ್ರೆಗೆ ಹಾಕಿಕೊಂಡು, ಅದನ್ನು ನೀರು ಇರುವ ತವಾದಲ್ಲಿ ನಿಧಾನವಾಗಿ ಇಟ್ಟುಕೊಳ್ಳಿ.

* ಪಾತ್ರೆಯಲ್ಲಿರುವ ಸಾಮಗ್ರಿಗಳನ್ನು ಸರಿಯಾಗಿ ಕಲಸಿಕೊಂಡು, ಈ ಮಿಶ್ರಣಕ್ಕೆ ಬಣ್ಣ ಎಷ್ಟು ಕಡು ಬೇಕು ಎಂದು ನೋಡಿ, ಬಣ್ಣದ ಮಿಶ್ರಣ ಹಾಕಿಕೊಳ್ಳಿ. ಮತ್ತೆ ಬಣ್ಣ ಬೇಕಾದರೆ ಹಾಕಿ ಕಲಸಿಕೊಳ್ಳಿ.
* ಈ ಮಿಶ್ರಣವು ತಣ್ಣಗಾದ ಬಳಿಕ ಖಾಲಿ ಲಿಪ್ ಸ್ಟಿಕ್ ಟ್ಯೂಬ್ ಗೆ ಹಾಕಿ, ರಾತ್ರಿಯಿಡಿ ಹಾಗೆ ಬಿಡಬೇಕು.

* ಮರುದಿನ ನೋಡಿದರೆ ಈ ಲಿಪ್ ಸ್ಟಿಕ್ ಟ್ಯೂಬ್ ಗೆ ಹಾಕಿದ ಮಿಶ್ರಣವು ಗಟ್ಟಿಯಾಗಿರುತ್ತದೆ. ಈ ನೈಸರ್ಗಿಕವಾಗಿ ತಯಾರಿಸಿದ ಲಿಪ್ ಸ್ಟಿಕ್ ಅನ್ನು ಯಾವುದೇ ಆತಂಕವಿಲ್ಲದೇ ತುಟಿಗಳ ಅಂದವನ್ನು ಹೆಚ್ಚಿಸಲು ಬಳಸಬಹುದು.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 am, Tue, 16 January 24