ಲಿಪ್ ಸ್ಟಿಕ್ ಮುರಿದು ಹೋದರೆ ಚಿಂತೆ ಮಾಡಬೇಡಿ, ಸಿಂಪಲ್ ಟಿಪ್ಸ್ ಫಾಲೋ ಮಾಡಿ
ದುಬಾರಿ ಬೆಲೆಯ ಲಿಪ್ಸ್ಟಿಕ್ಗಳು ಮುರಿದು ಹೋಗಿದೆ ಎಂದು ಚಿಂತಿಸದಿರಿ. ಮುರಿದಿರುವ ಲಿಪ್ಸ್ಟಿಕ್ ಅನ್ನು ನೀವು ಮತ್ತೆ ಕೂಡ ಉಪಯೋಗಿಸಬಹುದು. ಅದು ಹೇಗೆ ಎಂದು ಯೋಚಿಸುತ್ತೀದ್ದೀರಾ? ಹಾಗಿದ್ದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.
ಮಹಿಳೆಯರ ಸೌಂದರ್ಯದ ದಿನಚರಿಯ ಅಗತ್ಯ ವಸ್ತುಗಳ ಪೈಕಿಯಲ್ಲಿ ಲಿಪ್ಸ್ಟಿಕ್ (Lipstick) ಅತ್ಯಂತ ಪ್ರಮುಖವಾದುದು. ಕೆಲವೊಮ್ಮೆ ನೀವು ಖರೀದಿಸಿದ ದುಬಾರಿ ಬೆಲೆಯ ಲಿಪ್ಸ್ಟಿಕ್ಗಳು ಅಚಾನಕ್ಕಾಗಿ ಕೆಳಗೆ ಬಿದ್ದು ಮುರಿದು ಹೋಗುತ್ತದೆ. ಆದರೆ ಮುರಿದ ಲಿಪ್ಸ್ಟಿಕ್ ಅನ್ನು ಕೂಡ ಮತ್ತೆ ಉಪಯೋಗಿಸಬಹುದು. ಇನ್ನೂ ಮುಂದೆ ದುಬಾರಿ ಬೆಲೆಯ ಲಿಪ್ಸ್ಟಿಕ್ಗಳು ಮುರಿದು ಹೋಗಿದೆ ಎಂದು ಚಿಂತಿಸದಿರಿ. ಈ ಕೆಳಗೆ ತಿಳಿಸಲಾಗಿರುವ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಮುರಿದಿರುವ ಲಿಪ್ಸ್ಟಿಕ್ ಮರು ಜೋಡಿಸಿ ಬಳಸಬಹುದಾಗಿದೆ.
ಲಿಪ್ಸ್ಟಿಕ್ ಮುರಿದರೆ ಏನು ಮಾಡಬೇಕು?
ಮುರಿದಿರುವ ಲಿಪ್ಸ್ಟಿಕ್ ಅನ್ನು ನವು ಸುಲಭವಾಗಿ ಜೋಡಿಸಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಲಿಪ್ಸ್ಟಿಕ್ನ ಮುರಿದ ಭಾಗಗಳನ್ನು ಲೈಟರ್ನಿಂದ ಬಿಸಿ ಮಾಡಿ ಮತ್ತು ನಂತರ ಎರಡೂ ಭಾಗಗಳು ಬಿಸಿಯಾದಾಗ , ಎರಡು ಭಾಗಗಳನ್ನು ಒಟ್ಟಿಗೆ ಜೋಡಿಸಿ. ಸ್ಪಲ್ಪ ಹೊತ್ತು ಹಾಗೆಯೇ ಬಿಡಿ. ಈ ರೀತಿಯಾಗಿ ಮರು ಜೋಡಿಸಿ ಮತ್ತೆ ಲಿಪ್ಸ್ಟಿಕ್ ಬಳಸಬಹುದು.
ಇದನ್ನೂ ಓದಿ: ಚೀನಾದಲ್ಲಿ ಹೊಸದಾಗಿ ಪತ್ತೆಯಾದ ತಲೆಬುರುಡೆ ಕಂಡು ಗೊಂದಲಕ್ಕೊಳಗಾಗಿರುವ ವಿಜ್ಞಾನಿಗಳು; ಇದು ಮಾನವರ ಮತ್ತೊಂದು ವಂಶವೇ?
ಲಿಪ್ ಸ್ಟಿಕ್ ಹಚ್ಚುವ ಮೊದಲು ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು:
ದೀರ್ಘಕಾಲದ ವರೆಗೆ ನೀವು ಹಚ್ಚಿರುವ ಲಿಪ್ಸ್ಟಿಕ್ ಹಾಗೆಯೇ ಉಳಿಯಲು ಕೆಲವೊಂದು ಸಿಂಪಲ್ ಟಿಪ್ಸ್ಗಳು ಇಲ್ಲಿವೆ. ಸೌಂದರ್ಯದ ಜೊತೆಗೆ ನಿಮ್ಮ ತುಟಿಯ ಚರ್ಮವು ಸೂಕ್ಷ್ಮವಾಗಿರುವುದರಿಂದ ಲಿಪ್ಸ್ಟಿಕ್ ಹಚ್ಚುವ ಮೊದಲು ತುಟಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ. ನಂತರ ಟಿಶ್ಯೂ ಪೇಪರ್‌ನಿಂದ ತುಟಿಗಳನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ತುಟಿಗಳಿಗೆ ತೇವಾಂಶವನ್ನು ತರುತ್ತದೆ ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ನಂತರ, ಲಿಪ್ಸ್ಟಿಕ್ ಹಚ್ಚಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: