AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips: ಮೇಕಪ್​​ ಕಿಟ್​​ನಲ್ಲಿ ಈ ವಸ್ತುಗಳನ್ನು ಮರೆಯದೇ ಇರಿಸಿಕೊಳ್ಳಿ

ಹೆಂಗಳೆಯರ ನೆಚ್ಚಿನ ಮೇಕಪ್​ ವಸ್ತು ಎಂದರೆ ಲಿಪ್​​​ಸ್ಟಿಕ್.​ ಕೆಲವರಿಗೆ ಬಣ್ಣ ಬಣ್ಣದ ಲಿಪ್​​​ಸ್ಟಿಕ್​ಗಳನ್ನು ಕಲೆಹಾಕುವುದೇ ಒಂದು ಹವ್ಯಾಸವಾಗಿರುತ್ತದೆ. ಡ್ರೆಸ್​ ತಕ್ಕ ಹಾಗೆ ಲಿಪ್​ಸ್ಟಿಕ್​ ಹಾಕಿಕೊಂಡರೆ ಅದರ ಅಂದವೇ ಬೇರೆ.

Beauty Tips: ಮೇಕಪ್​​ ಕಿಟ್​​ನಲ್ಲಿ ಈ ವಸ್ತುಗಳನ್ನು ಮರೆಯದೇ ಇರಿಸಿಕೊಳ್ಳಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Feb 25, 2022 | 5:19 PM

Share

ಅಂದವಾಗಿ ಕಾಣಲು ಹೆಣ್ಣುಮಕ್ಕಳು ಮೇಕಪ್ (Makeup)​ ಮಾಡಿಕೊಳ್ಳುವುದು ಸಾಮಾನ್ಯ. ಅದಕ್ಕಾಗಿ ಹಲವು ರೀತಿಯ ಕಾಸ್ಮೆಟಿಕ್ಸ್​​, ಕ್ರೀಮ್​, ಪೌಡರ್​ಗಳನ್ನು ಬಳಸುತ್ತಾರೆ. ಈಗಷ್ಟೇ ವರ್ಕ್ ಫ್ರಾಮ್​ ಹೋಮ್​ ಮುಗಿದು ಆಫೀಸ್​​ಗಳು ಆರಂಭವಾಗುತ್ತಿದೆ. ಹೆವಿ ಮೇಕಪ್(Heavy Makeup)​ ಗಿಂತ ಲೈಟ್​ ಆಗಿ ಮೇಕಪ್​ ಮಾಡಿಕೊಂಡು ಅಂದವಾಗಿ ಕಾಣಿಸಿಕೊಳ್ಳಲು ಹೆಣ್ಣುಮಕ್ಕಳು ಹೆಚ್ಚು ಇಷ್ಟಪಡುತ್ತಾರೆ.  ಕೆಲವೊಮ್ಮೆ ಆಫೀಸಿಗೆ ಹೋದಮೇಲೆ ಮೇಕಪ್​ ಡಲ್​ ಆಗಿ ಕಾಣುತ್ತದೆ. ಅಥವಾ ಕೆಲವೊಮ್ಮೆ ಆಫೀಸ್​ನಿಂದಲೇ ಬೇರೆ ಎಲ್ಲಿಗೂ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹೀಗಿದ್ದಾಗ ಮಿನಿ ಮೇಕಪ್ ಕಿಟ್​ ನಿಮ್ಮೊಂದಿಗೆ ಇರಿಸಿಕೊಳ್ಳುವುದು ಬೆಸ್ಟ್​. ನಿಮ್ಮ ಮಿನಿ ಮೇಕಪ್​ ಕಿಟ್​ನಲ್ಲಿ ಯಾವೆಲ್ಲಾ  ವಸ್ತುಗಳು ಇರಬೇಕು ಎನ್ನುವುದನ್ನು ಸರಿಯಾಗಿ ಗಮನಿಸಿಕೊಳ್ಳಿ. ಇಲ್ಲವಾದರೆ ಒಂದು ವಸ್ತು ಇಲ್ಲವಾದರೂ ಮೇಕಪ್​ ಕಂಪ್ಲೀಟ್​ ಆಗುವುದಿಲ್ಲ. ಹಾಗಾದರೆ ಯಾವೆಲ್ಲಾ ವಸ್ತುಗಳನು ನಿಮ್ಮ ದಿನನಿತ್ಯದ ಮೇಕಪ್​ ಕಿಟ್​ನಲ್ಲಿರಬೇಕು? ಆ ಬಗ್ಗೆ ಗೊಂದಲ ಬೇಡ ನಿಮ್ಮ ಮಿನಿ ಮೇಕಪ್​ ಕಿಟ್​ನಲ್ಲಿರಬೇಕಾದ ಅಗತ್ಯ ವಸ್ತುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ,

ಪೌಂಡೇಶನ್​ ಕ್ರೀಮ್​ ಅಥವಾ ಬಿ ಬಿ ಕ್ರೀಮ್​: ಬಿ ಬಿ (BB) ಅಥವಾ ಪೌಂಡೇಶನ್​ ಕ್ರೀಮ್​ಗಳನ್ನು ನಿಮ್ಮಮ ಬ್ಯಾಗ್​ನಲ್ಲಿರಿಸಿಕೊಳ್ಳಿ. ಇದು ನಿಮ್ಮ ಮುಖದ ಮೇಕಪ್​ಗೆ ಹೊಳಪು ನೀಡುತ್ತದೆ. ಆದರೆ ನೆನಪಿಡಿ ಪೌಂಡೇಶನ್​ ಕ್ರೀಮ್​ ನಿಮ್ಮ ತ್ವಚೆಯ ಬಣ್ಣಕ್ಕೆ ಸರಿಹೊಂದುವಂತೆ ನೋಡಿಕೊಳ್ಳಿ. ಅದೇ ರೀತಿ ಹೆಚ್ಚು ರಾಸಾಯನಿಕಗಳಿರುವ ಪೌಂಡೇಶನ್​ ಕ್ರೀಮ್​ಗಳ ಬಳಕೆ ಬೇಡ.

ಐಲೇನರ್​: ಕಣ್ಣಿನ ಅಂದ ಹೆಚ್ಚಿಸುವ ಐಲೇನರ್​ ಅಥವಾ ಕಾಜಲ್​ಅನ್ನು ಸದಾ ನಿಮ್ಮೊಂದಿಗೆ ಇರಿಸಿಕೊಳ್ಳಿ. ಸುಸ್ತಾದ ಮುಖವನ್ನು ಕೂಡ ಕಾಜಲ್​ ಅಂದವಾಗಿಸುತ್ತದೆ. ಆದರೆ ಐಲೇನರ್​ ಹಚ್ಚಿಕೊಳ್ಳುವಾಗ ಎಚ್ಚರಿಕೆವಹಿಸಿ. ಏಕೆಂದರೆ ಕೆಲವು ರಾಸಾಯನಿಕಗಳು ಕಣ್ಣಿಗೆ ಹಾನಿಯುಂಟು ಮಾಡಬಹುದು. ಆದ್ರಿಂದ ಕಣ್ಣಿಗೆ ಹಚ್ಚುವಾಗ ಕಣ್ಣಿನ ಒಳಗೆ ಹೋಗದಂತೆ ಜಾಗೃತೆವಹಿಸಿ

ಲಿಪ್​ಸ್ಟಿಕ್​: ಹೆಂಗಳೆಯರ ನೆಚ್ಚಿನ ಮೇಕಪ್​ ವಸ್ತು ಎಂದರೆ ಲಿಪ್​​​ಸ್ಟಿಕ್.​ ಕೆಲವರಿಗೆ ಬಣ್ಣ ಬಣ್ಣದ ಲಿಪ್​​​ಸ್ಟಿಕ್​ಗಳನ್ನು ಕಲೆಹಾಕುವುದೇ ಒಂದು ಹವ್ಯಾಸವಾಗಿರುತ್ತದೆ. ಡ್ರೆಸ್​ ತಕ್ಕ ಹಾಗೆ ಲಿಪ್​ಸ್ಟಿಕ್​ ಹಾಕಿಕೊಂಡರೆ ಅದರ ಅಂದವೇ ಬೇರೆ. ಕೆಲವೊಮ್ಮೆ ಏನೋ ತಿಂದಾಗ ಅಥವಾ ಈಗಂತೂ ಮಾಸ್ಕ್​ ಹಾಕಿಕೊಂಡಾಗ ಲಿಪ್​ಸ್ಟಿಕ್​ ಅಳಿಸಿಹೋಗುವ ಸಾಧ್ಯತೆಗಳಿರುತ್ತದೆ. ಅದ್ದರಿಂದ ನಿಮ್ಮ ಬ್ಯಾಹಗ್​ನ ಮಿನಿನ ಮೇಕಪ್​ ಕಿಟ್​ನಲ್ಲಿ ಎಲ್ಲಾ ಡ್ರೆಸ್​ಗೂ ಹೊಂದಾಣಿಕೆಯಾಗುವ ಲಿಪ್​ಸ್ಟಿಕ್​ ಅನ್ನು ಇರಿಸಿಕೊಳ್ಳಿ.

ಮಸ್ಕರಾ: ಕಣ್ಣಿನ ಕಾಡಿಗೆ ಅಥವಾ ಐಲೇನರ್​ ಹಚ್ಚಿದ ಬಳಿಕ ಮಸ್ಕರಾ ಹಚ್ಚದಿದ್ದರೆ, ಖಾಲಿ ಖಾಲಿ ಎನಿಸುತ್ತದೆ. ಹೀಗಾಗಿ ನಿಮ್ಮ ಮೇಕಪ್​ ಕಿಟ್​ನಲ್ಲೊಂದು ಮಸ್ಕಕರಾ ಇರಿಸಿಕೊಳ್ಳಿ. ಪಾರ್ಟಿಗಳಿಗೆ ಹೋರಡುವಾಗ ಇದು ನಿಮಗೆ ನೆರವಾಗುತ್ತದೆ.  ಕಣ್ಣಿನ ಕೂದಲು ಕಡಿಮೆ ಇದ್ದರೆ ಮಸ್ಕರಾ ಹಾಕಿಕೊಂಡಾಗ ಕಣ್ಣು ಇನ್ನಷ್ಟು ಆಕರ್ಷಕವಾಗಿ ಕಾಣಿಸುತ್ತದೆ.

ಇದನ್ನೂ ಓದಿ:

Side Effects of Kajal: ಕಣ್ಣಿನ ಅಂದ ಹೆಚ್ಚಿಸುವ ಕಾಜಲ್​ ಬಳಕೆಯ ಮುನ್ನ ಈ ಅಂಶಗಳನ್ನು ಗಮನಿಸಿ

Published On - 5:19 pm, Fri, 25 February 22

Follow Us
ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ
ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ
ಸಕಲೇಶಪುರದ ಆನೆಮಹಲ್ ಬಳಿ ಭೂಕುಸಿತದ ಆತಂಕ
ಸಕಲೇಶಪುರದ ಆನೆಮಹಲ್ ಬಳಿ ಭೂಕುಸಿತದ ಆತಂಕ
ಪಾತಾಳ ಕಂಡ ಟೊಮ್ಯಾಟೋ ಬೆಲೆ: ರಸ್ತೆ ಬದಿ ತಂದು ಬೆಳೆ ಸುರಿದ ರೈತರು
ಪಾತಾಳ ಕಂಡ ಟೊಮ್ಯಾಟೋ ಬೆಲೆ: ರಸ್ತೆ ಬದಿ ತಂದು ಬೆಳೆ ಸುರಿದ ರೈತರು
ಮಳೆ ವಿಚಾರವಾಗಿ ಪ್ರಧಾನಿ ಮೋದಿ ಎಚ್ಚರಿಕೆ ಗಂಟೆ ಕೊಟ್ಟಿದ್ದಾರೆ: ಸಿಎಂ
ಮಳೆ ವಿಚಾರವಾಗಿ ಪ್ರಧಾನಿ ಮೋದಿ ಎಚ್ಚರಿಕೆ ಗಂಟೆ ಕೊಟ್ಟಿದ್ದಾರೆ: ಸಿಎಂ
ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ; ವಿಡಿಯೋ ವೈರಲ್
ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ; ವಿಡಿಯೋ ವೈರಲ್
ಇರಾನ್​ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ದಾಳಿ
ಇರಾನ್​ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ದಾಳಿ
RSS ವಿರುದ್ಧ ಮಾತಾಡಿದ್ರೆ ಕಾಂಗ್ರೆಸ್​​ನಲ್ಲಿ ಬಡ್ತಿ: ಯತ್ನಾಳ್​​ ಆರೋಪ
RSS ವಿರುದ್ಧ ಮಾತಾಡಿದ್ರೆ ಕಾಂಗ್ರೆಸ್​​ನಲ್ಲಿ ಬಡ್ತಿ: ಯತ್ನಾಳ್​​ ಆರೋಪ
ಫುಟ್​ಪಾತ್​ ತೆರವು ಬೆನ್ನಲ್ಲೇ ವಾಹನ ಟೋಯಿಂಗ್ ಬಗ್ಗೆ ಕೃಷ್ಣಬೈರೇಗೌಡ ಸುಳಿವು
ಫುಟ್​ಪಾತ್​ ತೆರವು ಬೆನ್ನಲ್ಲೇ ವಾಹನ ಟೋಯಿಂಗ್ ಬಗ್ಗೆ ಕೃಷ್ಣಬೈರೇಗೌಡ ಸುಳಿವು
ನೈಸ್‌ ರೋಡ್ ಸಮೀಪ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ನೈಸ್‌ ರೋಡ್ ಸಮೀಪ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
‘ನೀನು ಹೀರೋನೆ ಅಲ್ಲ’, ಎಂದು ನನಗೆ ಹೇಳಿದ್ದಾರೆ’: ಸತೀಶ್ ನೀನಾಸಂ
‘ನೀನು ಹೀರೋನೆ ಅಲ್ಲ’, ಎಂದು ನನಗೆ ಹೇಳಿದ್ದಾರೆ’: ಸತೀಶ್ ನೀನಾಸಂ