Independence Day 2023: ಸ್ವಾತಂತ್ರ್ಯ ದಿನಾಚರಣೆಯ ರಜಾದಿನದಲ್ಲಿ ರುಚಿಯಾದ ಆಹಾರ ಸವಿಯಲು ಈ ತಾಣಗಳಿಗೆ ಭೇಟಿ ನೀಡಿ

ಸ್ವಾತಂತ್ರ್ಯ ದಿನಾಚರಣೆ 2023: ಈ ದೀರ್ಘ ವಾರಾಂತ್ಯದಲ್ಲಿ ಇಲ್ಲಿ ನೀಡಿರುವ ತಾಣಗಳಲ್ಲಿ ಯಾವುದಾದರೂ ಒಂದಕ್ಕೆ ನಿಮ್ಮ ಪ್ರವಾಸ ಪ್ಲಾನ್ ಮಾಡಿ ಈ ಬಾರಿಯ ಸುಂದರ ರಜೆಯನ್ನು ಹಲವು ಸ್ಥಳಗಳಿಗೆ ಹೋಗುವ ಜೊತೆಗೆ ಅಲ್ಲಿಯ ರುಚಿಯನ್ನು ಸವಿಯಿರಿ.

Independence Day 2023: ಸ್ವಾತಂತ್ರ್ಯ ದಿನಾಚರಣೆಯ ರಜಾದಿನದಲ್ಲಿ ರುಚಿಯಾದ ಆಹಾರ ಸವಿಯಲು ಈ ತಾಣಗಳಿಗೆ ಭೇಟಿ ನೀಡಿ
Travel Tips
Follow us
| Updated By: ಅಕ್ಷತಾ ವರ್ಕಾಡಿ

Updated on: Aug 12, 2023 | 6:20 PM

ಈ ಬಾರಿ ಸ್ವಾತಂತ್ರ್ಯ ದಿನ(Independence Day) ವನ್ನು ಆಚರಿಸುವ ಉತ್ತಮ ಮಾರ್ಗ ಯಾವುದು? ಎಂದು ಯೋಚಿಸುತ್ತಿದ್ದರೇ ಈ ಐಡಿಯಾ ನಿಮಗೆ ಸಹಾಯ ಮಾಡಬಹುದು. ಮಂಗಳವಾರದಂದು ಸ್ವಾತಂತ್ರ್ಯ ದಿನಾಚರಣೆ ಇರುವುದರಿಂದ, ಅನೇಕರು ಇದನ್ನು ದೀರ್ಘ ವಾರಾಂತ್ಯವನ್ನಾಗಿ ಮಾಡಲು ಬಹುನಿರೀಕ್ಷಿತ ಕಿರು ಪ್ರವಾಸಗಳಿಗೆ ತೆರಳಲು ಯೋಜಿಸುತ್ತಿದ್ದಾರೆ. ಈ ವಾರಾಂತ್ಯದಲ್ಲಿ ನಿಮಗೆ ಭೇಟಿ ನೀಡಲು ಉತ್ತಮ ತಾಣಗಳನ್ನು ಇಲ್ಲಿ ನೀಡಲಾಗಿದ್ದು ಐತಿಹಾಸಿಕ ನೋಟ, ಭಾರತದ ವೈವಿಧ್ಯಮಯ ರುಚಿ, ರಾಜಮನೆತನದ ಪಾಕಶಾಲೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಆದ್ದರಿಂದ, ಈ ತಾಣಗಳಿಗೆ ಹೋಗಲು ಒಂದು ಮಾರ್ಗವನ್ನು ಪಟ್ಟಿ ಮಾಡುವ ಮೂಲಕ ರಜೆಯನ್ನು ಆನಂದವಾಗಿ ಅನುಭವಿಸಿ.

ಸ್ವಾತಂತ್ರ್ಯ ದಿನಾಚರಣೆಯ ದೀರ್ಘ ವಾರಾಂತ್ಯಕ್ಕಾಗಿ ಇಲ್ಲಿದೆ 6 ತಾಣಗಳು:

ಶಿಮ್ಲಾ: 

ಬೆಟ್ಟಗಳ ರಾಣಿ ಎಂದೇ ಪ್ರಸಿದ್ದವಾಗಿರುವ ಶಿಮ್ಲಾ ಹಿಮಾಲಯದ ನಡುವೆ ನೆಲೆಗೊಂಡಿದೆ. ಇಲ್ಲಿನ ವಿಲಕ್ಷಣ ಮೋಡಿ ಮತ್ತು ವಿಹಂಗಮ ನೋಟಗಳಿಂದ ಪ್ರವಾಸಿಗರ ಗಮನ ಸೆಳೆಯುತ್ತದೆ. ಇಲ್ಲಿನ ವಾಸ್ತುಶಿಲ್ಪ ಮತ್ತು ರಮಣೀಯ ಸೌಂದರ್ಯ ನಿಮ್ಮನ್ನು ಬೆರಗುಗೊಳಿಸುತ್ತದೆ. ಅಲ್ಲದೆ ಶಿಮ್ಲಾದ ಸ್ಥಳೀಯ ಭಕ್ಷ್ಯಗಳು ನಿಮ್ಮನ್ನು ಇನ್ನಷ್ಟು ಈ ಪ್ರದೇಶವನ್ನು ಪ್ರೀತಿಸುವಂತೆ ಮಾಡುತ್ತದೆ. ಇಲ್ಲಿನ ಚನಾ ಮಾದರ, ಬಬ್ರು ಮತ್ತು ಸಿದ್ದು ಸ್ಥಳೀಯ ಖಾದ್ಯಗಳಾಗಿವೆ. ಇಲ್ಲಿನ ಮಾಲ್ ರಸ್ತೆಯುಬೀದಿ ಆಹಾರ ಸಿಗುವ ಸ್ವರ್ಗವಾಗಿದೆ. ಇಲ್ಲಿಗೆ ಹೋದಲ್ಲಿ ಈ ಪದೇಶದಲ್ಲಿರುವ ಜನಪ್ರಿಯ ಕೆಫೆಗಳಿಗೆ ಹೋಗುವುದನ್ನು ಮರೆಯಬೇಡಿ.

ಜೈಪುರದ ಪಿಂಕ್ ಸಿಟಿ:

ತನ್ನ ಶ್ರೀಮಂತ ಪರಂಪರೆ ಮತ್ತು ಅಷ್ಟೇ ಆಕರ್ಷಕ ಆಹಾರದಿಂದ ವರ್ಷಪೂರ್ತಿ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಲಾಲ್ ಮಾಸ್, ರಾಜಮನೆತನದ ಅಡುಗೆಮನೆಗಳ ಅಂದವನ್ನು ಕಣ್ಣುತುಂಬಿಕೊಳ್ಳಿ. ಜೊತೆಗೆ ಅಲ್ಲಿ ಪ್ರಸಿದ್ಧವಾಗಿರುವ ವೈವಿಧ್ಯಮಯ ಕಚೋರಿಗಳನ್ನು ತಿನ್ನದೇ ಬರಬೇಡಿ. ದೇಶ ಮತ್ತು ವಿದೇಶಗಳ ಜನರ ಹೃದಯವನ್ನು ಗೆದ್ದಿರುವ ಈ ಜೈಪುರ ರೆಸ್ಟೋರೆಂಟ್ ಗಳಲ್ಲಿನ ಸಾಂಪ್ರದಾಯಿಕ ರಾಜಸ್ಥಾನಿ ಪಾಕಪದ್ಧತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ಅದರ ರುಚಿಯನ್ನುಆಸ್ವಾದಿಸಿರಿ.

ಅಮೃತಸರ:

ಪಂಜಾಬ್ ನ ಹೃದಯಭಾಗವಾಗಿರುವ ಅಮೃತಸರದಲ್ಲಿ ವೈವಿಧ್ಯತೆಗಳನ್ನು ನೀವು ಕಾಣಬಹುದು. ಇಲ್ಲಿ ಪೌರಾಣಿಕ ಗೋಲ್ಡನ್ ಟೆಂಪಲ್ ಮತ್ತು ಹೆಸರುವಾಸಿಯಾದ ಅಮೃತಸರದ ಪಾಕಶಾಲೆಗಳು ಪ್ರತಿಯೊಬ್ಬ ಪ್ರವಾಸಿಗರನ್ನು ಅಚ್ಚರಿಗೊಳಿಸುತ್ತದೆ. ಅದರಲ್ಲಿಯೂ ಅಲ್ಲಿನ ಕುಲ್ಚಾಗಳು, ಟಿಕ್ಕಾಗಳನ್ನು ತಿನ್ನುವುದನ್ನು ಎಂದಿಗೂ ಮರೆಯಬಾರದು. ಏಕೆಂದರೆ ಈ ತಿನಿಸುಗಳು ನಿಮ್ಮ ಸಣ್ಣ ಪ್ರವಾಸವನ್ನು ಪರಿಪೂರ್ಣಗೊಳಿಸುತ್ತವೆ.

ಇದನ್ನೂ ಓದಿ: ಯೌವನದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ಮುಂದಿನ ಜೀವನ ಸುಖಕರ

ಮಸ್ಸೂರಿ

ಮೋಡಿಮಾಡುವ ಬೆಟ್ಟ, ಅಲ್ಲಿಯ ಪ್ರಶಾಂತ ವಾತಾವರಣ ಅದರ ನಡುವೆ ಸಣ್ಣ ಸಣ್ಣ ಕೆಫೆಯಲ್ಲಿ ತಂಪಾಗಿ ಕುಳಿತು ಅಲ್ಲಿಯ ಸೌಂದರ್ಯವನ್ನು ಸವಿಯಬಹುದು. ಇಲ್ಲಿನ ವಿವಿಧ ರೀತಿಯ ಆಹಾರ, ರುಚಿ ರುಚಿಯಾದ ಪಾನೀಯ ಮತ್ತು ಆಗಾಗ ಬೀಸುವ ತಂಪಾದ ಗಾಳಿ, ಎಲ್ಲವೂ ನಿಮ್ಮ ದಿನವನ್ನು ಸುಂದರಗೊಳಿಸುತ್ತದೆ.

ಚಂಡೀಗಢ

ಮನೆಯಿಂದ ದೂರವಿದ್ದರೂ ಮನೆಯಲ್ಲಿಯೇ ಇರುವಂತೆ ಭಾಸವಾಗುತ್ತದೆ. ಆಧುನಿಕ ವಾಸ್ತುಶಿಲ್ಪ, ಸ್ವಚ್ಛವಾದ ರಸ್ತೆಗಳು ಮತ್ತು ಐಷಾರಾಮಿ ರೆಸ್ಟೋರೆಂಟ್ ಗಳು ನಿಮ್ಮ ಮನಸ್ಸನ್ನು ಗೊಂದಲದಿಂದ ದೂರಮಾಡಿ ನಿಮ್ಮನ್ನು ತೃಪ್ತಿಗೊಳಿಸುತ್ತದೆ. ನೀವು ನಗರದಲ್ಲಿ ನಿಮ್ಮ ವೀಕ್ಷಣೆ ಮುಗಿಸಿದ ನಂತರ ಪರಿಪೂರ್ಣ ಭೋಜನಕ್ಕಾಗಿ ಚಂಡೀಗಢದ ಕೆಲವು ಅತ್ಯುತ್ತಮ ರೆಸ್ಟೋರೆಂಟ್ ಗಳನ್ನು ಭೇಟಿ ಮಾಡಬಹುದು. ಈ ಬಾರಿಯ ಸ್ವಾತಂತ್ರ್ಯ ದಿನದಂದು, ಭಾರತದ ವೈವಿಧ್ಯತೆಯನ್ನು ಅದರ ಇತಿಹಾಸದ ಮೂಲಕ ಮಾತ್ರವಲ್ಲ, ಅದರ ಸಾಂಸ್ಕೃತಿಕವಾಗಿ ವ್ಯಾಖ್ಯಾನಿಸುವ ರುಚಿಗಳ ಮೂಲಕವೂ ಆಚರಣೆ ಮಾಡಿ.

ಅದ್ಭುತ ಕೃಷಿ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ನಿಮಗೆ ಇದ್ದರೆ, ನೀವು ದೆಹಲಿಯ ಬಳಿ ಹಲವಾರು ಹೊಲಗಳಿಗೆ ಜೊತೆಗೆ ಅದರ ಹೊರತಾಗಿ ಬೇರೆ ಸ್ಥಳಗಳಿಗೂ ಭೇಟಿ ನೀಡಬಹುದು. ಇಲ್ಲವಾದಲ್ಲಿ ನೀವು ಬೆಂಗಳೂರಿಗರಾದರೆ ಸಿರ್ಸಿ, ಯಲ್ಲಾಪುರ, ಸಾಗರದ ಕಡೆಗೆ ಒಂದು ದಿನದ ಪ್ರವಾಸ ಅಥವಾ ವಾಸ್ತವ್ಯಕ್ಕಾಗಿ ಬರಬಹುದು. ಅಲ್ಲಿ ಸಾವಯವ ಕೃಷಿಯ ಬಗ್ಗೆ ಕಲಿಯುತ್ತಾ ತಾಜಾ ಉತ್ಪನ್ನಗಳನ್ನು ತಿಂದು ಆನಂದಿಸಬಹುದು. ಅಲ್ಲದೆ ಪಟ್ಟಣದಲ್ಲಿ ವಾಸಮಾಡುವವರಿಗೆ ಹಳ್ಳಿಯ ಗಾಳಿ, ಅಲ್ಲಿನ ವಾತಾವರಣ ಎಲ್ಲವೂ ಮುದ ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ