ಯೌವನದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ಮುಂದಿನ ಜೀವನ ಸುಖಕರ

20ರಿಂದ 30ರ ವಯಸ್ಸು ಜೀವನದಲ್ಲಿ ಬಹಳ ಮುಖ್ಯ. ಇದು ನಮ್ಮ ಜೀವನದ ಯೌವನ ದ ವಯಸ್ಸಾಗಿದ್ದು, ಈ ಸಮಯದಲ್ಲಿಯೇ ಹೆಚ್ಚಾಗಿ ನಮ್ಮ ಆಲೋಚನೆಗಳು ಮತ್ತು ಕಾರ್ಯಗಳು ನಮ್ಮ ಭವಿಷ್ಯವನ್ನು ಸೃಷ್ಟಿಸುತ್ತವೆ. ಈ ವಯಸ್ಸಿನಲ್ಲಿ ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇದೇ ನಿರ್ಧಾರಗಳು ನಮ್ಮ ಜೀವನವನ್ನು ಬಲಿಷ್ಠವಾಗಿ ರೂಪಿಸುತ್ತವೆ. ಅದೇ ರೀತಿ ಯೌವನದ ಹರೆಯದಲ್ಲಿ ನಾವು ಪಾಲಿಸುವ ಕೆಲವೊಂದು ಅಭ್ಯಾಸಗಳಿಂದ ನಾವು ದೀರ್ಘಕಾಲ ಆರೋಗ್ಯವಂತರಾಗಿ ಬದುಕಬಹುದು. 

ಯೌವನದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ಮುಂದಿನ ಜೀವನ ಸುಖಕರ
ಸಾಂದರ್ಭಿಕ ಚಿತ್ರ Image Credit source: pexels
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 12, 2023 | 5:48 PM

ಪ್ರತಿಯೊಬ್ಬರೂ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಬಯಸುತ್ತಾರೆ. ನೀವು ಚಿಕ್ಕವರಗಿದ್ದಾಗಲೇ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ  ವಯಸ್ಸಾದಾಗ ನೀವು ಹೆಚ್ಚು ಆರೋಗ್ಯವಂತರಾಗಿರುತ್ತೀರಿ. ಆರೋಗ್ಯಕರ ಅಭ್ಯಾಸಗಳು ಆರೋಗ್ಯಕರ ದೇಹದ ಅಡಿಪಾಯ. ಬಹಳಷ್ಟು ಯುವಕರು ಧೂಮಪಾನ ಮತ್ತು ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳಿಗೆ ದಾಸರಾಗುತ್ತಾರೆ. ಅವರ ಕೆಟ್ಟ ಅಭ್ಯಾಸಗಳ ಫಲಿತಾಂಶವು ವಯಸ್ಸಾದಾಗ ಅವರ ಯೋಗಕ್ಷೇಮ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಿದಾಗ ಅವರು  ತಮ್ಮ ತಪ್ಪುಗಳನ್ನು ಅರಿತುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಕಾಲ ಮಿಂಚಿಹೋಗಿರುತ್ತದೆ, ಅವರು ಅಂದುಕೊಂಡರೂ ತಮ್ಮ ಜೀವನವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಯೌವನ ಅಥವಾ 20ನೇ ಹರೆಯದಲ್ಲಿ ನೀವು ರೂಪಿಸುವ ಅಭ್ಯಾಸಗಳು ನಿಮ್ಮ ಜೀವನವನ್ನು ಸುಂದರವನ್ನಾಗಿ ರೂಪಿಸುವುದಲ್ಲದೆ, ಇದರಿಂದ ವಯಸ್ಸಾದಾಗಲೂ ನೀವು ಆರೋಗ್ಯವಂತರಾಗಿ ಬಾಳಬಹುದು.

ಯೌವನದಲ್ಲಿ ನೀವು ರೂಢಿಸಿಕೊಳ್ಳಬೇಕಾದ ಅಭ್ಯಾಸಗಳು:

ಮುಂಜಾನೆ ಬೇಗ ಎದ್ದೇಳಿ:

ಬೆಳಗ್ಗೆ ಬೇಗನೆ ಎದ್ದೇಳುವ ಅಭ್ಯಾಸವು ಅತ್ಯುತ್ತಮ ಅಭ್ಯಾಸಗಳಲ್ಲಿ ಒಂದಾಗಿದೆ. ಬೆಳಗ್ಗೆ ಬೇಗನೆ ಏಳುವುದರಿಂದ ನೀವು ಸಂಪೂರ್ಣವಾಗಿ ಉಲ್ಲಾಸವನ್ನು ಅನುಭವಿಸುತ್ತೀರಿ ಹಾಗೂ ಜಡತ್ವದ ಭಾವನೆ ಮೂಡುವುದಿಲ್ಲ. ಇದರಿಂದ ನೀವು ಬೆಳಗ್ಗೆ ಎದ್ದ ನಂತರ ನಿಮ್ಮ ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಬಹುದು. ಅದಾದ ನಂತರ ನೀವು ದಿನದ ಉಳಿದ ಕೆಲಸವನ್ನು ಮಾಡಲು ಪೂರ್ಣ ಸಮಯ ಪಡೆಯುತ್ತೀರಿ. ಆಗ ನಿಮಗೆ ಒತ್ತಡ ಎನ್ನುವಂತಹದ್ದು ಇರುವುದಿಲ್ಲ.

ದೈನಂದಿನ ವ್ಯಾಯಾಮ:

ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು, ನೀವು ನಿಮಗಾಗಿ ಸಮಯವನ್ನು ಮೀಸಲಿಡುವುದು ಮತ್ತು ಪ್ರತಿದಿನ ಸ್ವಲ್ಪ ಸಮಯದವರೆಗೆ ನಿಯಮಿತ ವ್ಯಾಯಾಮ ಮತ್ತು ಧ್ಯಾನ ಮಾಡುವುದು ಬಹಳ ಮುಖ್ಯ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಮತ್ತು ತೃಪ್ತಿ ಸಿಗುತ್ತದೆ. ಅಲ್ಲದೆ ನಿಯಮಿತ ವ್ಯಾಯಾಮವು ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ಬಲವಾದ ಮೂಳೆಗಳು ಮತ್ತು ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ವಾಕಿಂಗ್:

ನಡೆದಾಡುವುದು ವ್ಯಾಯಾಮಕ್ಕೆ ಸುಲಭವಾದ ಪರ್ಯಾಯವಾಗಿದೆ. ನೀವು ವ್ಯಾಯಾಮ ಮಾಡಲು ಇಷ್ಟಪಡದಿದ್ದರೆ, ನೀವು ಪ್ರತಿನಿತ್ಯ ವಾಕಿಂಗ್ ಮಾಡಿರಿ. ವಾಕಿಂಗ್ ಒಂದು ಸುಲಭವಾದ ವ್ಯಾಯಾಮವಾಗಿದ್ದು, ಅದು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನೀವು ಬೆಳಗ್ಗೆ ವಾಕಿಂಗ್ ಮಾಡಿದಾಗ ಸೂರ್ಯನ ಬೆಳಕು ನಿಮ್ಮ ಮೇಲೆ ಬೀಳುತ್ತದೆ ಅದು ನಿಮಗೆ ಅಗತ್ಯವಾದ ವಿಟಮಿನ್ ಡಿ ಪೋಷಕಾಂಶವನ್ನು ನೀಡುತ್ತದೆ. ಅಲ್ಲದೆ ನಡಿಗೆ ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ.

ಧನಾತ್ಮಕ ಚಿಂತನೆ:

ಸಕಾರಾತ್ಮಕ ಚಿಂತನೆಯು ನಿಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ. ಇದು ಎಲ್ಲಾ ಸಂದರ್ಭದಲ್ಲಿ ಧನಾತ್ಮಕವಾಗಿ ನೀವು ಉಳಿಯುವ ಸಾಮಾರ್ಥ್ಯವನ್ನು ನೀಡುತ್ತದೆ. ಸಕಾರಾತ್ಮಕ ಚಿಂತನೆಗಳನ್ನು ಅಭ್ಯಾಸ ಮಾಡುವುದರಿಂದ ನೀವು ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಪಡೆಯುತ್ತೀರಿ.  ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡಾಗ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಗುರಿಗಳನ್ನು ನೀವು ಪೂರೈಸಲು ಸಾಧ್ಯವಾಗುತ್ತದೆ.

ಗಮನವಿಟ್ಟು ತಿನ್ನುವುದು:

ಸಾಮಾನ್ಯವಾಗಿ ಮನೆ ಮತ್ತು ಕಛೇರಿಯ ಕೆಲಸವನ್ನು ಅತ್ಯಾತುರಗೊಳಿಸುವ ಸಲುವಾಗಿ ನಾವು ಬೇಗನೆ ಆಹಾರವನ್ನು ತಿನ್ನುತ್ತೇವೆ. ಇದರಿಂದ ನಾವು ಏನು ತಿಂದಿದ್ದೇವೆ ಮತ್ತು ದೇಹದ ಮೇಲೆ ಅದರ ಪರಿಣಾಮ ಏನೆಂಬುವುದೇ ತಿಳಿಯುವುದಿಲ್ಲ. ಹಾಗಾಗಿ ನೀವು ಆಹಾರವನ್ನು ಸೇವಿಸಿದಾಗಲೆಲ್ಲಾ ಎಚ್ಚರಿಕೆಯಿಂದ ತಿನ್ನಿರಿ ಮತ್ತು ಸಂಪೂರ್ಣವಾಗಿ ಅಗಿಯಿರಿ ಏಕೆಂದರೆ ಜಗಿಯದೆ ತಿನ್ನುವುದರಿಂದ ಬೊಜ್ಜು ಹೆಚ್ಚಾಗುತ್ತದೆ. ಮಾತ್ರವಲ್ಲದೆ ಹೊರಗಿನ ತಿನಿಸು ತಿನ್ನುವ ಬದಲು ಆರೋಗ್ಯಕ ಮನೆ ಊಟವನ್ನು ತಿನ್ನಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 5:45 pm, Sat, 12 August 23

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ