AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yoga For Stress Relief: ಪದೇ ಪದೇ ಒತ್ತಡಕ್ಕೆ ಒಳಗಾಗುತ್ತಿದ್ದೀರಾ? ಅದಕ್ಕೆ ಈ ಯೋಗಭಂಗಿಗಳು ಉತ್ತಮ

ದೈನಂದಿನ ಓಡಾಟ ಮತ್ತು ಕೆಲಸದ ಹೊರೆಯಿಂದಾಗಿ ಹೆಚ್ಚುತ್ತಿರುವ ಒತ್ತಡವು ನಮ್ಮ ಮನಸ್ಸು ಮತ್ತು ದೇಹ ಎರಡಕ್ಕೂ ಹಾನಿಯುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಡಿಕೊಳ್ಳಲು ಮೊದಲಿಗೆ ಮನಸ್ಸನ್ನು ಶಾಂತವಾಗಿರಿಸುವುದು ಅವಶ್ಯಕ. ಮನಸ್ಸನ್ನು ಶಾಂತವಾಗಿರಿಸಲು ಯೋಗ ಮತ್ತು ಧ್ಯಾನ ನಮಗೆ ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿನಿತ್ಯ ಈ ಕೆಲವು ಯೋಗಭಂಗಿಗಳನ್ನು ಅಭ್ಯಾಸ ಮಾಡುವ ಮೂಲಕ ಮನಸ್ಸಿನ ಒತ್ತಡವನ್ನು ನಿವಾರಿಸಿಕೊಳ್ಳಿ.

Yoga For Stress Relief: ಪದೇ ಪದೇ ಒತ್ತಡಕ್ಕೆ ಒಳಗಾಗುತ್ತಿದ್ದೀರಾ? ಅದಕ್ಕೆ ಈ ಯೋಗಭಂಗಿಗಳು ಉತ್ತಮ
ಸಾಂದರ್ಭಿಕ ಚಿತ್ರ Image Credit source: pexels
ಮಾಲಾಶ್ರೀ ಅಂಚನ್​
| Edited By: |

Updated on: Aug 12, 2023 | 6:12 PM

Share

ಇಂದಿನ ವೇಗದ ಬದುಕಿನಲ್ಲಿ ಒತ್ತಡ ಮತ್ತು ಆತಂಕವು ನಮ್ಮ ಜೀವನದ ಒಂದು ಭಾಗವಾಗಿದೆ. ಅದು ಮನೆಯಾಗಿರಲಿ ಅಥವಾ ಕಛೇರಿಯಾಗಿರಲಿ ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಒತ್ತಡಕ್ಕೆ ಬಲಿಯಾಗುತ್ತಾರೆ. ಈ ಒತ್ತಡವು ನಮ್ಮ ಮನಸ್ಸಿಗೆ ಮತ್ತು ದೇಹಕ್ಕೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಜನರು ಈ ಒತ್ತಡ ಮತ್ತು ಖಿನ್ನತೆಯನ್ನು ತೊಡೆದುಹಾಕಲು ಔಷಧಿಗಳನ್ನು ತಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ಅವುಗಳ ಅತಿಯಾದ ಸೇವನೆಯು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಕೆಲಸ ಅಥವಾ ಇನ್ನಾವುದೇ ಕಾರಣದಿಂದ ಆಯಾಸ ಮತ್ತು ಒತ್ತಡದ ಸಮಸ್ಯೆಗೆ ನೀವು ಒಳಗಾಗಿದ್ದರೆ, ಅದನ್ನು ತೊಡೆದುಹಾಕಲು ನಿಯಮಿತ ಯೋಗಾಭ್ಯಾಸವು ನಿಮಗೆ ಪ್ರಯೋಜನಕಾರಿಯಾಗಿದೆ. ಈ ಕೆಲವೊಂದು ಯೋಗಭಂಗಿಯ ಸಹಾಯದಿಂದ ಒತ್ತಡವನ್ನು ತೊಡೆದುಹಾಕಿ ನೆಮ್ಮದಿಯ ಜೀವನ ನಡೆಸಬಹುದು.

ಒತ್ತಡವನ್ನು ನಿವಾರಿಸಲು ಸಹಕಾರಿಯಾಗುವ ಯೋಗಭಂಗಿಗಳು:

ಸುಖಾಸನ:

ಒತ್ತಡವನ್ನು ನಿವಾರಿಸಲು ಸುಖಾನಸ ಬಹಳ ಪ್ರಯೋಜನಕಾರಿ. ಪ್ರತಿದಿನ ಕನಿಷ್ಠ ಹತ್ತು ನಿಮಿಷಗಳ ಕಾಲ ಸುಖಾಸನವನ್ನು ಮಾಡುವುದರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಇದಕ್ಕಾಗಿ ನಿಮ್ಮ ಬಲಗಾಲನ್ನು ಎಡ ಮೊಣಕಾಲಿನ ಕೆಳಗೆ ಮತ್ತು ಎಡಗಾಲನ್ನು ಬಲ ಮೊಣಕಾಲಿನ ಕೆಳಗೆ ಇರಿಸಿ ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಶಾಂತ ಸ್ಥಿತಿಯಲ್ಲಿ ದೇಹವನ್ನು ಸಡಿಲಗೊಳಿಸಿ. ಈ ಸಮಯದಲ್ಲಿ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ, ನಿಧಾನವಾಗಿ ಉಸಿರನ್ನು ಬಿಡಿ. ಹಾಗೂ ಉಸಿರಾಟದ ಸ್ಥಿತಿಯ ಮೇಲೆ ಗಮನವನ್ನು ಕೇಂದ್ರೀಕರಿಸಿ

ವೃಕ್ಷಾಸನ:

ವೃಕ್ಷಾಸನ ಮಾಡುವಾಗ ವ್ಯಕ್ತಿಯ ದೇಹವು ಮರದಂತೆ ನಿಲ್ಲುತ್ತದೆ. ಈ ಆಸನವನ್ನು ಮಾಡಲು ಎಡಗಾಲನ್ನು ಧೃಡವಾಗಿ ಇರಿಸಿ, ನಿಮ್ಮ ಬಲ ಮೊಣಕಾಲು ಬಗ್ಗಿಸಿ ಮತ್ತು ನಿಮ್ಮ ಬಲ ಪಾದವನ್ನು ನಿಮ್ಮ ಎಡ ತೊಡೆಯ ಮೇಲೆ ದೃಢವಾಗಿ ಇರಿಸಿ. ಮತ್ತು ಕೈಯನ್ನು ಮೇಲೆ ಚಾಚಿ ನಮಸ್ಕಾರ ಸ್ಥಿತಿಯಲ್ಲಿರಿಸಿ. ಈ ಯೋಗಾಸನವನ್ನು ಮಾಡುವುದರಿಂದ ದೇಹವನ್ನು ಸರಿದೂಗಿಸುವ ಶಕ್ತಿ ಹೆಚ್ಚುತ್ತದೆ. ಇದರಿಂದ ಮನಸ್ಸು ಶಾಂತವಾಗುವುದರೊಂದಿಗೆ ವ್ಯಕ್ತಿಯ ಏಕಾಗ್ರತೆ ಹೆಚ್ಚುತ್ತದೆ.

ಬಾಲಾಸನ:

ಬಾಲಾಸನ ಮಾಡುವಾಗ ವ್ಯಕ್ತಿಯ ದೇಹವು ಮಲಗಿರುವ ಮಗುವಿನಂತೆ ಇರುತ್ತದೆ. ಈ ಆಸನವನ್ನು ಮಾಡುವುದರಿಂದ ಭುಜ, ಬೆನ್ನು ಮತ್ತು ಕತ್ತಿನ ಒತ್ತಡ ದೂರವಾಗುತ್ತದೆ. ಹಾಗೂ ನರಮಂಡಲದ ಸುಧಾರಣೆಯೊಂದಿಗೆ ಮಾನಸಿಕ ಅಸ್ವಸ್ಥತೆಗಳಿಂದಲೂ ಪರಿಹಾರ ಸಿಗುತ್ತದೆ. ಈ ಆಸನವನ್ನು ಮಾಡಲು ಮಂಡಿಯೂರಿ ಕುಳಿತು, ನಿಮ್ಮ ತೊಡೆಗಳು ಎದೆಯನ್ನು ಸ್ಪರ್ಶಿಸುವಂತೆ ಸಂಪೂರ್ಣವಾಗಿ ಮುಂದಕ್ಕೆ ಬಾಗಿ ಹಾಗೂ ಕೈಗಳು ವಿಶ್ರಾಂತ ಸ್ಥಿತಿಯಲ್ಲಿರಲಿ.

ಇದನ್ನೂ ಓದಿ:  ಶ್ವಾಸಕೋಶದ ಕ್ಯಾನ್ಸರ್​​​ ಅಪಾಯ ತಡೆಗಟ್ಟುವ ಯೋಗ ಭಂಗಿಗಳು

ಮಕರಾಸನ:

ಮಕರಾಸನವನ್ನು ಮಾಡಲು ಮೊಸಲೆಯಂತೆ ಹೊಟ್ಟೆಯ ಮೇಲೆ ಮಲಗಬೇಕು ಮತ್ತು ತಲೆಯ ಬಳಿ ಎರಡು ಕೈಗಳನ್ನು ದಿಂಬಿನಂತೆ ಇಡಬೇಕು. ಈ ಆಸನವನ್ನು ಮಾಡುವಾಗ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ ಮತ್ತು ದೇಹದ ಎಲ್ಲಾ ಭಾಗಗಳನ್ನು ವಿಶ್ರಾಂತ ಸ್ಥಿತಿಯಲ್ಲಿಡಿ. ಈ ಆಸನದ ನಿಯಮಿತ ಅಭ್ಯಾಸವು ವ್ಯಕ್ತಿಯ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಚಡಪಡಿಕೆ ಖಿನ್ನತೆಯಿಂದ ಪರಿಹಾರ ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!