ಭಾರತವು ವೈವಿಧ್ಯತೆ ಸಾರುವ ದೇಶ. ಜನಾಂಗೀಯ, ಭಾಷಿಕ, ಪ್ರಾದೇಶಿಕ, ಆರ್ಥಿಕ, ಧಾರ್ಮಿಕ, ವರ್ಗ ಮತ್ತು ಜಾತಿ ಗುಂಪುಗಳು ಇತ್ಯಾದಿಗಳಲ್ಲಿ ಸಾಕಷ್ಟು ವೈವಿಧ್ಯತೆಗಳನ್ನು ಗಮನಿಸಲಾಗುತ್ತದೆ. ಹಾಗಾಗಿ ಪ್ರತಿ ತಿಂಗಳು ಕೂಡ ವಿವಿಧ ಹಬ್ಬ, ಆಚರಣೆಗಳು ಇದ್ದೇ ಇರುತ್ತವೆ ಅದೇ ರೀತಿ
ಮೇ ತಿಂಗಳು ಕೂಡ ಪ್ರಮುಖ ದಿನಗಳೊಂದಿಗೆ ಪ್ರಾರಂಭವಾಗುತ್ತಿದೆ. ಈ ತಿಂಗಳು ಉಪವಾಸ ಮತ್ತು ಆಚರಣೆಗಳಿಂದ ತುಂಬಿದೆ. ಅದರ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವವರಿಗೂ ಇದು ಉಪಯೋಗವಾಗಲಿದೆ.
ಮೇ ತಿಂಗಳಲ್ಲಿ ನೀವು ತಿಳಿದಿರಬೇಕಾದ ಹಲವಾರು ಘಟನೆಗಳಿವೆ. ಆದ್ದರಿಂದ, ಈ ತಿಂಗಳು ನಿಮ್ಮ ಆಚರಣೆಗಳನ್ನು ಉತ್ತಮವಾಗಿ ಯೋಜಿಸಲು ಸಹಾಯ ಮಾಡುವ ಮೇ ತಿಂಗಳ ಎಲ್ಲಾ ಪ್ರಮುಖ ದಿನಗಳ ಸಮಗ್ರ ಪಟ್ಟಿಯನ್ನು ನಾವು ಇಲ್ಲಿ ಹಂಚಿಕೊಂಡಿದ್ದೇವೆ.
ಮೇ 1
ಅಂತರಾಷ್ಟ್ರೀಯ ಕಾರ್ಮಿಕ ದಿನ.
ಮೋಹಿನಿ ಏಕಾದಶಿ.
ಮಹಾರಾಷ್ಟ್ರ ದಿನ.
ಗುಜರಾತ್ ದಿನ.
ತ್ರಿಶೂರ್ ಪೂರಂ.
ಮೇ 2 – ಪರಶುರಾಮ ದ್ವಾದಶಿ, ಅಂತರಾಷ್ಟ್ರೀಯ ಖಗೋಳ ದಿನ.
ಮೇ 3 -ಬುದ್ಧ ಪ್ರದೋಷ ವೃತ.
ಮೇ 4 – ನರಸಿಂಹ ಜಯಂತಿ, ವಿಶ್ವ ಅಸ್ತಮಾ ದಿನ.
ಮೇ 5 -ಕೂರ್ಮಾ ಜಯಂತಿ, ಬುದ್ಧ ಪೂರ್ಣಿಮಾ, ಮೇ 5 – ಚಿತ್ರಾ ಪೌರ್ಣಮಿ.
ಮೇ 6 – ನಾರದ ಜಯಂತಿ, ಜ್ಯೇಷ್ಠ ಮಾಸ ಆರಂಭ.
ಮೇ 7- ವಿಶ್ವ ಅಥ್ಲೆಟಿಕ್ಸ್ ದಿನ, ಮೇ 7 – ರವಿಂದ್ರನಾಥ್ ಟ್ಯಾಗೋರ್ ಜನ್ಮದಿನ, ಮೇ 7 -ವಿಶ್ವ ನಗೆ ದಿನ,
ಮೇ 8 – ವಿಶ್ವ ರೆಡ್ ಕ್ರಾಸ್ ದಿನ ಮತ್ತು ರೆಡ್ ಕ್ರೆಸಂಟ್ ದಿನ, ವಿಶ್ವ ಥಲಸೇಮಿಯಾ ದಿನ, ಸಂಕಷ್ಟ ಚತುರ್ಥಿ, ಮೇ 8 -ವಿಶ್ವ ರೆಡ್ ಕ್ರಾಸ್ ದಿನ
ಮೇ 9 – ವಿಶ್ವ ವಲಸೆ ಹಕ್ಕಿ ದಿನ, ಟ್ಯಾಗೋರ್ ಜಯಂತಿ (ಬಂಗಾಳ ಕ್ಯಾಲೆಂಡರ್ ಪ್ರಕಾರ).
ಮೇ 11 – ರಾಷ್ಟ್ರೀಯ ತಂತ್ರಜ್ಞಾನ ದಿನ.
ಮೇ 12 – ಅಂತರಾಷ್ಟ್ರೀಯ ದಾದಿಯರ ದಿನ, ಕಲಾಷ್ಟಮಿ.
ಮೇ 14 – ವಿಶ್ವ ತಾಯಂದಿರ ದಿನ, ಮೇ 15 – ಡೆಂಗ್ಯೂ ತಡೆಗಟ್ಟುವ ದಿನ.
ಮೇ 15 -ವೃಷಭ ಸಂಕ್ರಾಂತಿ.
ಮೇ 17 – ವಿಶ್ವ ಅಧಿಕ ರಕ್ತದೊತ್ತಡ ದಿನ, ವಿಶ್ವ ದೂರಸಂಪರ್ಕ ದಿನ, ವಿಶ್ವ ಮಾಹಿತಿ ಸಮಾಜದ ದಿನ, ಬುದ್ಧ ಪ್ರದೋಷ ವೃತ.
ಮೇ 18 – ವಿಶ್ವ ಏಡ್ಸ್ ಲಸಿಕೆ ದಿನ, ಅಂತರಾಷ್ಟ್ರೀಯ ವಸ್ತುಸಂಗ್ರಹಲಾಯ ದಿನ.
ಮೇ 19 – ವರ ಸಾವಿತ್ರಿ ವೃತ, ಶನಿ ಜಯಂತಿ.
ಮೇ 20 – ವಿಶ್ವ ಮಾಪನಶಾಸ್ತ್ರ ದಿನ, ವಿಶ್ವ ಜೇನುನೋಣ ದಿನ, ಚಂದ್ರ ದರ್ಶನ.
ಮೇ 21 – ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ, ರೋಹಿಣಿ ವೃತ.
ಮೇ 22 – ಜೈವಿಕ ವೈವಿಧ್ಯತೆ ಅಂತರಾಷ್ಟ್ರೀಯ ದಿನ.
ಮೇ 23 – ವಿಶ್ವ ಆಮೆ ದಿನ, ಮೇ 23 -ವಿನಾಯಕ ಚತುರ್ಥಿ.
ಮೇ 24 – ಕಾಮನ್‌ವೆಲ್ತ್ ದಿನ, ಸ್ಕಂದ ಷಷ್ಠಿ.
ಮೇ 28- ಧುಮಾವತಿ ಜಯಂತಿ, ಮಹಿಳಾ ಆರೋಗ್ಯಕ್ಕಾಗಿ ಅಂತರಾಷ್ಟ್ರೀಯ ಕ್ರಿಯೆಯ ದಿನ.
ಮೇ 29 – ವಿಶ್ವಸಂಸ್ಥೆಯ ಶಾಂತಿಪಾಲಕರ ಅಂತರಾಷ್ಟ್ರೀಯ ದಿನ. ಅಂತರಾಷ್ಟ್ರೀಯ ಮೌಂಟ್ ಎವರೆಸ್ಟ್ ದಿನ.
ಮೇ 31 – ವಿಶ್ವ ತಂಬಾಕು ವಿರೋದಿ ದಿನ, ನಿರ್ಜಲ ಏಕಾದಶಿ, ಗಾಯತ್ರಿ ಜಯಂತಿ.
ಸರಿಯಾದ ದಿನಾಂಕ ಮತ್ತು ದಿನಗಳ ಬಗ್ಗೆ ಗೊಂದಲವಿರುವ ಜನರು, ಈ ಲೇಖನವನ್ನು ಪರಿಶೀಲಿಸಬಹುದು ಮತ್ತು ತಿಂಗಳ ಎಲ್ಲಾ ಉಪವಾಸ ಮತ್ತು ಹಬ್ಬಗಳನ್ನು ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ದಿನಗಳ ಬಗ್ಗೆಯೂ ತಿಳಿದುಕೊಳ್ಳಬಹುದು.
ಜೀವನಶೈಲಿಯ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ