Men’s tips: ಮದುವೆಯ ಸೀಸನ್‌ನಲ್ಲಿ ಸ್ಟೈಲಿಶ್ ಆಗಿ ಕಾಣಲು ಸಹಾಯಕವಾಗುವ ಉಪಾಯಗಳು

| Updated By: Rakesh Nayak Manchi

Updated on: Nov 20, 2022 | 6:00 AM

ಮದುವೆಯ ಋತುವಿನಲ್ಲಿ ರಾತ್ರೋರಾತ್ರಿ ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುವ ಯಾವುದೇ ಮ್ಯಾಜಿಕ್ ಇಲ್ಲ. ಅದರೆ ಕಠಿಣ ಪರಿಶ್ರಮ ಇದ್ದರೆ ನೀವು ಸ್ಟೈಲಿಶ್ ಆಗಿ ಕಾಣಬಹುದು ಮಾರಾಯ್ರೆ.

Mens tips: ಮದುವೆಯ ಸೀಸನ್‌ನಲ್ಲಿ ಸ್ಟೈಲಿಶ್ ಆಗಿ ಕಾಣಲು ಸಹಾಯಕವಾಗುವ ಉಪಾಯಗಳು
ಮದುವೆಯ ಋತುವಿನಲ್ಲಿ ಪುರುಷರು ಸ್ಟೈಲಿಶ್ ಆಗಿ ಕಾಣಲು ಸಹಾಯಕವಾಗುವ ಉಪಾಯಗಳು
Follow us on

ಮೊದಲು ಮದುವೆಯ ಸೀಸನ್‌ (Wedding season)ಗೆ ವಧುವನ್ನು ಸಿದ್ಧಪಡಿಸಲು ಹೆಚ್ಚು ಒತ್ತು ನೀಡಲಾಗುತ್ತಿತ್ತು, ಆದರೆ ಬದಲಾದ ಈ ಕಾಲಘಟ್ಟದಲ್ಲಿ ಮಹಿಳೆಯರಂತೆ ಪುರುಷರು ಕೂಡ ತಮ್ಮನ್ನು ತಾವು ಸ್ಟೈಲಿಶ್ ಮತ್ತು ಗ್ಲೋಯಿಂಗ್ ಆಗಿ ತೋರಿಸಿಕೊಳ್ಳಲು ಹಲವು ಮಾರ್ಗಗಳನ್ನು ಪ್ರಯತ್ನಿಸುತ್ತಾರೆ. ವಾಸ್ತವವಾಗಿ ಹವಾಮಾನದಲ್ಲಿನ ಬದಲಾವಣೆ, ಮಾಲಿನ್ಯ ಮತ್ತು ಹಾಳಾದ ಜೀವನಶೈಲಿಯಿಂದಾಗಿ ಪ್ರತಿಯೊಬ್ಬರೂ ಮಂದ ಮತ್ತು ಸತ್ತ ಚರ್ಮದ ಅಪಾಯವನ್ನು ಎದುರಿಸುತ್ತಾರೆ. ಚರ್ಮದ ಆರೈಕೆಯ ಕೊರತೆಯಂತಹ ತಪ್ಪು ಕೂಡ ನಿಮ್ಮ ಅಂದವನ್ನು ಹಾಳುಮಾಡುತ್ತದೆ. ಇದು ಸಾರ್ವಜನಿಕ ಪ್ರದೇಶಗಳಲ್ಲಿ, ಸಮಾರಂಭಗಳಲ್ಲಿ ಮುಜುಗರ ಉಂಟುಮಾಡಬಹುದು. ಮದುವೆಯ ಋತುವಿನಲ್ಲಿ ನಿಮ್ಮನ್ನು ಸ್ಟೈಲಿಶ್ ಮಾಡಲು ಉತ್ತಮ ಮಾರ್ಗಗಳನ್ನು ನೀವು ಹುಡುಕುತ್ತಿರುವಿರಾ? ನಿಮಗೆ ಸಹಾಯ ಮಾಡುವ ಕೆಲವು ಸೌಂದರ್ಯ ಪರಿಹಾರಗಳು ಇಲ್ಲಿವೆ.

ಚರ್ಮದ ದಿನಚರಿ: ರಾತ್ರೋರಾತ್ರಿ ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುವ ಯಾವುದೇ ಮ್ಯಾಜಿಕ್ ಇಲ್ಲ. ಪ್ರತಿಯೊಂದು ಉತ್ತಮ ವಿಷಯಕ್ಕೂ ಕಠಿಣ ಪರಿಶ್ರಮ ಮತ್ತು ಸಮಯ ಬೇಕಾಗುತ್ತದೆ. ಅದೇ ರೀತಿ ಹೊಳೆಯುವ ತ್ವಚೆಗಾಗಿ ಆರೈಕೆಯ ಕ್ರಮವನ್ನು ಅಳವಡಿಸಿಕೊಳ್ಳುವುದು ಅಗತ್ಯ. ನೀವು ಮಾಡಬೇಕಾಗಿರುವುದು CTM ನಂತಹ ದಿನಚರಿಯನ್ನು ಅನುಸರಿಸುವುದು. ತ್ವಚೆಯ ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಅನ್ನು ಮಾಡಬೇಕು. ರಂಧ್ರಗಳ ಶುಚಿತ್ವದಿಂದಾಗಿ, ಕಪ್ಪು ಕಲೆಗಳು ಇರುವುದಿಲ್ಲ ಮತ್ತು ಚರ್ಮದ ದುರಸ್ತಿಯೂ ಸಾಧ್ಯವಾಗುತ್ತದೆ. ನೀವು ಈ ವಿಧಾನವನ್ನು ಎಲ್ಲಾ ಸಮಯದಲ್ಲೂ ಅನುಸರಿಸಬಹುದು.

ಕೂದಲಿನ ಆರೈಕೆ: ಅತ್ಯುತ್ತಮ ನೋಟವನ್ನು ಪಡೆಯಲು ಕೂದಲು ಸ್ಟೈಲಿಶ್ ಆಗಿ ಕಾಣುವುದು ಅವಶ್ಯಕ. ವಾಯು ಮಾಲಿನ್ಯ, ಕೊಳೆ ಮತ್ತಿತರ ಕಾರಣಗಳಿಂದ ಕೂದಲು ಒಣಗಿ ನಿರ್ಜೀವವಾಗಿ ಕಾಣುತ್ತದೆ. ಕೂದಲನ್ನು ಸರಿಪಡಿಸಲು ಮತ್ತು ಆರೋಗ್ಯಕರವಾಗಿರಲು ಅದರ ಆರೈಕೆಯನ್ನು ದಿನನಿತ್ಯ ಮಾಡಬೇಕು. ಮನೆಯಲ್ಲಿಯೂ ಕೂದಲಿನ ಆರೈಕೆ ಮಾಡುವುದರ ಜೊತೆಗೆ ಹೇರ್ ಸ್ಪಾಗೆ ಹೋಗಬೇಕು. ಹಾಗಾಗಿ ಮದುವೆ ಅಥವಾ ಪಾರ್ಟಿಗೆ ಹೋಗುವ ಮುನ್ನ ಉತ್ತಮ ರೇಟಿಂಗ್ ಇರುವ ಸೆಲೂನ್​ಗೆ ಹೋಗಿ ನಿಮ್ಮ ಕೂದಲಿಗೆ ಹೊಸ ಲುಕ್ ನೀಡಬಹುದು.

ಆಹಾರ ಪದ್ಧತಿ: ನಾವು ತಿನ್ನುವ ಆಹಾರದ ಮೇಲೆ ನಮ್ಮ ಆರೋಗ್ಯ ನಿಂತಿದೆ. ಆಹಾರವು ಸರಿಯಾದ ಪೌಷ್ಟಿಕ ಆಹಾರ ಸೇವನೆ ಮಾಡದಿದ್ದರೆ ಚರ್ಮದಲ್ಲಿ ತೇವಾಂಶದ ಕೊರತೆ ಮತ್ತು ಶುಷ್ಕತೆ ಅಥವಾ ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ. ಆಹಾರವನ್ನು ಸರಿಪಡಿಸಲು ಪ್ರತಿದಿನ ಹಸಿರು ತರಕಾರಿಗಳನ್ನು ತಿನ್ನಿರಿ ಮತ್ತು ಕನಿಷ್ಠ 3 ಲೀಟರ್ ನೀರನ್ನು ಕುಡಿಯಿರಿ. ನೀರು ನಿಮಗೆ ಎಲ್ಲಾ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.

ನಿಮ್ಮ ಗಮನವನ್ನು ಹೀಗೆ ಇರಿಸಿ: ಸಲೂನ್‌ಗೆ ಹೋಗುವ ಅಭ್ಯಾಸವನ್ನು ಮಾಡಿಕೊಳ್ಳಿ, ಏಕೆಂದರೆ ಈ ವಿಧಾನವು ನಿಮ್ಮನ್ನು ಹ್ಯಾಂಡ್​ಸಮ್ ಆಗಿ ಕಾಣುವಂತೆ ಮಾಡುತ್ತದೆ. ಹಸ್ತಾಲಂಕಾರ, ಪಾದೋಪಚಾರ, ಬಾಡಿ ಮಸಾಜ್, ಫೇಸ್ ಡಿಟಾಕ್ಸ್ ಥೆರಪಿ ಮತ್ತು ಕೂದಲ ರಕ್ಷಣೆಯ ಚಿಕಿತ್ಸೆಯ ವಿಧಾನಗಳು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ