ಪ್ರಪಂಚದಾದ್ಯಂತ ಮೈಗ್ರೇನ್ (Migraine) ಸಮಸ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಎಲ್ಲಾ ವಯಸ್ಸಿನ ಜನರು ಹೆಚ್ಚಾಗಿ ಮೈಗ್ರೇನ್‌ನಿಂದ ಬಳಲುತ್ತಿದ್ದಾರೆ. ಮೈಗ್ರೇನ್ ತೀವ್ರ ತಲೆನೋವು, ವಾಂತಿ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು. ಸಾಮಾನ್ಯವಾಗಿ ಜನರು ತಲೆನೋವು ಮತ್ತು ಮೈಗ್ರೇನ್ ಬಗ್ಗೆ ಗೊಂದಲಕ್ಕೊಳಗಾಗುವುದುಂಟು. ಹೆಚ್ಚಿನ ಸಂಖ್ಯೆಯ ಜನರು ಅದರ ಆರಂಭಿಕ ಲಕ್ಷಣಗಳನ್ನು ಗುರುತಿಸುವುದರಲ್ಲಿ ವಿಫಲರಾಗುತ್ತಾರೆ. ಇದರಿಂದಾಗಿ ಸಮಸ್ಯೆ ಗಂಭೀರವಾಗುತ್ತದೆ. ಮೈಗ್ರೇನ್ ಎಂದರೇನು, ಅದರ ಲಕ್ಷಣಗಳು, ಅದಕ್ಕೆ ಕಾರಣಗಳೇನು ಮತ್ತು ಅದರಿಂದ ಹೇಗೆ ಮುಕ್ತಿ ಹೊಂದಬೇಕು ಎನ್ನುವುದನ್ನು ಈ ಒಂದು ಲೇಖನದಿಂದ ತಿಳಿಯೋಣ.
ಮೈಗ್ರೇನ್ ಎಂದರೇನು:
ನರಶಸ್ತ್ರಚಿಕಿತ್ಸಕ ಡಾ. ಗೌರವ್ ಕೇಸರಿ ಅವರ ಪ್ರಕಾರ ಮೈಗ್ರೇನ್ ಒಂದು ರೀತಿಯ ತಲೆನೋವು ಎಂದು ಹೇಳುತ್ತಾರೆ. ಇದರಲ್ಲಿ ವ್ಯಕ್ತಿಯು ಇದ್ದಕ್ಕಿದ್ದಂತೆ ತೀವ್ರ ತಲೆನೋವು, ವಾಂತಿ ಮತ್ತು ಶಬ್ದ, ಪ್ರಕಾಶಮಾನವಾದ ಬೆಳಕಿನಿಂದ ತೊಂದರೆ ಅನುಭವಿಸುತ್ತಾನೆ. ಮೈಗ್ರೇನ್‌ನಲ್ಲಿ ಹಲವು ವಿಧಗಳಿವೆ, ಇದರಲ್ಲಿ ವಿವಿಧ ಲಕ್ಷಣಗಳು ಮತ್ತು ಸಮಸ್ಯೆಗಳು ಕಂಡುಬರುತ್ತವೆ. ಅನೇಕ ಬಾರಿ ಮೈಗ್ರೇನ್‌ನಿಂದ ಬಳಲುತ್ತಿರುವ ವ್ಯಕ್ತಿಯು ತೀವ್ರವಾದ ತಲೆನೋವಿನೊಂದಿಗೆ ದೇಹದ ಒಂದು ಭಾಗದಲ್ಲಿ ದೌರ್ಬಲ್ಯವನ್ನು ಅನುಭವಿಸುತ್ತಾನೆ. ಆದಾಗ್ಯೂ, ಕೆಲವು ಗಂಟೆಗಳ ನಂತರ ದೇಹದ ಸ್ಥಿತಿಯು ಸಾಮಾನ್ಯವಾಗುತ್ತದೆ. ನೀವು 2 ವಾರಗಳಿಗಿಂತ ಹೆಚ್ಚು ಕಾಲ ಈ ರೀತಿಯ ಸಮಸ್ಯೆಯನ್ನು ಹೊಂದಿದ್ದರೆ, ಅದು ಮೈಗ್ರೇನ್ ಆಗಿರಬಹುದು. ನೀವು ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸುವುದ ಒಳ್ಳೆದು.
ಸಮಸ್ಯೆ ಏನಾಗಬಹುದು:
ಪ್ರಸ್ತುತ ಯುವಜನರಲ್ಲಿ ಮೈಗ್ರೇನ್ ಸಮಸ್ಯೆ ತೀವ್ರವಾಗಿ ಹೆಚ್ಚುತ್ತಿದೆ ಎನ್ನುತ್ತಾರೆ ಡಾ.ಗೌರವ್ ಕೇಸರಿ. 18 ರಿಂದ 30 ವರ್ಷದೊಳಗಿನ ಉದ್ಯೋಗಸ್ಥ ಯುವಕರು ಇದರಿಂದ ಮುಕ್ತಿ ಹೊಂದಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯುವಕರ ನಿತ್ಯ ಜೀವನಶೈಲಿಯೇ ಮೈಗ್ರೇನ್‌ಗೆ ದೊಡ್ಡ ಕಾರಣವಾಗಿದ್ದು, ಅನೇಕ ಜನರು ತಡರಾತ್ರಿಯವರೆಗೂ ಎಚ್ಚರವಾಗಿರುವುದು, ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುವುದಾಗಿರಬಹುದು. ಇದರಿಂದ ಮೈಗ್ರೇನ್ ಸಮಸ್ಯೆಯೂ ಕಾಡಬಹುದು. ಮನೆಯಿಂದ ಕೆಲಸ ಮಾಡುವಾಗ ಮೈಗ್ರೇನ್ ಪ್ರಕರಣಗಳಲ್ಲಿ ತ್ವರಿತ ಹೆಚ್ಚಳ ಕೂಡ ಕಂಡುಬಂದಿದೆ.
ಮೈಗ್ರೇನ್‌ನಿಂದ ಮುಕ್ತಿ ಪಡೆಯುವುದು ಹೇಗೆ?
ಡಾ.ಕೇಸರಿ ಅವರು ಮೈಗ್ರೇನ್ ನಮ್ಮ ಜೀವನಶೈಲಿಯ ಕಾಯಿಲೆಯಾಗಿದ್ದು, ಅದರಿಂದ ಸುಲಭವಾಗಿ ಮುಕ್ತಿ ಹೊಂದಬಹುದು. ಮೊದಲನೆಯದಾಗಿ, ನೀವು ನಿಮ್ಮ ಜೀವನಶೈಲಿಯನ್ನು ಸುಧಾರಿಸಬೇಕು. ಮಲಗುವ ಸಮಯವನ್ನು ನಿಗದಿಪಡಿಸಬೇಕು. ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಒತ್ತಡವನ್ನು ಮಾಡಿಕೊಳ್ಳಬಾರದು. ಪ್ರತಿ 3 ರಿಂದ 4 ಗಂಟೆಗಳಿಗೊಮ್ಮೆ, ರಕ್ತದಲ್ಲಿನ ಗ್ಲೂಕೋಸ್ನ್ನು ಕಾಪಾಡಲು ಏನನ್ನಾದರೂ ತಿನ್ನಬೇಕು. ದೀರ್ಘಕಾಲದ ಉಪವಾಸವನ್ನು ತಪ್ಪಿಸಬೇಕು. ಜೊತೆಗೆ ಯೋಗ ಮಾಡಬೇಕು. ಇವುಗಳ ಬಗ್ಗೆ ಕಾಳಜಿ ವಹಿಸುವುದೇ ಆದರೆ ಮೈಗ್ರೇನ್ ಸಮಸ್ಯೆಯಿಂದ ಮುಕ್ತಿಹೊಂದಬಹುದು ಎಂದು ಅವರು ಹೇಳುತ್ತಾರೆ.
ಮೈಗ್ರೇನ್‌ಗೆ ಚಿಕಿತ್ಸೆ ಇದೆಯೇ?
ನರಶಸ್ತ್ರ ಚಿಕಿತ್ಸಕ ಡಾ.ಗೌರವ್ ಕೇಸರಿ ಅವರು ಮೈಗ್ರೇನ್ ಚಿಕಿತ್ಸೆಯ ಬಗ್ಗೆ ಹೇಳಿದ್ದು, ಮೈಗ್ರೇನ್ ಚಿಕಿತ್ಸೆಯನ್ನು ಔಷಧಿಗಳ ಮೂಲಕ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಆದರೆ ಪ್ರತಿಯೊಬ್ಬ ರೋಗಿಯ ಸ್ಥಿತಿಯು ವಿಭಿನ್ನವಾಗಿರುತ್ತದೆ. ಮೊದಲನೆಯದಾಗಿ, ಮೈಗ್ರೇನ್ನ್ನು ಗುರುತಿಸಲು ಎಲ್ಲಾ ಪರೀಕ್ಷೆಗಳನ್ನು ಮಾಡಲಾಗುತ್ತದೆ. ನಂತರ ರೋಗಲಕ್ಷಣಗಳಿಗೆ ಅನುಗುಣವಾಗಿ ಔಷಧವನ್ನು ನೀಡಲಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಚಿಕಿತ್ಸೆಯ ಕೋರ್ಸ್ ವಿಭಿನ್ನವಾಗಿರಬಹುದು ಎಂದು ಹೇಳುತ್ತಾರೆ.
ಇದನ್ನೂ ಓದಿ: Smartphone Tips: ಸ್ಮಾರ್ಟ್ಫೋನ್ ಸೇಲ್ ಮಾಡುವ ಪ್ಲಾನ್ ಇದೆಯೇ?: ಹಾಗಿದ್ರೆ ಇಲ್ಲಿ ಗಮನಿಸಿ