ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದೇ ದೊಡ್ಡ ಕೆಲಸ, ಬೇಗನೆ ಬಟ್ಟೆ ಒಣಗಿಸಲು ಈ ಸಲಹೆಗಳನ್ನು ಅನುಸರಿಸಿ ಸಾಕು!

|

Updated on: Jul 11, 2023 | 10:39 AM

dry clothes: ಮಳೆಗಾಲದಲ್ಲಿ ನಿಮ್ಮ ಬಟ್ಟೆಗಳನ್ನು ಬೇಗನೆ ಒಣಗಿಸಲು ಕೆಲವು ಸರಳ ತಂತ್ರಗಳನ್ನು ಬಳಸಬಹುದು. ಇದರಿಂದ ಸುಲಭವಾಗಿ ಬಟ್ಟೆಗಳನ್ನು ಒಣಗಿಸಬಹುದು. ಹೀಗೆ ಮಾಡುವುದರಿಂದ ಬಟ್ಟೆಯಿಂದ ವಾಸನೆಯೂ ಬರುವುದಿಲ್ಲ.

ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದೇ ದೊಡ್ಡ ಕೆಲಸ, ಬೇಗನೆ ಬಟ್ಟೆ ಒಣಗಿಸಲು ಈ ಸಲಹೆಗಳನ್ನು ಅನುಸರಿಸಿ ಸಾಕು!
ಬೇಗನೆ ಬಟ್ಟೆ ಒಣಗಿಸಲು ಈ ಸಲಹೆಗಳನ್ನು ಅನುಸರಿಸಿ ಸಾಕು!
Follow us on

ಮಳೆಗಾಲ (Rainy Season) ಶುರುವಾದರೆ.. ಎಲ್ಲಿ ನೋಡಿದರೂ ನೀರು. ಹವಾಮಾನವೂ ತುಂಬಾ ತಂಪಾಗಿದೆ. ಇದರಿಂದ ಮನೆಯಲ್ಲಿ ಬಟ್ಟೆ ಒಣಗಿಸುವುದು ದೊಡ್ಡ ಸಮಸ್ಯೆಯಾಗುತ್ತದೆ. ಶಾಲೆ, ಕಚೇರಿಗಳಿಗೆ ಹೋಗುವವರ ಬಟ್ಟೆ ಒಣಗಿಸುವುದೇ ದೊಡ್ಡ ಕೆಲಸವಾಗುತ್ತದೆ. ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಇಟ್ಟುಕೊಳ್ಳಲು ಮತ್ತು ಒಣಗಿಸಲು ಸಾಧ್ಯವಾಗದೆ ಮಹಿಳೆಯರು ತೊಂದರೆ ಎದುರಿಸುತ್ತಾರೆ. ಇದರಿಂದ ಮಳೆಗಾಲದಲ್ಲಿ ಮನೆ ತುಂಬಾ ಒಗೆದ, ಒದ್ದೆ ಬಟ್ಟೆಗಳೇ ನೇತಾಡುತ್ತಾ ಇರುತ್ತವೆ, ದಿನಗಳೇ ಕಳೆದರೂ ಬಟ್ಟೆ (Clothes) ಒಣಗುವುದಿಲ್ಲ. ಒದ್ದೆ ಬಟ್ಟೆಯನ್ನು ಹಾಗೆಯೇ ಧರಿಸಿದರೆ ವಾಸನೆ, ಚರ್ಮದ ತುರಿಕೆ, ಗಾಯ ಮತ್ತು ಅಲರ್ಜಿಯಂತಹ ಸಮಸ್ಯೆಗಳು ಅನಿವಾರ್ಯ. ಒಮ್ಮೊಮ್ಮೆ ಬಟ್ಟೆ ಒಣಗದಿದ್ದರೆ ವಾಸನೆಯೂ ಬರುತ್ತದೆ. ಅಂತಹ ವಾಸನೆಯನ್ನು ತೊಡೆದುಹಾಕಲು ಇನ್ನೂ ಕಷ್ಟ. ಆದರೆ ಹಳ್ಳಿಗಳಲ್ಲಿ ಕೆಲವರು ತಮ್ಮ ಬಟ್ಟೆಗಳನ್ನು ಸೌದೆ ಒಲೆಯ ಸುತ್ತ ನೇತುಹಾಕುತ್ತಾರೆ (Lifestyle). ಅನೇಕ ಸ್ಥಳಗಳಲ್ಲಿ ಡ್ರೈಯರ್ ಅಥವಾ ಸೌದೆ ಒಲೆಗಳಿಲ್ಲ. ಹಾಗಾಗಿ, ಕೆಲವು ಸರಳ ತಂತ್ರಗಳನ್ನು ಬಳಸುವುದರಿಂದ, ಸುಲಭವಾಗಿ ಬಟ್ಟೆಗಳನ್ನು ಒಣಗಿಸಬಹುದು. ಹೀಗೆ ಮಾಡುವುದರಿಂದ ಬಟ್ಟೆಯಿಂದ ವಾಸನೆ ಬರುವುದಿಲ್ಲ.

ಮಳೆಗಾಲದಲ್ಲಿ ನಿಮ್ಮ ಬಟ್ಟೆಗಳನ್ನು ಬೇಗನೆ ಒಣಗಿಸಲು ಹೀಗೆ ಮಾಡಿ:

* ಉಪ್ಪು ತೇವಾಂಶವನ್ನು ಹೀರಿಕೊಳ್ಳುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಮಾನ್ಸೂನ್ ಸಮಯದಲ್ಲಿ ನಿಮ್ಮ ಒಣಗಿಸುವ ಕೋಣೆಯಲ್ಲಿ ಸಮುದ್ರದ ಉಪ್ಪು ಅಥವಾ ಬೆಣಚುಕಲ್ಲುಗಳ ಚೀಲವನ್ನು ಇರಿಸಿ. ಉಪ್ಪು ಕೋಣೆಯಲ್ಲಿ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಕೋಣೆಯ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಇದರಿಂದ ಬಟ್ಟೆ ಬಹುಬೇಗ ಒಣಗುತ್ತದೆ.

• ನಾವು ಸಾಮಾನ್ಯವಾಗಿ ಬಟ್ಟೆಗಳನ್ನು ಒಣಗಿಸಲು ಮತ್ತು ಸಂಗ್ರಹಿಸಲು ಹ್ಯಾಂಗರ್ ಅನ್ನು ಬಳಸುತ್ತೇವೆ. ಮಳೆಗಾಲದಲ್ಲಿ ಬಟ್ಟೆಗಳನ್ನು ಒಣಗಿಸಲು ಈ ಹ್ಯಾಂಗರ್‌ಗಳು ತುಂಬಾ ಉಪಯುಕ್ತವಾಗಿವೆ. ಹವಾಮಾನ ತಂಪಾಗಿದ್ದರೂ, ಬಟ್ಟೆಗಳು ಗಾಳಿಯಲ್ಲಿ ನೇತಾಡುತ್ತಾ, ಗಾಳಿಗೆ ಆಡುತ್ತಾ ಬೇಗನೆ ಒಣಗಬಹುದು. ಹಾಗಾಗಿ ಮಳೆಗಾಲದಲ್ಲಿ ಹ್ಯಾಂಗರ್ ಬಳಸುವುದು ಉತ್ತಮ.

• ಬಟ್ಟೆಗಳನ್ನು ಬೇಗ ಒಣಗಿಸಲು ಡ್ರೈಯಿಂಗ್ ರೂಮಿನಲ್ಲಿ ಧೂಪವನ್ನು ಹಚ್ಚಿ.

• ಮಳೆಗಾಲದಲ್ಲಿ ಬಟ್ಟೆ ಒಗೆಯುವ ಯಂತ್ರದಲ್ಲಿ ಒಣಗಿಸಿ. ವೇಗವಾಗಿ ಒಣಗಲು ಗಾಳಿ ಇರುವ ಪ್ರದೇಶದಲ್ಲಿ ಬಟ್ಟೆಗಳನ್ನು ಒಣಗಿಸಿ.

• ಫ್ಯಾನ್ ಅಡಿಯಲ್ಲಿ ಸ್ವಲ್ಪ ಒದ್ದೆಯಾದ ಬಟ್ಟೆಗಳನ್ನು ಒಣಗಿಸುವುದು ಉತ್ತಮ.

ಮಳೆಗಾಲದಲ್ಲಿ ಬಟ್ಟೆ ಒಣಗಿಸದಿದ್ದರೆ ದುರ್ವಾಸನೆ ಬರುತ್ತದೆ. ಬಟ್ಟೆಯಿಂದ ಬರುವ ಇಂತಹ ವಾಸನೆಯಿಂದ ನಾವೂ ತೊಂದರೆ ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮಳೆಗಾಲದಲ್ಲಿ ಬಟ್ಟೆ ಸುಗಂಧಭರಿತವಾಗಿರಲು ಹಲವು ಬಗೆಯ ದ್ರವ್ಯ ಪದಾರ್ಥಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಕೆಲವರಿಗೆ ಇಂತಹ ದ್ರವದ ವಾಸನೆ ಇಷ್ಟವಾಗುವುದಿಲ್ಲ. ಬಟ್ಟೆಯಿಂದ ಕೆಟ್ಟ ವಾಸನೆಯನ್ನು ತೊಡೆದುಹಾಕಲು ಈ ಕೆಲವು ತಂತ್ರಗಳನ್ನು ಬಳಸಬಹುದು.

ವಿನೆಗರ್, ಅಡುಗೆ ಸೋಡಾ ಬಳಸಿ: ಅಡುಗೆಯಲ್ಲಿ ಬಳಸುವ ಅಡುಗೆ ಸೋಡಾದಿಂದ ಬಟ್ಟೆಯ ವಾಸನೆಯನ್ನು ಹೋಗಲಾಡಿಸಬಹುದು. ನಿಮ್ಮ ಡಿಟರ್ಜೆಂಟ್‌ನಿಂದ ಅಡುಗೆ ಸೋಡಾ ಮತ್ತು ವಿನೆಗರ್ ಮಿಶ್ರಣದಿಂದ ಬಟ್ಟೆ ಒಗೆಯಬಹುದು. ಇದರಿಂದ ಬಟ್ಟೆಗಳನ್ನು ತಾಜಾವಾಗಿರಿಸಬಹುದು.

ನಿಂಬೆ: ಡಿಟರ್ಜೆಂಟ್‌ಗೆ ನಿಂಬೆ ರಸವನ್ನು ಸೇರಿಸುವುದರಿಂದ ಬಟ್ಟೆ ಕೆಟ್ಟ ವಾಸನೆ ಬರದಂತೆ ನೋಡಿಕೊಳ್ಳಬಹುದು. ನಿಂಬೆ ರಸವು ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ಕರ್ಪೂರ: ಬಟ್ಟೆಯ ವಾಸನೆ ಹೋಗಲಾಡಿಸಲು ಮಳೆಗಾಲದಲ್ಲಿ ಬಟ್ಟೆಯ ನಡುವೆ ಕರ್ಪೂರವನ್ನು ಇಡಿ. ಬಟ್ಟೆಯನ್ನು ಒಣಗಿಸಿದ ಸಾಂಬ್ರಾಣಿ ಹೊಗೆಯು ಬಟ್ಟೆಯನ್ನು ಪರಿಮಳಯುಕ್ತವಾಗಿಸುತ್ತದೆ.

ವೋಡ್ಕಾ: ಹಾಗೆಯೇ ಖಾಲಿ ಸ್ಪ್ರೇ ಬಾಟಲಿಯಲ್ಲಿ ಕುಡಿಯುವ ವೋಡ್ಕಾವನ್ನು ಹಾಕಿ ಬಟ್ಟೆಯ ವಾಸನೆಯನ್ನು ಹೋಗಲಾಡಿಸಲು ಬಟ್ಟೆಯ ಸುತ್ತಲೂ ಸಿಂಪಡಿಸಿ.