ಮಳೆಗಾಲದಲ್ಲಿ ಸುರಿವ ಧೋ ಧೋ ಮಳೆ, ಶೀತಲ ಗಾಳಿಯೊಂದಿಗೆ ಬೆಚ್ಚಗೆ ಹೊದ್ದು ಪ್ರವಾಸಿ ತಾಣಗಳನ್ನು ವೀಕ್ಷಿಸುವುದು ಒಂದು ರೀತಿಯ ಮುದನೀಡುತ್ತದೆ. ಮೈತುಂಬ ನಳನಳಿಸುವ ಪ್ರಕೃತಿಯೊಂದಿಗೆ ಒಂದಾಗಲು ಹಲವು ಪ್ರವಾಸಿ ತಾಣಗಳು ಭಾರತದಲ್ಲಿವೆ. ಮಳೆಗಾಲ ಬಂತೆಂದರೆ ಸಾಕು ನಗರವೇ ಖಾಲಿ ಖಾಲಿ, ಕೆಲವರು ಫಾಲ್ಸ್ ನೋಡಲು, ಇನ್ನೂ ಕೆಲವರು ಹಿಮಾಲಯದೆಡೆಗೆ, ಇನ್ನೂ ಕೆಲವರು ತಮ್ಮ ಹಳ್ಳಿಗಳಿಗೆ ಪ್ರಯಾಣ ಬೆಳೆಸುತ್ತಾರೆ.
ಮಳೆಗಾಲವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಈ ಸಮಯದಲ್ಲಿ ಪ್ರವಾಸಕ್ಕೆ ಹೋಗುವುದೆಂದರೆ ಒಂದು ರೀತಿಯ ಮಜಾ.
ನೀರಿನಲ್ಲಿ ಆಟವಾಡುತ್ತಾರೆ, ಪ್ರಕೃತಿಯ ಸೌಂದರ್ಯ ಸವಿಯುತ್ತಾ ಹೋದರೆ ಸ್ವರ್ಗಕ್ಕೆ ಹೋದಂತಹ ಅನುಭವ. ಮಳೆಗಾಲದಲ್ಲಿ ಪ್ರವಾಸಕ್ಕೆ ತೆರಳುವುದು ಒಂದು ರೀತಿಯ ಥ್ರಿಲ್ಲಿಂಗ್ ಆಗಿದ್ದರೂ, ಕಷ್ಟ. ನೀವು ಮಳೆಗಾಲದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ.
ಹವಾಮಾನ ಬದಲಾವಣೆ ಬಗ್ಗೆ ಗಮನವಿರಲಿ
ನೀವು ಪ್ರವಾಸಕ್ಕೆ ಹೊರಡುವ ನಾಲ್ಕೈದು ದಿನಗಳ ಹಿಂದೆಯೇ ಹವಾಮಾನವನ್ನು ಚೆಕ್ ಮಾಡಿ, ಒಂದೊಮ್ಮೆ ಉತ್ತರಾಖಂಡ್, ಹಿಮಾಚಲಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದರೆ ಲ್ಯಾಂಡ್ಸ್ಲೈಡ್, ಮೇಘಸ್ಫೋಟ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಸೊಳ್ಳೆಬತ್ತಿ, ಪ್ರಥಮ ಚಿಕಿತ್ಸಾ ಪೆಟ್ಟಿಗೆ
ಮಳೆಗಾಲದಲ್ಲಿ ಸಾಮಾನ್ಯವಾಗಿ ಸೊಳ್ಳೆಗಳು ಹೆಚ್ಚಿರುತ್ತವೆ ಹೀಗಾಗಿ ಪ್ರವಾಸಕ್ಕೆ ತೆರಳುವವರಾಗಿದ್ದರೆ ಜತೆಗೆ ಸೊಳ್ಳೆಬತ್ತಿಯನ್ನು ನಿಮ್ಮ ಜತೆ ಇಟ್ಟುಕೊಂಡು ಪ್ರಯಾಣಿಸಿ. ಹಾಗೆಯೇ ಮಳೆಗಾಲವಾಗಿರುವುದರಿಂದ ಜಾರಿ ಬೀಳುವ ಸಾಧ್ಯತೆಯೂ ಹೆಚ್ಚಿರುವ ಕಾರಣ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಜತೆಯಲ್ಲಿಟ್ಟುಕೊಂಡಿರಿ.
ಸಿಂಥೆಟಿಕ್, ವಾಟರ್ಪ್ರೂಫ್ ಬಟ್ಟೆಗಳಿರಲಿ
ಮಳೆಗಾಲದಲ್ಲಿ ನೀವು ಪ್ರವಾಸಕ್ಕೆ ತೆರಳುವುದಾದರೆ ಸಿಂಥೆಟಿಕ್ ಹಾಗೂ ವಾಟರ್ಪ್ರೂಫ್ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ. ಹಾಗೆಯೇ ಈ ಬಟ್ಟೆಗಳು ಬೆಳಕು ಹಾಗೂ ಗಾಳಿಯಿಂದಲೇ ಬೇಗ ಒಣಗುತ್ತವೆ.
ಸ್ಟ್ರೀಟ್ ಫುಡ್ ಅವಾಯ್ಡ್ ಮಾಡಿ
ಮಳೆಗಾಲದಲ್ಲಿ ಸ್ಟ್ರೀಟ್ ಫುಡ್ ತಿನ್ನುವುದನ್ನು ಅವಾಯ್ಡ್ ಮಾಡಿ. ನೀರು ಕೂಡ ಕಲುಷಿತಗೊಂಡಿರುತ್ತದೆ. ಇದರಿಂದ ನೀವು ಬಹುದೊಡ್ಡ ಅಪಾಯಕ್ಕೆ ಸಿಲುಕುತ್ತೀರಿ. ಹಾಗಾಗಿ ನೀವೇ ಸಾಧ್ಯವಾದಷ್ಟು ನೀರನ್ನು ತೆಗೆದುಕೊಂಡು ಹೋಗಿ. ಒಂದೊಮ್ಮೆ ನೀವು ನೀರು ಬಳಕೆ ಮಾಡದಿದ್ದರೆ ಸರಿಯಾದ ರೀತಿಯಲ್ಲಿ ಮುಚ್ಚಿಡಿ.
ಮಳೆಗಾಲಕ್ಕೆ ಅಗತ್ಯವಾದ ವಸ್ತುಗಳು ನಿಮ್ಮ ಜತೆ ಇರಲಿ
ಛತ್ರಿ, ರೈನ್ಕೋಟ್ಸ್, ವಾಟರ್ಪ್ರೂಫ್ ಕವರ್, ಎಲೆಕ್ಟ್ರಾನಿಕ್ ಡಿವೈಸ್, ಔಷಧ, ಟವೆಲ್, ವಾಟರ್ಪ್ರೂಫ್ ಬ್ಯಾಕ್ಪ್ಯಾಕ್ಗಳನ್ನು ಇಟ್ಟುಕೊಂಡಿರಿ.
Published On - 12:01 pm, Sun, 26 June 22