ಪ್ರತಿದಿನ ಬೆಳಗ್ಗೆ ಈ 5 ಸುಲಭ ಯೋಗಾಸನಗಳನ್ನು ಮಾಡಿ, ಆರೋಗ್ಯಕರವಾಗಿರಿ

ಯೋಗ ದೇಹ ಮತ್ತು ಮನಸ್ಸಿಗೆ ಶಾಂತಿ ಮತ್ತು ವಿಶ್ರಾಂತಿಯನ್ನು ನೀಡುವ ಪರಿಪೂರ್ಣ ಆರೋಗ್ಯಕರ ಅಭ್ಯಾಸವಾಗಿದೆ. ನೀವೇನಾದರೂ ಫಿಟ್‌ ಮತ್ತು ಹೆಲ್ತಿಯಾಗಿರಲು ಬಯಿಸದರೆ, ಆರೋಗ್ಯಕರ ಆಹಾರ ಪದ್ಧತಿಯ ಜೊತೆ ಜೊತೆಗೆ ಬೆಳಗ್ಗೆ ಈ 5 ಯೋಗಾಸನಗಳನ್ನು ಅಭ್ಯಾಸ ಮಾಡಿ. ಈ ಯೋಗ ಭಂಗಿಗಳು ನಿಮ್ಮನ್ನು ಫಿಟ್‌ ಮತ್ತು ಆರೋಗ್ಯಕರವಾಗಿರಿಸುತ್ತದೆ. ಹಾಗಿದ್ರೆ ಆ ಸರಳ ಯೋಗ ಭಂಗಿಗಳು ಯಾವುವು ಎಂಬುದನ್ನು ನೋಡೋಣ.

ಪ್ರತಿದಿನ ಬೆಳಗ್ಗೆ ಈ 5 ಸುಲಭ ಯೋಗಾಸನಗಳನ್ನು ಮಾಡಿ, ಆರೋಗ್ಯಕರವಾಗಿರಿ
ಯೋಗಾಸನ
Image Credit source: Getty Images

Updated on: Aug 21, 2025 | 9:55 AM

ಈಗಿನ  ದಿನಗಳಲ್ಲಿ ಅನೇಕ ಜನರು ತಮ್ಮ ಆರೋಗ್ಯದ (Health) ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಫಿಟ್ ಮತ್ತು ಆರೋಗ್ಯವಾಗಿರಲು ಪ್ರತಿದಿನ ಆರೋಗ್ಯಕರ ಆಹಾರ ಪದ್ಧತಿಯ ಪಾಲನೆ, ಜಿಮ್ ಮತ್ತು ವ್ಯಾಯಾಮಗಳನ್ನು ಮಾಡುವುದರ ಕಡೆಗೆ ಗಮನ ಹರಿಸುತ್ತಿದ್ದಾರೆ. ಇವುಗಳ ಜೊತೆಗೆ ಪ್ರತಿನಿತ್ಯ ಯೋಗಾಭ್ಯಾಸಗಳನ್ನು (Yoga) ಮಾಡುವುದು ಕೂಡ ತುಂಬಾನೇ ಒಳ್ಳೆಯದು. ಏಕೆಂದರೆ ಇದು ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ನೀವು ಸಹ ಫಿಟ್‌ ಮತ್ತು ಹೆಲ್ತಿಯಾಗಿರಬೇಕು ಎಂದು ಬಯಸಿದ್ರೆ, ಪ್ರತಿದಿನ ಬೆಳಗ್ಗೆ ಈ ಐದು ಯೋಗಾಸನಗಳನ್ನು ಅಭ್ಯಾಸ ಮಾಡಿ. ಈ ಯೋಗಭಂಗಿಗಳು ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವುದಲ್ಲದೆ, ನಿಮ್ಮನ್ನು ದಿನವಿಡೀ ಸಕ್ರಿಯವಾಗಿರಿಸುತ್ತದೆ.

ಪ್ರತಿದಿನ ಬೆಳಗ್ಗೆ ಈ 5 ಯೋಗಾಸನಗಳನ್ನು ಅಭ್ಯಾಸ ಮಾಡಿ:

ಯೋಗ ಶಿಕ್ಷಕಿ ಕಲ್ಪನಾ ಬರ್ಮನ್‌ yoga_withkalpana ಅವರು ಈ ಸರಳ ಯೋಗಗಳೊಂದಿಗೆ ದಿನವನ್ನು ಆರಂಭಿಸಬೇಕು, ಇದು ಮನಸ್ಸನ್ನು ಉಲ್ಲಾಸಕರಗೊಳಿಸುವುದಲ್ಲದೆ, ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ ಎಂದು ಹೇಳಿದ್ದಾರೆ. ಆ ಯೋಗ ಭಂಗಿಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಇದನ್ನೂ ಓದಿ
ಬೆಳಗಿನ ಸಮಯದ ಈ ಅಭ್ಯಾಸಗಳು ನಿಮ್ಮ ಆರೋಗ್ಯವನ್ನೇ ಹಾಳುಮಾಡುತ್ತೆ
ಬೆಳಗ್ಗೆ 30 ನಿಮಿಷಗಳ ಕಾಲ ವಾಕಿಂಗ್‌ ಮಾಡಿದರೆ ಏನಾಗುತ್ತದೆ ಗೊತ್ತಾ?
ಬೆಳಗ್ಗೆ ಎದ್ದ ಬಳಿಕ ಈ ಕೆಲಸ ಮಾಡಿ, ಜೀವನದಲ್ಲಿ ಬದಲಾವಣೆಗಳಾಗುವುದು ಖಂಡಿತ
ಬೆಳಗ್ಗೆ, ಸಂಜೆ; ಯಾವ ಸಮಯದಲ್ಲಿ ವಾಕಿಂಗ್‌ ಮಾಡಿದರೆ ಉತ್ತಮ?

ಕ್ಯಾಟ್‌-ಕೌ ಸ್ಟ್ರೆಚ್:‌ ಈ ಆಸನವು ನಿಮ್ಮ ಬೆನ್ನುಮೂಳೆಗೆ ತುಂಬಾನೇ ಪ್ರಯೋಜನಕಾರಿ. ಇದು ಬೆನ್ನುಮೂಳೆಯ ಒತ್ತಡವನ್ನು ಕಡಿಮೆ ಮಾಡುತ್ತದೆ, ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಸೊಂಟ ಮತ್ತು ಕುತ್ತಿಗೆಯಲ್ಲಿನ ಒತ್ತಡವನ್ನು ಸಹ ನಿವಾರಿಸುತ್ತದೆ. ಬೆಳಿಗ್ಗೆ ಎದ್ದ ನಂತರ ನೀವು ಹಾಸಿಗೆಯ ಮೇಲೆಯೂ ಐದು ನಿಮಿಷಗಳ ಕಾಲ ಈ ಯೋಗಾಸನವನ್ನು ಮಾಡಬಹುದು.

ಪಪ್ಪಿ ಪೋಸ್:‌ ಈ ಆಸನವು ಭುಜಗಳಿಗೆ ಹಾಗೂ ಬೆನ್ನುಮೂಳೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಬೆನ್ನುಮೂಳೆ ಮತ್ತು ಭುಜವನ್ನು ಹಿಗ್ಗಿಸುತ್ತದೆ, ಬೆನ್ನು ನೋವನ್ನು ನಿವಾರಿಸುತ್ತದೆ. ಜೊತೆಗೆ ಈ ಆಸ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ವಿಡಿಯೋ ಇಲ್ಲಿದೆ ನೋಡಿ:

ಚಿಟ್ಟೆ ಭಂಗಿ ಯೋಗ: ಬಟರ್‌ಫೈ ಅಥವಾ ಚಿಟ್ಟೆ ಭಂಗಿ ಯೋಗ ವಿಶೇಷವಾಗಿ ಮಹಿಳೆಯರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಇದು ಸೊಂಟ ನೋವಿನಿಂದ ಪರಿಹಾರ, ಸೊಂಟದ ಭಾಗದ ಮಾಂಸಖಂಡಗಳ ಸದೃಢತೆಗೆ ನೆರವಾಗುವುದು ಮಾತ್ರವಲ್ಲದೆ, ಈ ಯೋಗಾಸನವನ್ನು ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ.

ಇದನ್ನೂ ಓದಿ: ಬೆಳಗಿನ ಸಮಯದ ಈ ಅಭ್ಯಾಸಗಳು ನಿಮ್ಮ ಆರೋಗ್ಯವನ್ನೇ ಹಾಳುಮಾಡುತ್ತೆ, ಎಚ್ಚರ

ಪವನ ಮುಕ್ತಾಸನ: ಪವನ ಮುಕ್ತಾಸನ ಕೂಡ ಯೋಗ ಭಂಗಿಗಳಲ್ಲಿ ಒಂದಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೆ ಈ ಯೋಗ ಭಂಗಿ ಸೊಂಟದ ಭಾಗದ ಒತ್ತಡವನ್ನು ಕಡಿಮೆ ಮಾಡುತ್ತದೆ, ಬೆನ್ನುಮೂಳೆಯನ್ನು ಬಲಪಡಿಸುತ್ತದೆ.

ಸ್ಪೈನಲ್‌ ಟ್ವಿಸ್ಟ್‌ ಭಂಗಿ: ಈ ಯೋಗ ಭಂಗಿಯು ಇದು ಬೆನ್ನುಮೂಳೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಒತ್ತಡ ನಿವಾರಿಸಲು, ನಿದ್ರೆಯ ಗುಣಮಟ್ಟವನ್ನು ಉತ್ತೇಜಿಸಲು ಸಹಕಾರಿಯಾಗಿದೆ.  ನಿಯಮಿತವಾಗಿ ಈ ಯೋಗಾಭ್ಯಾಸವನ್ನು ಮಾಡುವುದರಿಂದ  ಯಕೃತ್ತು, ಮೂತ್ರಪಿಂಡಗಳು ಆರೋಗ್ಯಕರವಾಗಿರುತ್ತದೆ. ಅಲ್ಲದೆ  ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಹ ಬಲಪಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ