Nail Care: ಉಗುರಿನ ಮೇಲೆ ಬಿಳಿ ಚುಕ್ಕೆ ಉಂಟಾಗಲು ಕಾರಣವೇನು?

ಉಗುರಿಗೆ ಏನಾದರೂ ತಗುಲಿ ಪೆಟ್ಟಾದರೆ ಈ ಬಿಳಿ ಚುಕ್ಕೆ ಮೂಡುತ್ತದೆ. ಬಿಳಿ ಚುಕ್ಕೆಗಳಿಗಿಂತಲೂ ಬಿಳಿ ಗೆರೆಗಳು ದೊಡ್ಡದಾಗಿರುತ್ತದೆ. ಇವು ಸಾಮಾನ್ಯವಾಗಿ ಯಕೃತ್ತಿನ ಕಾಯಿಲೆಯಂತಹ ದೇಹದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಸೂಚಕವಾಗಿದೆ.

Nail Care: ಉಗುರಿನ ಮೇಲೆ ಬಿಳಿ ಚುಕ್ಕೆ ಉಂಟಾಗಲು ಕಾರಣವೇನು?
ಉಗುರುಗಳು
Image Credit source: Aaj Tak

Updated on: Sep 11, 2023 | 5:42 PM

ಉಗುರುಗಳು ನಮ್ಮ ಆರೋಗ್ಯವನ್ನು ಪ್ರತಿಬಿಂಬಿಸುತ್ತವೆ. ಉಗುರುಗಳು (Nails) ಸೌಂದರ್ಯದ ಅಂಗವೂ ಹೌದು. ಈ ಉಗುರುಗಳ ಮೇಲೆ ಬಿಳಿ ಚುಕ್ಕೆಗಳು ಉಂಟಾದರೆ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಉಗುರುಗಳ ಮೇಲೆ ಬಿಳಿ ಚುಕ್ಕೆಗಳನ್ನು ಲ್ಯುಕೋನಿಚಿಯಾ ಎಂದು ಕರೆಯಲಾಗುತ್ತದೆ. ಇದು ನಮ್ಮ ಬೆರಳಿನ ಉಗುರುಗಳು ಅಥವಾ ಕಾಲ್ಬೆರಳ ಉಗುರುಗಳ ಮೇಲ್ಮೈಯಲ್ಲಿ ಕಂಡುಬರುತ್ತದೆ. ಈ ಕಲೆಗಳ ಗಾತ್ರ ಮತ್ತು ಆಕಾರದಲ್ಲಿ ಬದಲಾಗುತ್ತದೆ. ಈ ಬಿಳಿ ಚುಕ್ಕೆಗಳು (White Spots) ಏನನ್ನು ಸೂಚಿಸುತ್ತವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಉಗುರುಗಳ ಮೇಲಿನ ಬಿಳಿ ಚುಕ್ಕೆಗಳಲ್ಲಿ ಹಲವು ವಿಧಗಳಿವೆ. ಬಿಳಿ ಚುಕ್ಕೆಗಳು, ಬಿಳಿ ಮಾರ್ಕ್, ಬಿಳಿ ಗೆರೆಗಳು ಮತ್ತು ಬಿಳಿ ಚುಕ್ಕೆಗಳು ಸೇರಿದಂತೆ ವಿವಿಧ ರೂಪಗಳಲ್ಲಿ ಇದು ಪ್ರಕಟವಾಗಬಹುದು. ಶಿಲೀಂಧ್ರ ಅಥವಾ ಫಂಗಸ್​​ನಿಂದಲೂ ಉಗುರಿನಲ್ಲಿ ಬಿಳಿ ಬಣ್ಣದ ಚುಕ್ಕೆ ಅಥವಾ ಗೆರೆ ಮೂಡುತ್ತದೆ.

ಇದನ್ನೂ ಓದಿ: Ginger Juice: ಶುಂಠಿ ಜ್ಯೂಸ್​ನಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರ

ಬಿಳಿ ಚುಕ್ಕೆಗಳು ಉಗುರಿನ ಮೇಲೆ ಕಂಡುಬರುವ ಸಣ್ಣ, ಹಾಲಿನ ಬಿಳಿ ಬಣ್ಣದ ಚುಕ್ಕೆಗಳಾಗಿವೆ. ಇವುಗಳಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಉಗುರಿಗೆ ಏನಾದರೂ ತಗುಲಿ ಪೆಟ್ಟಾದರೆ ಈ ಬಿಳಿ ಚುಕ್ಕೆ ಮೂಡುತ್ತದೆ. ಬಿಳಿ ಚುಕ್ಕೆಗಳಿಗಿಂತಲೂ ಬಿಳಿ ಗೆರೆಗಳು ದೊಡ್ಡದಾಗಿರುತ್ತದೆ. ಇವು ಸಾಮಾನ್ಯವಾಗಿ ಯಕೃತ್ತಿನ ಕಾಯಿಲೆಯಂತಹ ದೇಹದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಸೂಚಕವಾಗಿದೆ.

ಯಕೃತ್ತಿನ ಕಾಯಿಲೆ, ಮೂತ್ರಪಿಂಡ ಕಾಯಿಲೆ, ಹೃದಯ ವೈಫಲ್ಯ, ಮಧುಮೇಹ, ತೀವ್ರ ಅಪೌಷ್ಟಿಕತೆ ಮತ್ತು ರಕ್ತಹೀನತೆ ಸೇರಿದಂತೆ ವಿವಿಧ ಕಾರಣಗಳಿಂದ ಉಗುರಿನಲ್ಲಿ ಬಿಳಿ ಬಣ್ಣ ಮೂಡುತ್ತದೆ. ಅದರಲ್ಲೂ ಸಾಮಾನ್ಯವಾಗಿ ಕಬ್ಬಿಣದ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: ದೇಹಕ್ಕೆ ಮಿನರಲ್ಸ್ ಯಾಕೆ ಅಗತ್ಯ? ಇಲ್ಲಿದೆ ಪೂರ್ತಿ ಮಾಹಿತಿ

ಉಗುರುಗಳ ಮೇಲಿನ ಬಿಳಿ ಚುಕ್ಕೆಗಳಿಗೂ ದೇಹದಲ್ಲಿ ವಿಟಮಿನ್ ಕೊರತೆಗೂ ಸಂಬಂಧವಿದೆ. ಸತು, ಕ್ಯಾಲ್ಸಿಯಂ ಅಥವಾ ವಿಟಮಿನ್ ಸಿ ಕೊರತೆಯಿದ್ದರೂ ಉಗುರುಗಳು ದುರ್ಬಲಗೊಂಡು, ಬಿಳಿ ಗುರುತು ಮೂಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Mon, 11 September 23

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us