
ಪಕ್ಷಿಗಳು (birds) ಸೃಷ್ಠಿಯ ಅದ್ಭುತಗಳಲ್ಲಿ ಒಂದು. ಪ್ರಕೃತಿಯ ಮಡಿಲಲ್ಲಿ ರೆಕ್ಕೆ ಬಿಚ್ಚಿ ಸ್ವಚ್ಛಂದವಾಗಿ ಹಾರಾಡುವ ಇವು ತಮ್ಮ ಚಿಲಿಪಿಲಿಯ ನಾದದಿಂದ ನಮ್ಮ ದಿನವನ್ನು ಬೆಳಗುತ್ತವೆ. ಮೊದಲೆಲ್ಲಾ ಮುಂಜಾನೆ ಎದ್ದ ತಕ್ಷಣವೇ ಪಕ್ಷಿಗಳ ಚಿಲಿಪಿಲಿಯ ನಾದ ಕಿವಿಗೆ ಕೇಳಸಿಗುತ್ತಿತ್ತು. ಆದರೆ ಇಂದು ಪಕ್ಷಿಗಳು ಕಾಣಸಿಗುವುದೇ ಅಪರೂಪವಾಗಿಬಿಟ್ಟಿದೆ. ಹೌದು ಕಾಡುಗಳ ನಾಶ, ನಗರೀಕರಣ, ಮೊಬೈಲ್ ಟವರ್‌ಗಳು ಇವೆಲ್ಲದರ ಕಾರಣದಿಂದ ಅದೆಷ್ಟೋ ಬಗೆಯ ಪಕ್ಷಿ ಪ್ರಬೇಧಗಳು ಅಳಿವಿನಂಚಿಗೆ ತಲುಪಿವೆ. ಬಾರ್ನ್ ಫ್ರೀ USA ವರದಿಯ ಪ್ರಕಾರ, ವಿಶ್ವದ ಸರಿಸುಮಾರು 10,000 ಪಕ್ಷಿ ಪ್ರಭೇದಗಳಲ್ಲಿ 12 ಪ್ರತಿಶತ ಪಕ್ಷಿ ಪ್ರಬೇಧಗಳು ಅಳಿವಿನ ಅಂಚಿನಲ್ಲಿವೆ. ಹಾಗಾಗಿ ಈ ಪರಿಸರ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಪಂಚದಾದ್ಯಂತ ಪಕ್ಷಿಗಳ ಸಂರಕ್ಷಣೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಪ್ರತಿವರ್ಷ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಬಾರ್ನ್ ಫ್ರೀ ಯುಎಸ್ಎ ಮತ್ತು ಏವಿಯನ್ ವೆಲ್ಫೇರ್ ಒಕ್ಕೂಟವು ಮೊದಲು 2002 ರಲ್ಲಿ ರಾಷ್ಟ್ರೀಯ ಪಕ್ಷಿ ದಿನವನ್ನು ಪ್ರಾರಂಭಿಸಿತು. ಇಂದು ರಾಷ್ಟ್ರೀಯ ಪಕ್ಷಿ ದಿನವನ್ನು ಅಮೆರಿಕ ಮಾತ್ರವಲ್ಲದೆ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಪ್ರಕೃತಿ ಪ್ರಿಯರು, ಪರಿಸರವಾದಿಗಳು, ಪಕ್ಷಿ ಪ್ರಿಯರು ಪಕ್ಷಿಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಬಹಳ ಉತ್ಸಾದಿಂದ ಆಚರಿಸುತ್ತಾರೆ.
ಇದನ್ನೂ ಓದಿ: ದೃಷ್ಟಿ ವಿಶೇಷ ಚೇತನರ ಬಾಳಿಗೆ ಬೆಳಕಾದ ಬ್ರೈಲ್ ಲಿಪಿ
ಇತ್ತೀಚಿನ ದಿನಗಳಲ್ಲಿ ಪಕ್ಷಿಗಳ ಸಂಖ್ಯೆ ಹಲವಾರು ಕಾರಣಗಳಿಂದ ಕ್ಷೀಣಿಸುತ್ತಿದೆ:
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ