AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ಬೆಂಕಿ ಕಾಯಿಸುವಾಗ ಈ ತಪ್ಪನ್ನು ಮಾಡಲೇಬೇಡಿ! ಉಪಯೋಗಕ್ಕಿಂತ ಅಪಾಯಕಾರಿಯಾಗಬಹುದು ಎಚ್ಚರ

ದೇಶದ ಹಲವು ರಾಜ್ಯಗಳಲ್ಲಿ ಪ್ರಸ್ತುತ ತೀವ್ರ ಚಳಿ ಇದೆ. ಬೆಚ್ಚಗಿರಲು ಜನರು ಬೆಂಕಿ ಮುಂದೆ ಕುಳಿತುಕೊಳ್ಳಲು ಇಷ್ಟ ಪಡುತ್ತಾರೆ, ಆದರೆ ಇದನ್ನು ಬಳಸುವಾಗ ಕೆಲವು ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಪ್ರಯೋಜನಕ್ಕಿಂತ ಇದರಿಂದ ಉಂಟಾಗುವ ಅಪಾಯವೇ ಹೆಚ್ಚಾಗಬಹುದು. ಹೌದು, ಈ ಬಗ್ಗೆ ಡಾ. ಸುಭಾಷ್ ಗಿರಿ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ತೀವ್ರ ಚಳಿಯಿಂದ ಮುಕ್ತಿ ಪಡೆಯಲು ಅಗ್ಗಿಷ್ಟಿಕೆ ಅಥವಾ ಅಂಗೀತಿಯ ಬಳಕೆ ಮಾಡುವ ಮೊದಲು ಅಥವಾ ಸೌದೆ ಒಲೆಗಳನ್ನು ಬಳಸುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಬೆಂಕಿ ಕಾಯಿಸುವಾಗ ಈ ತಪ್ಪನ್ನು ಮಾಡಲೇಬೇಡಿ! ಉಪಯೋಗಕ್ಕಿಂತ ಅಪಾಯಕಾರಿಯಾಗಬಹುದು ಎಚ್ಚರ
Winter Fire Safety
ಪ್ರೀತಿ ಭಟ್​, ಗುಣವಂತೆ
|

Updated on: Jan 05, 2026 | 5:45 PM

Share

ಪ್ರಸ್ತುತ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ತೀವ್ರ ಚಳಿ (Winter) ಇದ್ದು ಈ ವಾತಾವರಣದಲ್ಲಿ ದೇಹವನ್ನು ರಕ್ಷಿಸಿಕೊಳ್ಳಲು, ಜನರು ವಿವಿಧ ರೀತಿಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸಹಜ. ಅವುಗಳಲ್ಲಿ ಬೆಂಕಿ ಕಾಯಿಸುವುದು ಕೂಡ ಒಂದು. ಇದು ಹಳ್ಳಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸಣ್ಣ ಸಣ್ಣ ಮನೆಗಳಲ್ಲಿ, ಜನರು ಬೆಚ್ಚಗಿರಲು ಜೊತೆಗೆ ತೀವ್ರ ಚಳಿಯಿಂದ ಮುಕ್ತಿ ಪಡೆಯಲು ಅಗ್ಗಿಷ್ಟಿಕೆ (Brazier) ಅಥವಾ ಅಂಗೀತಿಯ ಬಳಕೆ ಮಾಡುತ್ತಾರೆ. ಆದರೆ ಶೀತದಿಂದ ಬೆಚ್ಚಗಿರಲು ಬಳಸುವ ಅಗ್ಗಿಷ್ಟಿಕೆ ಅಥವಾ ಮನೆಗಳಲ್ಲಿ ಸೌದೆ ಒಲೆಗಳನ್ನು ಸರಿಯಾಗಿ ಬಳಸದಿದ್ದರೆ ಆರೋಗ್ಯಕ್ಕೆ ಹಾನಿಯಾಗಬಹುದು. ಹೌದು ಇತ್ತೀಚಿನ ದಿನಗಳಲ್ಲಿ ಮನೆಯೊಳಗೆ ಬೆಂಕಿ ಒಟ್ಟಿಕೊಳ್ಳುವ ಸೌಲಭ್ಯ ಕಲ್ಪಿಸಿಕೊಂಡಿದ್ದು, ಮುಚ್ಚಿದ ಕೋಣೆಯಲ್ಲಿ ಉರಿಯುವ ಬೆಂಕಿಯ ಮುಂದೆ ಘಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಆದರೆ ಅದಕ್ಕೂ ಮೊದಲು ಈ ಅಭ್ಯಾಸದಿಂದ ಎಷ್ಟೆಲ್ಲಾ ಅಪಾಯವಿದೆ, ಬಳಸುವಾಗ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ.

ಅಗ್ಗಿಷ್ಟಿಕೆ ಅಥವಾ ಒಲೆಗಳಲ್ಲಿ ಸೌದೆ ಹಾಕಿ ಬೆಂಕಿ ಕಾಯಿಸುವುದರಿಂದ ಉಸಿರಾಟದ ತೊಂದರೆಗಳು, ಪ್ರಜ್ಞಾಹೀನತೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಸಾವಿಗೂ ಕಾರಣವಾಗಬಹುದು. ಇದು ಕೇಳುವುದಕ್ಕೆ ಬಹಳ ಆಶ್ಚರ್ಯ ಉಂಟುಮಾಡಬಹುದು ಆದರೆ ಇದು ಸತ್ಯ. ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಬ್ರೇಜಿಯರ್ ಅಥವಾ ಅಗ್ಗಿಷ್ಟಿಕೆಯನ್ನು ಯಾವಾಗಲೂ ಎಚ್ಚರಿಕೆಯಿಂದ ಬಳಸಬೇಕು. ಅದನ್ನು ಅಂಗಳ, ಮೇಲ್ಛಾವಣಿ ಅಥವಾ ಸಾಕಷ್ಟು ಗಾಳಿ ಇರುವ ಸ್ಥಳದಂತಹ ತೆರೆದ ಪ್ರದೇಶದಲ್ಲಿ ಇಡಬೇಕು. ಒಳಾಂಗಣದಲ್ಲಿ ಬ್ರೇಜಿಯರ್ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಅಷ್ಟು ಅಗತ್ಯವಿದ್ದರೆ, ಹೊಗೆ ಹೊರಬರಲು ಕಿಟಕಿ ಅಥವಾ ಬಾಗಿಲನ್ನು ಸ್ವಲ್ಪ ತೆರೆದಿಡಿ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್​​ ಶಾಕ್​​​​​: ಚಳಿಗಾಲದಲ್ಲಿ ಹೊರಗೆ ಹೋಗುವ ಮುನ್ನ ಎಚ್ಚರ

ಈ ತಪ್ಪನ್ನು ಮಾಡಬೇಡಿ;

ಮುಚ್ಚಿದ ಕೋಣೆಯಲ್ಲಿ ಒಲೆ ಇಟ್ಟು ಬೆಂಕಿ ಹಾಕುವುದರಿಂದ ಇಂಗಾಲದ ಮಾನಾಕ್ಸೈಡ್ ಉತ್ಪತ್ತಿಯಾಗುತ್ತದೆ. ಈ ಅನಿಲಕ್ಕೆ ಒಡ್ಡಿಕೊಳ್ಳುವುದರಿಂದ ತಲೆತಿರುಗುವಿಕೆ, ತಲೆನೋವು, ವಾಂತಿ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ. ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಪ್ರಜ್ಞಾಹೀನತೆ ಉಂಟಾಗುತ್ತದೆ ಮತ್ತು ಜೀವಕ್ಕೆ ಅಪಾಯವೂ ಉಂಟಾಗುತ್ತದೆ. ಜನರು ಬೆಚ್ಚಗಿರಲು ಮತ್ತು ರಾತ್ರಿ ನಿದ್ರೆ ಚೆನ್ನಾಗಿ ಬರಲು ಮಲಗುವ ಕೋಣೆಯ ಬಳಿ ಸಣ್ಣದಾಗಿ ಬೆಂಕಿ ಉರಿಯಲು ಬಿಟ್ಟಿಡುತ್ತಾರೆ ಆದರೆ ಇದು ಬಹಳ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ