AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ರಕ್ತದೊಡ್ಡ ಅಪಾಯ ಹೆಚ್ಚು; ಇಲ್ಲಿದೆ ಉಪಯುಕ್ತವಾಗಬಲ್ಲ ಕೆಲ ಯೋಗಾಸನಗಳು

Yogasanas to control High Blood Pressure during winter: ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು, ನೀವು ಬಾಬಾ ರಾಮದೇವ್ ಶಿಫಾರಸು ಮಾಡಿದ ಕೆಲ ಯೋಗಾಸನಗಳನ್ನು ಅಳವಡಿಸಿಕೊಳ್ಳಬಹುದು. ಯಾವುವು ಈ ಯೋಗಾಸನಗಳು, ಹಾಗೂ ಅವುಗಳಿಂದ ಯಾವ ರೀತಿಯ ಪ್ರಯೋಜನ ಆಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ...

ಚಳಿಗಾಲದಲ್ಲಿ ರಕ್ತದೊಡ್ಡ ಅಪಾಯ ಹೆಚ್ಚು; ಇಲ್ಲಿದೆ ಉಪಯುಕ್ತವಾಗಬಲ್ಲ ಕೆಲ ಯೋಗಾಸನಗಳು
ಬಾಬಾ ರಾಮದೇವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 04, 2026 | 7:27 PM

Share

ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (ಬಿಪಿ) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಚಳಿಗಾಲದಲ್ಲಿ ಈ ಸಮಸ್ಯೆ ವಿಶೇಷವಾಗಿ ಗಂಭೀರವಾಗುತ್ತದೆ. ಶೀತವು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದು ರಕ್ತದೊತ್ತಡ ಹೆಚ್ಚಿಸುತ್ತದೆ. ಹೈಬ್ಲಡ್ ಪ್ರೆಷರ್ ಸ್ಥಿತಿಯನ್ನು ದೀರ್ಘಕಾಲದವರೆಗೆ ನಿಯಂತ್ರಿಸದಿದ್ದರೆ, ಅದು ಹೃದಯ, ಮೂತ್ರಪಿಂಡಗಳು ಮತ್ತು ಮೆದುಳಿಗೆ ಹಾನಿಯನ್ನುಂಟುಮಾಡುತ್ತದೆ. ವೃದ್ಧರು, ಬೊಜ್ಜು ಹೊಂದಿರುವವರು ಮತ್ತು ಈಗಾಗಲೇ ಬಿಪಿ ಸಮಸ್ಯೆ ಹೊಂದಿರುವವರಿಗೆ ಈ ಚಳಿಗಾಲ ಹೆಚ್ಚಿನ ಅಪಾಯಕಾರಿಯಾಗಬಹುದು. ಆದ್ದರಿಂದ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ. ಯೋಗ ಆಸನಗಳು ದೇಹವನ್ನು ಸಕ್ರಿಯವಾಗಿಡುವುದಲ್ಲದೆ, ಒತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಬಾಬಾ ರಾಮದೇವ್ ಸೂಚಿಸಿದ ಯೋಗ ಆಸನಗಳು ನೈಸರ್ಗಿಕವಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿವೆ. ಚಳಿಗಾಲದಲ್ಲಿ ಹೈಬಿಪಿ ನಿಯಂತ್ರಿಸಲು ಯಾವ ಯೋಗಾಸನಗಳು ಪ್ರಯೋಜನಕಾರಿ ಎನ್ನುವ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಈ ಯೋಗಾಸನಗಳನ್ನು ಅನುಸರಿಸಿ

ಭುಜಂಗಾಸನ

ಭುಜಂಗಾಸನವು ಎದೆಯನ್ನು ಹಿಗ್ಗಿಸುತ್ತದೆ ಮತ್ತು ಶ್ವಾಸಕೋಶಗಳಿಗೆ ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ. ಚಳಿಗಾಲದಲ್ಲಿ, ಶೀತದಿಂದಾಗಿ ರಕ್ತನಾಳಗಳು ಸಂಕುಚಿತಗೊಂಡಾಗ, ಈ ಆಸನವು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡದ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ ಎಂದು ಬಾಬಾ ರಾಮದೇವ್ ಹೇಳುತ್ತಾರೆ.

ಇದನ್ನೂ ಓದಿ: ದೊಡ್ಡ ದೊಡ್ಡ ಕಂಪನಿಗಳಿಗಿಂತ ಹೆಚ್ಚು ಲಾಭ ತಂದುಕೊಟ್ಟಿರುವ ಪತಂಜಲಿ ಫುಡ್ಸ್ ಷೇರು

ಮಂಡೂಕಾಸನ

ಮಂಡೂಕಾಸನವು ಹೊಟ್ಟೆ ಮತ್ತು ನರಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಬಿಪಿ ಹೆಚ್ಚಲು ಕಾರಣವಾಗುವ ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡಲು ಈ ಮಂಡೂಕಾಸನ ನೆರವಾಗುತ್ತದೆ. ಈ ಆಸನವು ದೇಹಕ್ಕೆ ಅಗತ್ಯ ವಿಶ್ರಾಂತಿ ಕೂಡ ನೀಡುತ್ತದೆ.

ಶಶಾಂಕಾಸನ

ಶಶಾಂಕಾಸನವು ಮನಸ್ಸನ್ನು ಶಾಂತಗೊಳಿಸುವ ಯೋಗಾಸನವಾಗಿದೆ. ಚಳಿಗಾಲದಲ್ಲಿ ಒತ್ತಡ ಮತ್ತು ಮಾನಸಿಕ ಒತ್ತಡವು ಬಿಪಿ ಹೆಚ್ಚಲು ಕಾರಣವಾಗಿರುತ್ತವೆ. ಮಂಡೂಕಾಸನದ ರೀತಿ ಶಶಾಂಕಾಸನವೂ ಒತ್ತಡ ನಿವಾರಿಸಿ, ಮನಸ್ಸನ್ನು ಹಗುರಗೊಳಿಸುತ್ತದೆ. ಹೃದಯದ ಬಡಿತವನ್ನು ಸಹಜ ಸ್ಥಿತಿಗೆ ತಂದು ರಕ್ತದೊತ್ತಡ ಕಡಿಮೆ ಮಾಡಲು ನೆರವಾಗುತ್ತದೆ.

ಸ್ಥಿತ ಕೋನಾಸನ

ಸ್ಥಿತ ಕೋನಾಸನವು ದೇಹದ ಸಮತೋಲನ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ಹೃದಯ ಮತ್ತು ಸ್ನಾಯುಗಳನ್ನು ಸಕ್ರಿಯವಾಗಿರಿಸುತ್ತದೆ. ಚಳಿಗಾಲದಲ್ಲಿ ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳಗೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ನಿಯಮಿತ ಅಭ್ಯಾಸವು ದೇಹವನ್ನು ಬೆಚ್ಚಗಿಡುತ್ತದೆ ಮತ್ತು ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.

ಇದನ್ನೂ ಓದಿ: ಆಯುರ್ವೇದ ಬಳಸಿ, ದುಬಾರಿ ಚಿಕಿತ್ಸೆಗೆ ಮುಕ್ತಿ ಕೊಡಿ; ಕೈಗೆಟುಕುವ ಬೆಲೆಗೆ ಆನ್​ಲೈನ್​ನಲ್ಲೇ ಪತಂಜಲಿ ಔಷಧಗಳು

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಈ ಅಂಶಗಳನ್ನು ಗಮನಿಸಿ

  • ಉಪ್ಪು ಸೇವನೆ ಮಿತಿಗೊಳಿಸಿ.
  • ಪ್ರತಿದಿನ ಲಘು ವ್ಯಾಯಾಮ ಅಥವಾ ನಡಿಗೆ ಮಾಡಿ.
  • ಒತ್ತಡ ಮತ್ತು ಆತಂಕದಿಂದ ದೂರವಿರಿ.
  • ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಿ.
  • ಸಾಕಷ್ಟು ನಿದ್ರೆ ಪಡೆಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Sun, 4 January 26