ಮೊಟ್ಟೆ ತಿಂದ್ರೆ ಕೆಮ್ಮು ಕಡಿಮೆಯಾಗುತ್ತದೆಯೇ? ಇಲ್ಲಿದೆ ಅಚ್ಚರಿ ಮಾಹಿತಿ
ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳು ದೊರೆಯುತ್ತವೆ ಎಂಬುದು ತಿಳಿದ ವಿಚಾರ. ನಿಯಮಿತವಾಗಿ ಮೊಟ್ಟೆಗಳ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳಿವೆ. ಮೊಟ್ಟೆಯ ಬಿಳಿ ಭಾಗ ಪ್ರೋಟೀನ್ ಮತ್ತು ನೀರಿನಾಂಶ ಹೊಂದಿದ್ದು, ಹಳದಿ ಭಾಗವು ಪ್ರೋಟೀನ್, ಕೊಬ್ಬು, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿರುವ ಮೊಟ್ಟೆ ಕೆಮ್ಮು ಮತ್ತು ಶೀತಗಳಿಂದ ಮುಕ್ತಿ ನೀಡಲು ಸಹಾಯ ಮಾಡುತ್ತದೆಯೇ, ಇದು ಎಷ್ಟು ಸತ್ಯ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಯಮಿತವಾಗಿ ಮೊಟ್ಟೆಗಳ (Eggs) ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳಿವೆ. ಅದಕ್ಕಾಗಿಯೇ ಮೊಟ್ಟೆಗಳನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಬಾಯಿಯ ರುಚಿಯ ಜೊತೆಗೆ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಹ ನೀಡುತ್ತದೆ. ಮೊಟ್ಟೆಯ ಬಿಳಿ ಭಾಗವಾಗಿರಲಿ ಅಥವಾ ಹಳದಿ ಭಾಗವಾಗಿರಲಿ, ಇಡೀ ಮೊಟ್ಟೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮೊಟ್ಟೆಯ ಬಿಳಿ ಭಾಗ ಪ್ರೋಟೀನ್ ಮತ್ತು ನೀರಿನಾಂಶ ಹೊಂದಿದ್ದು, ಹಳದಿ ಭಾಗವು ಪ್ರೋಟೀನ್, ಕೊಬ್ಬು, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿರುವ ಮೊಟ್ಟೆ ಕೆಮ್ಮು (Cough) ಮತ್ತು ಶೀತಗಳಿಂದ ಮುಕ್ತಿ ನೀಡಲು ಸಹಾಯ ಮಾಡುತ್ತದೆಯೇ, ಇದು ಎಷ್ಟು ಸತ್ಯ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮೊಟ್ಟೆ ಕೆಮ್ಮು ಮತ್ತು ಶೀತಗಳಿಂದ ಪರಿಹಾರ ಪಡೆಯಲು ಪ್ರತ್ಯಕ್ಷವಾಗಿ ಸಹಾಯ ಮಾಡದಿದ್ದರೂ ಪರೋಕ್ಷವಾಗಿ ಮಾಡುತ್ತದೆ. ಮೊಟ್ಟೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕೆಮ್ಮನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತವೆ. ಮೊಟ್ಟೆಗಳಲ್ಲಿ ಪ್ರೋಟೀನ್ ಹೆಚ್ಚಿರುವುದರಿಂದ, ಅವು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ. ಕೆಮ್ಮು ಅಥವಾ ಶೀತದ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತವೆ. ಮೊಟ್ಟೆಗಳಲ್ಲಿ ವಿಟಮಿನ್ ಡಿ ಮತ್ತು ಬಿ 12 ಜೊತೆಗೆ ದೇಹಕ್ಕೆ ಅಗತ್ಯವಾದ ಇತರ ಪೋಷಕಾಂಶಗಳಿವೆ. ಅವು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಜೊತೆಗೆ ದೇಹವನ್ನು ನೈಸರ್ಗಿಕವಾಗಿ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾಗಿ ಅತಿಯಾಗಿ ಕೆಮ್ಮು ಬಂದಾಗ ಅಥವಾ ಶೀತವಾಗಿದ್ದಾಗ ಮೊಟ್ಟೆಗಳನ್ನು ತಿನ್ನುವುದು ಸುರಕ್ಷಿತ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಪದೇ ಪದೇ ಒಣ ಕೆಮ್ಮು ಬರುವುದಕ್ಕೆ ಈ ಮನೆಮದ್ದನ್ನು ಪ್ರಯತ್ನಿಸಿ
ಮೊಟ್ಟೆಗಳನ್ನು ತಿನ್ನುವಾಗ, ಗಂಟಲನ್ನು ತೇವವಾಗಿಡಲು ಮತ್ತು ಕೆಮ್ಮಿನಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಹೆಚ್ಚುವರಿಯಾಗಿ, ಅರಿಶಿನ, ಜೇನುತುಪ್ಪ, ನಿಂಬೆ ಅಥವಾ ತುಳಸಿ-ಜೇನುತುಪ್ಪದ ಮಿಶ್ರಣದೊಂದಿಗೆ ಬೆಚ್ಚಗಿನ ಹಾಲನ್ನು ಹಾಕಿ ಕುಡಿಯುವುದರಿಂದ ಕೆಮ್ಮಿನಿಂದ ಮತ್ತಷ್ಟು ಪರಿಹಾರ ಸಿಗುತ್ತದೆ. ಕೆಮ್ಮು ತೀವ್ರವಾಗಿದ್ದರೆ ಅಥವಾ ಜ್ವರ, ಉಸಿರಾಟದ ತೊಂದರೆ ಅಥವಾ ಇತರ ಗಂಭೀರ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




