ಪದೇ ಪದೇ ಒಣ ಕೆಮ್ಮು ಬರುವುದಕ್ಕೆ ಈ ಮನೆಮದ್ದನ್ನು ಪ್ರಯತ್ನಿಸಿ
ಒಣ ಕೆಮ್ಮಿಗೆ ಮನೆಮದ್ದುಗಳು: ಹವಾಮಾನ ಬದಲಾದಂತೆ ಒಣ ಕೆಮ್ಮು ಕಂಡುಬರುವುದು ಸಹಜ. ಈ ರೀತಿ ಬರುವ ಕೆಮ್ಮು ಗಂಟಲು ನೋವನ್ನು ಉಂಟು ಮಾಡುವುದಲ್ಲದೆ, ನಿದ್ರೆ ಮಾಡುವುದಕ್ಕೂ ಕೂಡ ತೊಂದರೆಯನ್ನು ಉಂಟುಮಾಡುತ್ತದೆ. ಇವುಗಳಿಗೆ ನಾನಾ ರೀತಿಯ ಔಷಧಗಳ ಸೇವನೆ ಮಾಡುವ ಬದಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ. ಇವು ಕೆಮ್ಮಿನಿಂದ ಸಂಪೂರ್ಣ ಪರಿಹಾರ ನೀಡುತ್ತವೆ. ಹಾಗಾದರೆ ರಾತ್ರಿ ಸಮಯದಲ್ಲಿ ಒಣ ಕೆಮ್ಮ ಬರುವುದಕ್ಕೆ ಕಾರಣಗಳು, ಅದರ ಲಕ್ಷಣಗಳು ಮತ್ತು ಅದನ್ನು ಹೇಗೆ ತಡೆಗಟ್ಟುವುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹವಾಮಾನ ಬದಲಾಗುತ್ತಿದ್ದಂತೆ, ಗಂಟಲು ನೋವು, ಶೀತ ಮತ್ತು ಒಣ ಕೆಮ್ಮಿನಂತಹ ಸಮಸ್ಯೆಗಳು ಬರುವುದು ಸಹಜ. ಅದರಲ್ಲಿಯೂ ಕೆಲವರಿಗೆ ಸಂಜೆಯಾಗುತ್ತಿದ್ದಂತೆ ಒಣ ಕೆಮ್ಮು (Dry Cough) ಬರಲು ಪ್ರಾರಂಭವಾಗುತ್ತದೆ. ಈ ರೀತಿ ಬರುವ ಕೆಮ್ಮು ಗಂಟಲು ನೋವನ್ನು ಉಂಟುಮಾಡುವುದಲ್ಲದೆ, ನಿದ್ರೆ ಮಾಡುವುದಕ್ಕೂ ಕೂಡ ತೊಂದರೆಯನ್ನು ಉಂಟುಮಾಡುತ್ತದೆ. ಹಾಗಾದರೆ ರಾತ್ರಿ ಸಮಯದಲ್ಲಿ ಒಣ ಕೆಮ್ಮ (Cough) ಬರುವುದಕ್ಕೆ ಕಾರಣಗಳು, ಅದರ ಲಕ್ಷಣಗಳು ಮತ್ತು ಅದನ್ನು ಹೇಗೆ ತಡೆಗಟ್ಟುವುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಒಣ ಕೆಮ್ಮಿಗೆ ಕಾರಣಗಳೇನು?
ಒಣ ಕೆಮ್ಮಿನಲ್ಲಿ, ಕಫ ಅಥವಾ ಲೋಳೆ ಉತ್ಪತ್ತಿಯಾಗುವುದಿಲ್ಲ. ಇದು ಗಂಟಲು ನೋವು, ಶುಷ್ಕತೆ, ನೋವು ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು.
- ಅಲರ್ಜಿ
- ಮೂಗಿನ ನಂತರದ ಹನಿ
- ಗ್ಯಾಸ್ಟ್ರೋಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ (GERD)
- ಅಸ್ತಮಾ
- ಧೂಮಪಾನ
- ಕೆಲವು ಔಷಧಿಗಳು
- ವೈರಲ್ ಸೋಂಕು
- ಕೆಲವು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳು
ಇದನ್ನೂ ಓದಿ: ಇದನ್ನೂ ಓದಿ: ಕೆಮ್ಮು, ಕಫಕ್ಕೆ ಅಜ್ಜಿ ಮಾಡುವ ಈ ಮನೆಮದ್ದನ್ನು ನೀವೂ ಟ್ರೈ ಮಾಡಿ, ಕ್ಷಣದಲ್ಲಿ ಪರಿಹಾರ ಕಂಡುಕೊಳ್ಳಿ
ಒಣ ಕೆಮ್ಮಿಗೆ ಮನೆಮದ್ದುಗಳು
- ಒಣ ಕೆಮ್ಮನ್ನು ತಡೆಗಟ್ಟಲು, ಚೆನ್ನಾಗಿ ನೀರು ಕುಡಿಯಿರಿ. ಅದರ ಜೊತೆಗೆ ಗಿಡಮೂಲಿಕೆ ಚಹಾ, ಸೂಪ್, ಚಹಾ, ಹಣ್ಣಿನ ರಸ, ಬೆಚ್ಚಗಿನ ನೀರು ಸಹ ಒಣ ಕೆಮ್ಮಿನ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
- ಜೇನುತುಪ್ಪ ಮತ್ತು ನಿಂಬೆಹಣ್ಣು ಒಣ ಕೆಮ್ಮಿಗೆ ಒಳ್ಳೆಯದು. ಜೇನುತುಪ್ಪದಲ್ಲಿರುವ ಉತ್ಕರ್ಷಣ ನಿರೋಧಕಗಳು ಒಣ ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿ ಕಂಡುಬರುವ ವಿಟಮಿನ್ ಸಿ ಸಹ ಪ್ರಯೋಜನಕಾರಿ. ಇವೆರಡು ಗಂಟಲು ನೋವಿನ ಶಮನಕ್ಕೆ ಪ್ರಯೋಜನಕಾರಿಯಾಗಿದೆ. ಎರಡು ಚಮಚ ನಿಂಬೆ ರಸಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಬಹುದು. ಇದು ಗಂಟಲು ನೋವಿಗೆ ಪರಿಹಾರ ನೀಡುತ್ತದೆ.
- ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಜೇನುತುಪ್ಪ ಅಥವಾ ನಿಂಬೆ ರಸದ ಜೊತೆಗೆ ಒಂದು ಕಪ್ ಬಿಸಿ ನೀರಿಗೆ 20- 30 ಗ್ರಾಂ ತುರಿದ ಶುಂಠಿಯನ್ನು ಸೇರಿಸಿ ನೀವು ಚಹಾ ತಯಾರಿಸಬಹುದು. ಈ ಚಹಾ ಕೆಮ್ಮನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
- ದಾಳಿಂಬೆ ಸಿಪ್ಪೆಯನ್ನು ತಿನ್ನುವುದು ಆರೋಗ್ಯಕ್ಕೂ ಪ್ರಯೋಜನಕಾರಿ. ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಬೆಚ್ಚಗಿನ ನೀರಿನ ಜೊತೆಗೆ ಕುದಿಸಿ ಕುಡಿಯುವುದರಿಂದ ಬಿಕ್ಕಳಿಕೆಗೆ ಮತ್ತು ಒಣ ಕೆಮ್ಮಿಗೆ ಪರಿಹಾರ ಸಿಗುತ್ತದೆ.
- ನಾಲ್ಕರಿಂದ ಐದು ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಂಡು ಗಂಟೆಗಳ ಕಾಲ ಅಗಿಯುವುದರಿಂದ ಒಣ ಕೆಮ್ಮಿನಿಂದ ತಕ್ಷಣ ಪರಿಹಾರ ಸಿಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




