ಸ್ಟಾರ್ ಫ್ರೂಟ್ ಸೇವನೆ ಮಾಡುವುದರಿಂದ ಕಣ್ಣುಗಳಲ್ಲಿ ಪೊರೆ ಬರುವುದನ್ನು ತಡೆಯಬಹುದೇ!
ಸ್ಟಾರ್ ಫ್ರೂಟ್ ಬಗ್ಗೆ ನೀವು ಕೇಳಿರಬಹುದು ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಈ ಹಣ್ಣನ್ನು ಧಾರೆಹುಳಿ (Star Fruit), ಕರಂಬಳ ಹಣ್ಣು, ಕರಂಬೋಲಾ, ಕರಬಲ, ಕರಿಮಾದಲ, ಕಮರದ್ರಾಕ್ಷಿ, ನಕ್ಷತ್ರ ಹುಳಿ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಇದರ ರುಚಿ ಕೂಡ ಅದ್ಭುತವಾಗಿದ್ದು ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿಯಾಗಿದೆ. ಹಾಗಾದರೆ ಈ ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ, ಯಾವ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಮಾರುಕಟ್ಟೆಗೆ ಹಲವು ರೀತಿಯ ಹಣ್ಣುಗಳು (Fruit) ಬರುತ್ತದೆ. ಅಂತಹ ಹಣ್ಣುಗಳಲ್ಲಿ ನಕ್ಷತ್ರ ಹಣ್ಣು ಅಥವಾ ಸ್ಟಾರ್ ಫ್ರೂಟ್ ಕೂಡ ಒಂದು. ಇದನ್ನು ಧಾರೆಹುಳಿ (Star Fruit), ಕರಂಬಳ ಹಣ್ಣು, ಕರಂಬೋಲಾ, ಕರಬಲ, ಕರಿಮಾದಲ, ಕಮರದ್ರಾಕ್ಷಿ, ನಕ್ಷತ್ರ ಹುಳಿ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಇದು ಆಕ್ಷೀಡೇಸಿಯೇ ಕುಟುಂಬಕ್ಕೆ ಸೇರಿದ ಈ ಹಣ್ಣಿನ ವೈಜ್ಞಾನಿಕ ಹೆಸರು “ಅವೆರೋ ಕ್ಯಾರಂಬೋಲ” (Averrhoa carambola). ನಕ್ಷತ್ರ ಹಣ್ಣಿನ ಬಗ್ಗೆ ನೀವೂ ಕೂಡ ಕೇಳಿರಬಹುದು. ಇದರ ರುಚಿ ಕೂಡ ಅದ್ಭುತವಾಗಿದ್ದು ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿಯಾಗಿದೆ. ಈ ನಕ್ಷತ್ರ ಕಣ್ಣಿನಲ್ಲಿ ಕ್ಯಾಲೊರಿ ಅಂಶ ಕಡಿಮೆ ಇದ್ದು ಫೈಬರ್ ಹೆಚ್ಚಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಹಾಗಾದರೆ ಈ ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ, ಯಾವ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸ್ಟಾರ್ ಫ್ರೂಟ್ ಆರೋಗ್ಯ ಪ್ರಯೋಜನ:
ಸ್ಟಾರ್ ಫ್ರೂಟ್‌ನಲ್ಲಿರುವ ವಿಟಮಿನ್ ಬಿ6 ಇದ್ದು ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಕ್ಯಾಲೊರಿಗಳು ಬೇಗನೆ ಕರಗುತ್ತವೆ ಮತ್ತು ಕೊಬ್ಬು ಕಡಿಮೆಯಾಗುತ್ತದೆ. ಸ್ಟಾರ್ ಫ್ರೂಟ್‌ನಲ್ಲಿ ವಿಟಮಿನ್ ಸಿ ಕೂಡ ಅಧಿಕವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲ, ಋತುಮಾನದ ಕಾಯಿಲೆಗಳನ್ನು ನಿವಾರಿಸಲು ಕೂಡ ಸಹಾಯ ಮಾಡುತ್ತದೆ ಮತ್ತು ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಈ ಹಣ್ಣುಗಳಲ್ಲಿರುವ ವಿಟಮಿನ್ ಸಿ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಚರ್ಮವು ಒಡೆಯುವುದನ್ನು ತಡೆಯುತ್ತದೆ. ಸುಮಾರು 100 ಗ್ರಾಂ ಸ್ಟಾರ್ ಫ್ರೂಟ್‌ನಲ್ಲಿ ಸುಮಾರು 2.8 ಗ್ರಾಂ ಫೈಬರ್ ಇರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಅನಿಲ ಮತ್ತು ಆಮ್ಲೀಯತೆಯಿಂದ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: 21 ದಿನ ಒಂದು ಕಪ್ ದಾಳಿಂಬೆ ಹಣ್ಣನ್ನು ತಿನ್ನುವ ಚಾಲೆಂಜ್: ಸಂಶೋಧನೆಯಿಂದ ಆಶ್ಚರ್ಯಕಾರಿ ಮಾಹಿತಿ ಬಹಿರಂಗ
ನರಮಂಡಲವೂ ಸುಧಾರಿಸುತ್ತದೆ ಮತ್ತು ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ. ಕುತ್ತಿಗೆ ಮತ್ತು ಭುಜದ ನೋವಿನಿಂದ ಪರಿಹಾರ ಸಿಗುತ್ತದೆ. ಸ್ಟಾರ್‌ಫ್ರೂಟ್ ವಿಟಮಿನ್ ಎ ಯಲ್ಲಿಯೂ ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಇದು ಕಣ್ಣುಗಳನ್ನು ರಕ್ಷಿಸುತ್ತದೆ.ಅಷ್ಟೇ ಅಲ್ಲ, ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಈ ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣುಗಳಲ್ಲಿ ಪೊರೆ ಬರುವುದನ್ನು ತಡೆಯುತ್ತದೆ. ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ6 ಮೆದುಳಿನ ಕಾರ್ಯವನ್ನು ಹೆಚ್ಚಿಸಿ, ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




