AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಯುರ್ವೇದ ಬಳಸಿ, ದುಬಾರಿ ಚಿಕಿತ್ಸೆಗೆ ಮುಕ್ತಿ ಕೊಡಿ; ಕೈಗೆಟುಕುವ ಬೆಲೆಗೆ ಆನ್​ಲೈನ್​ನಲ್ಲೇ ಪತಂಜಲಿ ಔಷಧಗಳು

Patanjali medicines available online, check this: ಇಂಗ್ಲೀಷ್ ಮೆಡಿಸಿನ್​ಗಳು ದುಬಾರಿಯಾಗಿದ್ದು, ಜನರ ಜೇಬಿಗೆ ಸಿಕ್ಕಾಪಟ್ಟೆ ಕತ್ತರಿ ಹಾಕುತ್ತವೆ. ಇದರಿಂದಾಗಿ ಜನರು ಆಯುರ್ವೇದದ ಮೊರೆ ಹೋಗುತ್ತಿದ್ದಾರೆ. ಆಯುರ್ವೇದ ಔಷಧ ವಿಷಯಕ್ಕೆ ಬಂದರೆ ಪತಂಜಲಿ ಹೆಸರು ಮೊದಲು ಬರುತ್ತದೆ. ಜನರಿಗೆ ಹೊರೆಯಾಗದ, ಅಗ್ಗದ ದರದಲ್ಲಿ, ವಿವಿಧ ರಿಯಾಯಿತಿಗಳನ್ನೂ ಹೊಂದಿರುವ ಆಯುರ್ವೇದ ಔಷಧಗಳು ಪತಂಜಲಿಯಲ್ಲಿ ಲಭ್ಯ. ಆನ್​ಲೈನ್​ನಲ್ಲೇ ಔಷಧಕ್ಕೆ ಆರ್ಡರ್ ಮಾಡಿ ತರಿಸಿಕೊಳ್ಳಬಹುದು.

ಆಯುರ್ವೇದ ಬಳಸಿ, ದುಬಾರಿ ಚಿಕಿತ್ಸೆಗೆ ಮುಕ್ತಿ ಕೊಡಿ; ಕೈಗೆಟುಕುವ ಬೆಲೆಗೆ ಆನ್​ಲೈನ್​ನಲ್ಲೇ ಪತಂಜಲಿ ಔಷಧಗಳು
ಪತಂಜಲಿ ಆಯುರ್ವೇದ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 23, 2025 | 8:12 PM

Share

ಮೊದಲು ಅನಾರೋಗ್ಯ ಮತ್ತು ನಂತರ ಅದನ್ನು ಸರಿಪಡಿಸಲೆಂದು ಪ್ರತಿ ತಿಂಗಳು ದುಬಾರಿ ಅಲೋಪತಿ ಔಷಧಿಗಳು ನಮ್ಮ ಇಡೀ ಬಜೆಟ್ ಅನ್ನು ಹಾಳುಮಾಡುತ್ತವೆ. ಈ ವೆಚ್ಚದ ಹೊರೆಯನ್ನು ಹೇಗೆ ಕಡಿಮೆ ಮಾಡುವುದು? ಅನಾರೋಗ್ಯ ಉದ್ಭವಿಸಿದರೆ ಅದಕ್ಕೆ ಚಿಕಿತ್ಸೆಯಂತೂ ಬೇಕೇ ಬೇಕು. ದುಬಾರಿ ಔಷಧಗಳ ದಾರಿಗೆ ಹೋಗದೆ ಆಯುರ್ವೇದ ಪರ್ಯಾಯಗಳನ್ನು (Ayurvedic medicines) ಜನರು ಈಗ ಹುಡುಕತೊಡಗಿದ್ದಾರೆ. ಇವರ ಹುಡುಕಾಟಕ್ಕೆ ಸುಲಭ ಆಯ್ಕೆ ಪತಂಜಲಿ. ಸರಳವಾಗಿ ಹೇಳುವುದಾದರೆ, ಪತಂಜಲಿಯ (Patanjali) ಕಡಿಮೆ ಬೆಲೆಯ ಆಯುರ್ವೇದ ಔಷಧಗಳು ಜನರ ಬಜೆಟ್ ಮತ್ತು ಆರೋಗ್ಯ ಎರಡನ್ನೂ ‘ಫಿಟ್ ಅಂಡ್ ಫೈನ್’ ಆಗಿಡಲು ಸಹಾಯ ಮಾಡುತ್ತಿವೆ.

ಪತಂಜಲಿ ಆಯುರ್ವೇದಿಕ್ ಔಷಧಗಳು

ಪತಂಜಲಿಯು ಆಯುರ್ವೇದ ಆಧಾರಿತ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳನ್ನು ತಯಾರಿಸುತ್ತದೆ. ಇವು ಅಲೋಪತಿ ಔಷಧಿಗಳಿಗಿಂತ ಅಗ್ಗವಾಗಿದ್ದು, ರೋಗಗಳನ್ನು ಗುಣಪಡಿಸುವಲ್ಲಿಯೂ ಪರಿಣಾಮಕಾರಿಯಾಗಿದೆ. ಆಯುರ್ವೇದ ಔಷಧದ ಪ್ರಯೋಜನವೆಂದರೆ ಅದು ರೋಗಲಕ್ಷಣಗಳನ್ನು ನಿಗ್ರಹಿಸುವುದಷ್ಟೇ ಅಲ್ಲ, ದೇಹದಲ್ಲಿ ದೀರ್ಘಕಾಲೀನ ಸಮತೋಲನವನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ.

ಇದನ್ನೂ ಓದಿ: ಷೇರುಪೆಟೆಯಲ್ಲಿ ಪತಂಜಲಿ ಫುಡ್ಸ್; ಹೂಡಿಕೆದಾರರಿಗೆ 3,900 ಕೋಟಿ ರೂ ಗಳಿಕೆ

ಪತಂಜಲಿ ಸ್ಟೋರ್​ನಲ್ಲಿ ವೈದ್ಯರು

ನೀವು ಆಯುರ್ವೇದ ಔಷಧಿ ಖರೀದಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ಬಯಸಿದರೆ, ಪತಂಜಲಿ ಸ್ಟೋರ್​ಗಳಲ್ಲೇ ವೈದ್ಯರು ಲಭ್ಯರಿರುತ್ತಾರೆ. ಅವರಿಗೆ ನೀವು ನಿಮ್ಮ ರೋಗದ ಬಗ್ಗೆ ಹೇಳಬಹುದು. ವೈದ್ಯರ ಸಲಹೆಯ ಮೇರೆಗೆ ಆಯುರ್ವೇದ ಔಷಧಿ ಸೇವನೆ ಪ್ರಾರಂಭಿಸಬಹುದು.

ಪತಂಜಲಿ ಆಯುರ್ವೇದ ಔಷಧ ಆನ್​ಲೈನ್​ನಲ್ಲೂ ಲಭ್ಯ

ಪತಂಜಲಿ ಆಯುರ್ವೇದ ಔಷಧಿಯನ್ನು ಆರ್ಡರ್ ಮಾಡಲು, ನೀವು ಮೊದಲು ಪತಂಜಲಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು (www.patanjaliayurved.net/). ನಂತರ, ಮೇಲ್ಭಾಗದಲ್ಲಿರುವ ಮೆಡಿಸಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Patanjali Ayurveda offers far less expensive medicines in its online platform

Photo: patanjaliayurved.net

ನಂತರ, ನೀವು ವಿವಿಧ ಕಾಯಿಲೆಗಳಿಗೆ ವಿವಿಧ ಔಷಧಿಗಳು ನಮೂದಾಗಿರುವುದನ್ನು ನೋಡುತ್ತೀರಿ. ನಿಮಗೆ ಬೇಕಾದ ಔಷಧಿಯ ಹೆಸರಿನ ಮೇಲೆ ಕ್ಲಿಕ್ ಮಾಡಿ. ಎಷ್ಟು ಬೇಕೆಂದು ಪ್ರಮಾಣವನ್ನು ಆಯ್ಕೆ ಮಾಡಿ, ನಿಮ್ಮ ವಿಳಾಸವನ್ನು ನಮೂದಿಸಿ ಮತ್ತು ಪಾವತಿ ಮಾಡಿ. ಈ ರೀತಿಯಾಗಿ, ನೀವು ನಿಮ್ಮ ಮನೆಯಿಂದಲೇ ಸುಲಭವಾಗಿ ಆರ್ಡರ್ ಮಾಡಬಹುದು. ಆ ಔಷಧಗಳನ್ನು ನಿಮ್ಮ ವಿಳಾಸಕ್ಕೆ ತಲುಪಿಸಲಾಗುತ್ತದೆ.

Patanjali Ayurveda offers far less expensive medicines in its online platform

Photo: patanjaliayurved.net

ಇದನ್ನೂ ಓದಿ: ಡೇಂಜರ್ ಮಾಲಿನ್ಯ, ಎಲ್ಲೆಲ್ಲೂ ಶೀತ, ಉಸಿರಾಟದ ತೊಂದರೆ; ಇಗೋ ಇಲ್ಲಿದೆ ಆಯುರ್ವೇದ ಪರಿಹಾರ

ಜನರ ಬಜೆಟ್ ಇತಿಮಿತಿಯನ್ನೂ ಸಹ ಎಚ್ಚರಿಕೆಯಿಂದ ಪರಿಗಣಿಸಲಾಗಿದೆ. ಅದಕ್ಕಾಗಿಯೇ ಔಷಧಗಳು ಕಡಿಮೆ ಬೆಲೆ ಮಾತ್ರವಲ್ಲ, ಹೆಚ್ಚುವರಿ ರಿಯಾಯಿತಿ ಕೂಡ ಹೊಂದಿವೆ. ಉದಾಹರಣೆಗೆ, ದಿವ್ಯ ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್ (Divya Madhunashini Vati Extra Power), ದಿವ್ಯ ಇಮ್ಯುನೊಗ್ರಿಟ್ (Divya Immunogrit) ಮತ್ತು ದಿವ್ಯ ಮೆಮೊರಿಗ್ರಿಟ್ (Divya Memorygrit) ಸೇರಿದಂತೆ ಇತರ ಉತ್ಪನ್ನಗಳ ಮೇಲೆ 4.13% ವರೆಗೆ ರಿಯಾಯಿತಿಗಳು ಲಭ್ಯವಿದೆ. ಅಂದರೆ ಹೆಚ್ಚುವರಿ ಉಳಿತಾಯಕ್ಕೆ ಉತ್ತಮ ಅವಕಾಶವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು