World Braille Day 2026: ದೃಷ್ಟಿ ವಿಶೇಷ ಚೇತನರ ಬಾಳಿಗೆ ಬೆಳಕಾದ ಬ್ರೈಲ್ ಲಿಪಿ
ದೃಷ್ಟಿ ವಿಶೇಷ ಚೇತನರು ಓದಲು, ಬರೆಯಲು ಬ್ರೈಲ್ ಲಿಪಿಯನ್ನು ಬಳಸುತ್ತಾರೆ. ಇದು ಇವರ ಸಂವಹನದ ಪ್ರಮುಖ ಸಾಧನ ಅಂತಾನೇ ಹೇಳಬಹುದು. ಅಂಧರ ಪಾಲಿಗೆ ಬೆಳಕಾಗಿರುವ ಈ ಬ್ರೈಲ್ ಲಿಪಿಯನ್ನು ಪರಿಚಯಿಸಿದ ಕೀರ್ತಿ ಲೂಯಿಸ್ ಬ್ರೈಲ್ ಅವರಿಗೆ ಸಲ್ಲುತ್ತದೆ. ಈ ಮಹಾನ್ ವ್ಯಕ್ತಿಯ ಜನ್ಮ ಜಯಂತಿಯ ಸ್ಮರಣಾರ್ಥವಾಗಿ ಪ್ರತಿವರ್ಷ ಜನವರಿ 4 ರಂದು ವಿಶ್ವ ಬ್ರೈಲ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ಕಣ್ಣು ಇಲ್ಲದ ಮನುಷ್ಯನ ಜೀವನ ತುಂಬಾ ಕಷ್ಟ. ದೃಷ್ಟಿ ವಿಶೇಷ ಚೇತನ ಜನರಿಗೆ ದಿನನಿತ್ಯದ ಚಟುವಟಿಕೆಗೆಳನ್ನು ಮಾಡುವುದರ ಜೊತೆಗೆ ಓದಲು ಬರೆಯಲು ಸಹ ಕಷ್ಟಕರವಾಗುತ್ತದೆ. ಇಂತಹ ಜನರಿಗೆ ಓದಲು, ಬರೆಯಲು ಸಹಾಯವಾಗಲೆಂದು ಲೂಯಿಸ್ ಬ್ರೈಲ್ ಎಂಬವರು ಬ್ರೈಲ್ (Braille)ಲಿಪಿಯನ್ನು ಕಂಡು ಹಿಡಿದರು. ದೃಷ್ಟಿಹೀನ ಜನರಿಗಾಗ ಜಾಗತಿಕವಾಗಿ ಸಾರ್ವತ್ರಿಕ ಭಾಷೆಯನ್ನು ರೂಪಿಸಿದರು. ಇವರ ಈ ಕೊಡುಗೆಯಿಂದಾಗಿ ದೃಷ್ಟಿಹೀನ ಜನರು ಜಹ ಓದುತ್ತಿದ್ದಾರೆ, ತಮ್ಮ ಕಾಲಿನ ಮೇಲೆ ನಿಂತಿದ್ದಾರೆ. ಅಂಧರ ಪಾಲಿಗೆ ಬೆಳಕಾಗಿರುವ ಈ ಬ್ರೈಲ್ ಲಿಪಿಯನ್ನು ಪರಿಚಯಿಸಿದ ಲೂಯಿಸ್ ಬ್ರೈಲ್ ಅವರ ಜನ್ಮ ಜಯಂತಿಯ ಸ್ಮರಣಾರ್ಥವಾಗಿ ಪ್ರತಿವರ್ಷ ಜನವರಿ 4 ರಂದು ವಿಶ್ವ ಬ್ರೈಲ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಕೇವಲ ಆಚರಣೆಯಲ್ಲ, ಬದಲಾಗಿ ಸ್ವಾತಂತ್ರ್ಯ, ಶಿಕ್ಷಣ ಮತ್ತು ದೃಷ್ಟಿ ವಿಶೇಷ ಚೇತನರ ಗೌರವದ ಸಂಕೇತವಾಗಿದೆ.
ವಿಶ್ವ ಬ್ರೈಲ್ ದಿನದ ಇತಿಹಾಸವೇನು?
2018ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜನವರಿ 4 ರಂದು ವಿಶ್ವ ಬ್ರೈಲ್ ದಿನವನ್ನು ಆಚರಿಸುವುದಾಗಿ ಘೋಷಿಸಿತು. ನಂತರ 2019ರ ಜನವರಿ 4 ರಂದು ಮೊದಲ ವಿಶ್ವ ಬ್ರೈಲ್ ದಿನವನ್ನು ಆಚರಿಸಲಾಯಿತು. ಅಂಧರು ಹಾಗೂ ಕಡಿಮೆ ದೃಷ್ಟಿ ಹೊಂದಿರುವ ಜನರಿಗೆ ಸಂವಹನ ಸಾಧನವಾಗಿ ಬ್ರೈಲ್‌ನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನದ ಉದ್ದೇಶವಾಗಿತ್ತು.
ಬ್ರೈಲ್ ಲಿಪಿ ಎಂದರೇನು?
ಸಾಮಾನ್ಯವಾಗಿ ಜನರು ಬ್ರೈಲ್ ಒಂದು ಭಾಷೆ ಎಂದು ಭಾವಿಸುತ್ತಾರೆ, ಆದರೆ ಬ್ರೈಲ್ ಒಂದು ಭಾಷೆಯಲ್ಲ, ಬದಲಿಗೆ ಒಂದು ಸಂಕೇತವಾಗಿದೆ.
- ಬ್ರೈಲ್ ಲಿಪಿಯಲ್ಲಿ, ಪ್ರತಿಯೊಂದು ಅಕ್ಷರ ಮತ್ತು ಸಂಖ್ಯೆಯನ್ನು 6 ಚುಕ್ಕೆಗಳ ಕೋಶದಲ್ಲಿ ಜೋಡಿಸಲಾಗಿದೆ.
- ಈ ಆರು ಚುಕ್ಕೆಗಳಲ್ಲಿ ಕೆಲವು ಮೇಲೆತ್ತಲ್ಪಟ್ಟಿವೆ. ದೃಷ್ಟಿಹೀನ ವ್ಯಕ್ತಿಗಳು ಈ ಮೇಲೆತ್ತಲ್ಪಟ್ಟ ಚುಕ್ಕೆಗಳನ್ನು ತಮ್ಮ ಬೆರಳ ತುದಿಯಿಂದ ಸ್ಪರ್ಶಿಸುವ ಮೂಲಕ ಅಕ್ಷರಗಳು, ಪದಗಳು ಮತ್ತು ವಾಕ್ಯಗಳನ್ನು ಓದುತ್ತಾರೆ.
- ಬ್ರೈಲ್ ಲಿಪಿಯನ್ನು ವರ್ಣಮಾಲೆಯನ್ನು ಬರೆಯಲು ಮಾತ್ರವಲ್ಲದೆ, ಸಂಗೀತ ಸಂಕೇತಗಳು ಮತ್ತು ಗಣಿತದ ಚಿಹ್ನೆಗಳಿಗೂ ಬಳಸಲಾಗುತ್ತದೆ.
ಇದನ್ನೂ ಓದಿ: ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಈ ಸರಳ ಅಭ್ಯಾಸಗಳನ್ನು ಪಾಲಿಸಿ
ವಿಶ್ವ ಬ್ರೈಲ್ ದಿನದ ಮಹತ್ವವೇನು?
- ಶಿಕ್ಷಣ ಮತ್ತು ಸಾಕ್ಷರತೆ: ದೃಷ್ಟಿಹೀನತೆ ಇರುವ ಜನರಿಗೆ ಬ್ರೈಲ್ ಶಿಕ್ಷಣದ ಅಡಿಪಾಯವಾಗಿದೆ. ಇದು ವ್ಯಾಕರಣ, ಕಾಗುಣಿತ ಮತ್ತು ವಾಕ್ಯ ರಚನೆಯನ್ನು ಕಲಿಯಲು ಅವರಿಗೆ ಸಹಾಯ ಮಾಡುತ್ತದೆ.
- ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ: ಬ್ರೈಲ್ ಲಿಪಿಯ ಜ್ಞಾನವು ದೃಷ್ಟಿಹೀನ ಜನರನ್ನು ಸ್ವತಂತ್ರರನ್ನಾಗಿ ಮಾಡುತ್ತದೆ. ಅವರು ಔಷಧಿ ಲೇಬಲ್‌ಗಳನ್ನು ಓದಬಹುದು, ಲಿಫ್ಟ್ ಬಟನ್‌ಗಳನ್ನು ಗುರುತಿಸಬಹುದು ಮತ್ತು ಎಟಿಎಂಗಳನ್ನು ಬಳಸಬಹುದು.
- ಜಾಗೃತಿ ಮೂಡಿಸುವುದು: ವಿಶ್ವ ಬ್ರೈಲ್ ದಿನವನ್ನು ಆಚರಿಸುವ ಮೂಲಕ, ಸರ್ಕಾರಗಳು, ಸಂಸ್ಥೆಗಳು ಮತ್ತು ಸಮುದಾಯಗಳು ದೃಷ್ಟಿಹೀನರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




