AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಗುಣಗಳಿರುವ ಸ್ನೇಹಿತರು ಎಂದಿಗೂ ಮೋಸ ಮಾಡಲಾರರು ಎನ್ನುತ್ತಾರೆ ಚಾಣಕ್ಯ

ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಆದರೆ ಸ್ನೇಹಿತರನ್ನು ಆಯ್ಕೆ ಮಾಡುವಾಗ ಜಾಗರೂಕರಾಗಿರಬೇಕು. ಉತ್ತಮ ಸ್ನೇಹಿತರಿದ್ದರೆ ಜೀವನವೂ ಉತ್ತಮವಾಗಿರುತ್ತವೆ. ಅದರಲ್ಲೂ ಈ ಕೆಲವು ಗುಣಗಳಿರುವ ಸ್ನೇಹಿತರು ಪ್ರತಿಯೊಂದು ಹಂತದಲ್ಲೂ ನಿಮಗೆ ಬೆಂಬಲವಾಗಿ ನಿಲ್ಲುತ್ತಾರೆ. ಅವರು ಎಂದಿಗೂ ಮೋಸ ಮಾಡಲಾರರು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ನಿಮ್ಮ ಸ್ನೇಹಿತರಲ್ಲೂ ಆ ಗುಣಗಳಿವೆಯೇ ಎಂಬುದನ್ನು ಪರೀಕ್ಷಿಸಿ.

Chanakya Niti: ಈ ಗುಣಗಳಿರುವ ಸ್ನೇಹಿತರು ಎಂದಿಗೂ ಮೋಸ  ಮಾಡಲಾರರು ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Freepik
ಮಾಲಾಶ್ರೀ ಅಂಚನ್​
|

Updated on: Jan 04, 2026 | 3:23 PM

Share

ಸ್ನೇಹ (Friendship) ಎನ್ನುವುದು ಭಾಷೆ, ಜಾತಿ, ಧರ್ಮ ಎಲ್ಲವನ್ನು ಮೀರಿದ ಸುಂದರ ಬಂಧ. ಪ್ರತಿಯೊಬ್ಬರ ಜೀವನದಲ್ಲೂ ಫ್ರೆಂಡ್ಸ್‌ ಇದ್ದೇ ಇರುತ್ತಾರೆ. ಸ್ನೇಹಿತರು ನಮ್ಮ ಇಡೀ ಜೀವನವನ್ನು ಸುಂದರವಾಗಿಸಬಲ್ಲರು. ಅಲ್ಲದೆ ನಮ್ಮ ಜೀವನವನ್ನು ಉತ್ತಮವಾಗಿಸಬಲ್ಲರು. ಅದೇ ರೀತಿ ಕೆಲವು ಸ್ನೇಹಿತರು ಸ್ವಾರ್ಥ ಮತ್ತು ದುರಾಸೆಯಿಂದ ಇನ್ನೊಬ್ಬರ ಜೀವನವನ್ನೇ ಹಾಳು ಮಾಡಬಲ್ಲರು. ಇನ್ನೂ ಕೆಲ ಸ್ನೇಹಿತರು ಪ್ರತಿಯೊಂದು ಹಂತದಲ್ಲೂ ನಿಮಗೆ ಬೆಂಬಲವಾಗಿ ನಿಲ್ಲುತ್ತಾರೆ. ಅವರು ಎಂದಿಗೂ ಮೋಸ ಮಾಡಲಾರರು ಎಂದು ಆಚಾರ್ಯ ಚಾಣಕ್ಯರು. ಹಾಗಿದ್ರೆ ಯಾವ ಗುಣಗಳನ್ನು ಹೊಂದಿರುವ ಸ್ನೇಹಿತರು ಉತ್ತಮರು ಎಂಬುದನ್ನು ನೋಡೋಣ.

ಇಂತಹ ಸ್ನೇಹಿತರು ಎಂದಿಗೂ ಮೋಸ ಮಾಡಲಾರರು:

 ಮುಕ್ತ ಮತ್ತು ಸ್ಪಷ್ಟವಾಗಿ ಮಾತನಾಡುವ ಜನರು: ಚಾಣಕ್ಯರ ಪ್ರಕಾರ, ಮುಕ್ತ ಮತ್ತು ಪ್ರಾಮಾಣಿಕವಾಗಿ ಮಾತನಾಡುವ ಜನರು ಯಾರಿಗೂ ನೋವುಂಟು ಮಾಡಲು ಬಯಸುವುದಿಲ್ಲ. ಅವರು ಪರಿಶುದ್ಧ ಹೃದಯವನ್ನು ಹೊಂದಿದ್ದು, ನೀವು ಇಂತಹ ಜನರೊಂದಿಗೆ ಸ್ನೇಹಿತರಾಗಿದ್ದರೆ, ಅವರು ಎಂದಿಗೂ ನಿಮಗೆ ದ್ರೋಹ ಮಾಡುವುದಿಲ್ಲ.

ದುರಾಸೆಯಿಲ್ಲದ ವ್ಯಕ್ತಿ: ದುರಾಸೆಯಿಲ್ಲದ ನಿಸ್ವಾರ್ಥ ಜನರನ್ನು ಕಣ್ಣು ಮುಚ್ಚಿ ನಂಬಬಹುದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಇತರರ ವಸ್ತುಗಳ ಮೇಲೆ ಆಸೆ ಪಡದ ಜನರು ಯಾರಿಗೂ ಮೋಸ ಮಾಡುವುದಿಲ್ಲ. ಅಂತಹ ಜನರೊಂದಿಗೆ ಸ್ನೇಹ ಬೆಳೆಸುವುದು ಉತ್ತಮ.

ಸಹಾಯ ಮಾಡುವ ಜನರು: ಜೀವನದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುವ ಜನರೊಂದಿಗೆ ಯಾವಾಗಲೂ ಸ್ನೇಹಿತರಾಗಿರಬೇಕು. ಅಂತಹ ಜನರು ಎಂದಿಗೂ ಯಾರಿಗೂ ಯಾವುದೇ ಹಾನಿ ಮಾಡುವುದಿಲ್ಲ. ಅವರು ಸದಾ ನಿಮಗೆ ಒಳ್ಳೆಯದನ್ನೇ ಬಯಸುತ್ತಾರೆ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: 2026 ರಲ್ಲಿ ಯಶಸ್ಸು ನಿಮ್ಮದಾಗಲು ಆಚಾರ್ಯ ಚಾಣಕ್ಯರ ಸಲಹೆಗಳನ್ನು ಅನುಸರಿಸಿ

ಸತ್ಯವಂತರು: ನಿಮಗೆ ಯಾವಾಗಲೂ ಸತ್ಯವನ್ನೇ ಹೇಳುವ ಸ್ನೇಹಿತರಿದ್ದರೆ, ನೀವು ಅದೃಷ್ಟವಂತರು. ಅವರು ಎಂದಿಗೂ ಮೋಸ ಮಾಡುವುದಿಲ್ಲ, ಅವರು ಸದಾ ನಿಮ್ಮೊಂದಿಗೆ ಇರುತ್ತಾರೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಇದಲ್ಲದೆ ಇತರರ ವ್ಯವಹಾರಗಳಲ್ಲಿ ಮೂಗು ತುರಿಸದೆ ತಮ್ಮ ಪಾಡಿಗೆ ಇರುವ ಜನರು ಸಹ ಯಾರಿಗೂ ಹಾನಿ ಮಾಡುವುದಿಲ್ಲ. ಅವರು ಶುದ್ಧ ಹೃದಯವರಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ
‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್