National Cousins Day 2024: ಈ ವಿಶೇಷ ದಿನದಂದು ನಿಮ್ಮ ಕಸಿನ್ಸ್ ಗಳಿಗೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು

| Updated By: ಅಕ್ಷತಾ ವರ್ಕಾಡಿ

Updated on: Jul 23, 2024 | 7:35 PM

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪ್ರತಿಯೊಂದು ಸಂಬಂಧವು ವಿಶೇಷವಾಗಿರುತ್ತದೆ. ಹೀಗಾಗಿ ಕುಟುಂಬದಲ್ಲಿ ಬಾಂಧವ್ಯವನ್ನು ಹೆಚ್ಚಿಸಲು ಹಾಗೂ ಸ್ನೇಹಮಯವಾದ ಸಂಬಂಧವನ್ನು ಉಳಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 24 ರಂದು ರಾಷ್ಟ್ರೀಯ ಸೋದರಸಂಬಂಧಿ (ಕಸಿನ್ಸ್) ದಿನವನ್ನು ಆಚರಿಸಲಾಗುತ್ತದೆ. ನಿಮ್ಮ ಜೀವನದ ಬೆಸ್ಟ್ ಫ್ರೆಂಡ್ಸ್ ಆಗಿರುವ ನಿಮ್ಮ ಸೋದರ ಸಂಬಂಧಿಗೆ ಈ ರೀತಿ ಶುಭಾಶಯಗಳನ್ನು ಕೋರಿ.

National Cousins Day 2024: ಈ ವಿಶೇಷ ದಿನದಂದು ನಿಮ್ಮ ಕಸಿನ್ಸ್ ಗಳಿಗೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು
National Cousins Day 2024
Follow us on

ಒಡಹುಟ್ಟಿದವರು ಇಲ್ಲದೇ ಹೋದರು ದೊಡ್ಡ ಸಂಖ್ಯೆಯಲ್ಲಿ ಸೋದರ ಸಂಬಂಧಿಗಳು ಇದ್ದೆ ಇರುತ್ತಾರೆ. ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು, ಸೋದರ ಮಾವ, ಸೋದರತ್ತೆಯ ಮಕ್ಕಳು ಇವರೆಲ್ಲರೂ ನಮಗೆ ಕಸಿನ್‌ಗಳಾಗಿರುತ್ತಾರೆ. ಕೆಲವರಂತೂ ಸ್ನೇಹಿತರ ಸ್ಥಾನವನ್ನು ತುಂಬಿ ಒಡಹುಟ್ಟಿದವರು ಇಲ್ಲ ಎನ್ನುವ ಕೊರತೆಯನ್ನು ನೀಗಿಸಿರುತ್ತಾರೆ. ಹೀಗಾಗಿ ನಮ್ಮ ಜೀವನದಲ್ಲಿ ಕಸಿನ್ಸ್ ಗಳಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗುತ್ತದೆ. ಸಹೋದರ-ಸಹೋದರಿಯರಿಗಿಂತ ಹೆಚ್ಚಾಗಿ ಬೆಸ್ಟ್ ಫ್ರೆಂಡ್ಸ್‌ ಕೂಡ ಆಗಿರುತ್ತಾರೆ. ಕಸಿನ್ಸ್ ಜೊತೆ ಆಚರಿಸಲೆಂದೇ ಈ ದಿನವಿದ್ದು, ಪ್ರತಿ ವರ್ಷ ಜುಲೈ 24ರಂದು ಕಸಿನ್ಸ್‌ ಡೇ ಅಥವಾ ಸೋದರ ಸಂಬಂಧಿ ದಿನವನ್ನು ಆಚರಿಸಲಾಗುತ್ತದೆ. ನಿಮ್ಮ ಪ್ರೀತಿಯ ಕಸಿನ್ಸ್ ಗಳಿಗೆ ವಿಶೇಷವಾಗಿ ಸಂದೇಶಗಳನ್ನು ಕಳುಹಿಸಿ ಈ ದಿನವನ್ನು ಆಚರಿಸಿ.

  • ನಿಮ್ಮೊಂದಿಗೆ ಕಳೆಯುವುದು ನನ್ನ ಜೀವನದ ಅತ್ಯಂತ ಅದ್ಭುತವಾದ ವಿಷಯವಾಗಿದೆ. ನಮ್ಮಿಬ್ಬರ ಸಂಬಂಧವು ಇಷ್ಟೇ ಸಿಹಿಯಾಗಿರಲಿ ಸೋದರ ಸಂಬಂಧಿ ದಿನದ ಶುಭಾಶಯಗಳು.
  • ನಾವು ಜೊತೆಯಲ್ಲೇ ಇರದಿರಬಹುದು ಆದರೆ ಅವಶ್ಯಕತೆಯಿದ್ದಾಗ ಎಲ್ಲರೂ ಜೊತೆಗೂಡುತ್ತೇವೆ ಹ್ಯಾಪಿ ಕಸಿನ್ಸ್ ಡೇ.
  • ನೀನು ನನ್ನ ಕಸಿನ್‌ ಎನ್ನುವುದಕ್ಕೂ ಮಿಗಿಲಾಗಿ ನೀ ನನ್ನ ಬೆಸ್ಟ್‌ ಫ್ರೆಂಡ್, ಹ್ಯಾಪಿ ಕಸಿನ್ಸ್ ಡೇ
  • ಜಗತ್ತು ನಕಾರಾತ್ಮಕವಾಗಿದ್ದಾಗ ನೀನು ನನ್ನೊಂದಿಗಿದ್ದರೆ ನಾನು ಯಾವಾಗಲೂ ಸಕಾರಾತ್ಮಕವಾಗಿರುತ್ತೇನೆ. ನಮ್ಮ ಬಂಧವು ಇನ್ನಷ್ಟು ಇಮ್ಮಡಿಯಾಗಲಿ. ಕಸಿನ್ಸ್ ದಿನದ ಶುಭಾಶಯಗಳು
  • ಈ ಜಗತ್ತಿನಲ್ಲಿ ಯಾವುದೇ ಅಂತರವು ನಮ್ಮ ನಡುವೆ ವ್ಯತ್ಯಾಸವನ್ನು ಸೃಷ್ಟಿಸುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನೀನು ಕೇವಲ ಕಸಿನ್ಸ್ ಮಾತ್ರವಲ್ಲ, ನನ್ನ ಆತ್ಮೀಯ ಸ್ನೇಹಿತ. ಕಸಿನ್ಸ್ ದಿನದ ಶುಭಾಶಯಗಳು
  • ಜಗತ್ತಿಗೆ ನೀನು ಕೇವಲ ಒಬ್ಬ ವ್ಯಕ್ತಿಯಾಗಿರಬಹುದು, ಆದರೆ ನನಗೆ ಜಗತ್ತೇ ನೀನು, ಪರಿಶುದ್ಧ ಸ್ನೇಹ ನಿನ್ನದು. ಸೋದರ ಸಂಬಂಧಿ ದಿನದ ಶುಭಾಶಯಗಳು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ