Relationship Tips : ಜೊತೆಗಾತಿಗೆ ನಿಮ್ಮ ಮೇಲೆ ಆಸಕ್ತಿ ಕಡಿಮೆ ಆಗ್ತಿದೆಯೇ, ಈ ಕಾರಣಗಳೇ ಇರಬಹುದು

ದಾಂಪತ್ಯ ಜೀವನವು ಸದಾ ಖುಷಿಯಿಂದ ಕೂಡಿರಬೇಕು ಎಂದು ಎಲ್ಲರೂ ಬಯಸುವುದು ಸಹಜ. ಇಬ್ಬರೂ ವ್ಯಕ್ತಿಗಳು ಜೊತೆಯಾಗಿ ಸುಂದರವಾದ ಬದುಕು ಕಟ್ಟಿಕೊಳ್ಳಲು ಹೊಂದಾಣಿಕೆಯು ಅತ್ಯಗತ್ಯ. ಆದರೆ ಕೆಲವೊಮ್ಮೆ ಸಂಗಾತಿಗಳಿಬ್ಬರ ಸಣ್ಣ ಪುಟ್ಟ ನಡವಳಿಕೆಗಳು ಸಂಸಾರದಲ್ಲಿ ನೆಮ್ಮದಿಯಿಲ್ಲದಂತೆ ಮಾಡುತ್ತದೆ. ಪ್ರಾರಂಭದ ದಿನಗಳಲ್ಲಿ ಪತ್ನಿಗೆ ಪತಿಯ ಮೇಲೆ ಇದ್ದ ಪ್ರೀತಿಯು ಕಡಿಮೆಯಾಗುತ್ತ ಬರುತ್ತಿದೆಯೆಂದರೆ ಗಂಡನ ಈ ನಡವಳಿಕೆಗಳು ಕಾರಣವಾಗಿರಬಹುದು. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.

Relationship Tips : ಜೊತೆಗಾತಿಗೆ ನಿಮ್ಮ ಮೇಲೆ ಆಸಕ್ತಿ ಕಡಿಮೆ ಆಗ್ತಿದೆಯೇ, ಈ ಕಾರಣಗಳೇ ಇರಬಹುದು
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 23, 2024 | 4:51 PM

ಯಾವುದೇ ಸಂಬಂಧವಿರಲಿ, ಅಲ್ಲಿ ಪ್ರೀತಿಯ ಜೊತೆಗೆ ನಂಬಿಕೆ, ವಿಶ್ವಾಸ ಎನ್ನುವುದು ಬಹಳ ಮುಖ್ಯ. ಈ ಎರಡು ಅಂಶಗಳು ಇಲ್ಲದಿದ್ದರೆ ಸಂಬಂಧವನ್ನು ದೀರ್ಘಕಾಲದವರೆಗೂ ಮುಂದುವರೆಸಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಕಾರಣವಿಲ್ಲದೇ ಸಂಗಾತಿಯೊಂದಿಗೆ ಅಥವಾ ಸಂಬಂಧದಲ್ಲಿ ಮನಸ್ತಾಪಗಳು ಬರಬಹುದು. ಆದರೆ ಗಂಡನ ಕೆಲವೊಂದು ನಡವಳಿಕೆಗಳು ಹೆಂಡತಿಯು ಇಷ್ಟವಾಗದೇ ಇರಬಹುದು. ಹೀಗಾಗಿ ಪತ್ನಿಯು ಪತಿಯ ಮೇಲೆ ಆಸಕ್ತಿ ಕಳೆದುಕೊಂಡು ದೂರವಾಗುತ್ತಾಳೆ. ಯಾವ ಕಾರಣಕ್ಕೆ ಸಂಬಂಧದಲ್ಲಿ ಈ ರೀತಿಯಾಗುತ್ತಿದೆ ಎಂದು ಪತಿಯಾದವನು ಅರಿತು ಕೊಳ್ಳುವುದು ಮುಖ್ಯ.

* ಹೆಂಡತಿಯನ್ನು ನಿಯಂತ್ರಿಸುವುದು : ಗಂಡ ಹೆಂಡಿರ ನಡುವೆ ಹೊಂದಾಣಿಕೆ ಎಷ್ಟು ಮುಖ್ಯ, ಒಬ್ಬರ ಭಾವನೆ ಹಾಗೂ ಆಸೆಗಳಿಗೆ ಬೆಲೆ ಕೊಡುವುದು ಅಷ್ಟೇ ಮುಖ್ಯವಾಗುತ್ತದೆ. ಮದುವೆಯಾದ ಹೊಸದರಲ್ಲಿ ಚೆನ್ನಾಗಿದ್ದ ಸಂಬಂಧವು ಬರುಬರುತ್ತ, ಗಂಡನು ಹೆಂಡತಿಯ ಮೇಲೆ ನಿಯಂತ್ರಣ ಏರುತ್ತಿದ್ದಾನೆ ಅನಿಸಬಹುದು. ಸಣ್ಣ ಪುಟ್ಟದ್ದಕ್ಕೂ ನಿರ್ಬಂಧಗಳನ್ನು ಹಾಕುವುದರಿಂದ ಆಕೆಯು ಸಂಪೂರ್ಣ ಸ್ವಾತಂತ್ರವನ್ನು ಕಳೆದುಕೊಳ್ಳುತ್ತಾನೆ. ಹೀಗಾಗಿ ಗಂಡನ ಮೇಲಿನ ಆಸಕ್ತಿಯು ಕಡಿಮೆಯಾಗುತ್ತ ಹೋಗುತ್ತದೆ.

* ದೈಹಿಕ ಸಂಪರ್ಕದಲ್ಲಿ ಆಸಕ್ತಿಯ ಕೊರತೆ : ದಾಂಪತ್ಯ ಜೀವನಕ್ಕೆ ಪ್ರೀತಿ ಕಾಳಜಿ ಜೊತೆಗೆ ದೈಹಿಕ ಸಂಪರ್ಕವು ಸಂಬಂಧವನ್ನು ಗಟ್ಟಿಯಾಗಿಸುತ್ತದೆ. ಆದರೆ ದಂಪತಿಗಳಿಬ್ಬರಲ್ಲಿ ಒಬ್ಬರಿಗೆ ಈ ಬಗ್ಗೆ ಆಸಕ್ತಿ ಇರದೇ ಹೋದರೆ ಸಂಬಂಧವು ಬಿರುಕಿಗೆ ಕಾರಣವಾಗಬಹುದು. ಪತಿಯು ಈ ಬಗ್ಗೆ ಆಸಕ್ತಿ ತೋರುತ್ತಿಲ್ಲವೆಂದಾದರೆ ಈ ಬಗ್ಗೆ ನಿರಾಸೆ ಮೂಡುತ್ತದೆ. ಇದರಿಂದ ಪತ್ನಿಗೆ ಪತಿಯ ಮೇಲೆ ಆಸಕ್ತಿಯೇ ಇಲ್ಲದೇ ಹೋಗಬಹುದು.

* ಉದ್ಯೋಗಕ್ಕೆ ತೆರಳು ಅವಕಾಶ ನೀಡದೇ ಇರುವುದು : ಪ್ರತಿಯೊಬ್ಬ ಹೆಣ್ಣು ಕೂಡ ಮದುವೆಯಾದ ಬಳಿಕ ಉದ್ಯೋಗಕ್ಕೆ ಹೋಗಬೇಕು, ಸ್ವತಂತ್ರವಾಗಿ ಬದುಕಬೇಕು ಎನ್ನುವುದಿರುತ್ತದೆ. ಆದರೆ ಬಹುತೇಕ ಪುರುಷರು ಮದುವೆಯಾದ ಮೇಲೆ ಮಹಿಳೆಯರು ಕೆಲಸಕ್ಕೆ ಹೋಗುವುದನ್ನು ಇಷ್ಟ ಪಡುವುದಿಲ್ಲ. ಗಂಡನು ಕೆಲಸಕ್ಕೆ ಹೋಗಲು ಅವಕಾಶ ನೀಡದಿದ್ದಾಗ ಅನೇಕ ಮಹಿಳೆಯರಿಗೆ ಇದರಿಂದ ನಿರಾಸೆಯಾಗುತ್ತದೆ. ತನ್ನ ಅಗತ್ಯತೆಗಳಿಗೆ ಪ್ರತಿ ಸಲ ಹಣವನ್ನು ಕೇಳುವಾಗ ಸ್ವಾಭಿಮಾನ ಹಾಗೂ ಹಣ ಕೇಳಿದಾಗ ಗಂಡನು ಕೇಳುವ ಸಾವಿರ ಪ್ರಶ್ನೆಗಳು ಆಕೆಗೆ ಆತನ ಮೇಲಿನ ಆಸಕ್ತಿಯನ್ನು ಕಡಿಮೆಗೊಳಿಸುವ ಸಾಧ್ಯತೆಯೇ ಹೆಚ್ಚು.

* ಸಮಯ ನೀಡದೇ ಬ್ಯುಸಿಯಾಗಿರುವುದು : ವೈವಾಹಿಕ ಜೀವನದಲ್ಲಿ ಒಬ್ಬರಿಗೊಬ್ಬರು ಸಮಯ ಕೊಡುವುದು ಮುಖ್ಯ. ಆದರೆ ಹೆಚ್ಚಿನ ಪುರುಷರು ಇಡೀ ದಿನ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಮನೆಗೆ ಬಂದ ಬಳಿಕವು ಪತ್ನಿಯ ಜೊತೆಗೆ ಸಮಯ ಕಳೆಯುವುದಿಲ್ಲ. ತನ್ನೊಂದಿಗೆ ಇರಬೇಕು ಎಂದು ಬಯಸುವ ಪತ್ನಿಗೆ ಇದು ಬೇಸರ ತರಬಹುದು. ಮತ್ತೆ ಮತ್ತೆ ಹೀಗೆ ಆದರೆ. ಹೆಂಡತಿಯು ಗಂಡನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾಳೆ.

ಇದನ್ನೂ ಓದಿ: ಆಹಾ! ರುಚಿಯಲ್ಲಿ ಅದ್ಭುತ ಉತ್ತರ ಕರ್ನಾಟಕದ ಸ್ಪೆಷಲ್ ಜೋಳದ ರೊಟ್ಟಿ ಮುಟಿಗಿ, ಇಲ್ಲಿದೆ ರೆಸಿಪಿ

* ತನ್ನ ಆಸೆ ಆಕಾಂಕ್ಷೆಗಳನ್ನು ಪೂರೈಸದೇ ಇರುವುದು : ಆರ್ಥಿಕ ಸಮಸ್ಯೆಯು ಹೆಂಡತಿಯು ಗಂಡನಿಂದ ದೂರ ಹೋಗಲು ಕಾರಣವಾಗಬಹುದು. ಪತಿ ಪತ್ನಿಯರಲ್ಲಿ ಒಬ್ಬರೇ ಹೊರಗೆ ಹೋಗಿ ದುಡಿಯುತ್ತಿದ್ದರೆ ಎಲ್ಲಾ ಜವಾಬ್ದಾರಿಗಳು ಗಂಡಿನ ಮೇಲೆಯೇ ಇರುತ್ತದೆ. ಈ ವೇಳೆ ಪತ್ನಿಯು ತನ್ನ ಆಸೆಯನ್ನು ವ್ಯಕ್ತಪಡಿಸಿದಾಗ ಅದನ್ನು ನೆರವೇರಿಸಲು ಸಾಧ್ಯವಾಗದೇ ಇರಬಹುದು. ಈ ಸಂದರ್ಭದಲ್ಲಿ ಹೆಂಡತಿಯು ಗಂಡನ ಮೇಲೆ ಆಸಕ್ತಿ ಕಳೆದುಕೊಳ್ಳುವುದೇ ಹೆಚ್ಚು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ