AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಟಾಪಟ್ ಎಂದು ಮನೆಯಲ್ಲೇ ಸುಲಭವಾಗಿ ಮಾಡಿ ಮಲೆನಾಡಿನ ಗೊಜ್ಜವಲಕ್ಕಿ, ಇಲ್ಲಿದೆ ರೆಸಿಪಿ

ಪ್ರತಿಯೊಂದು ಮನೆಯಲ್ಲಿ ಹೆಣ್ಣು ಮಕ್ಕಳು ರಾತ್ರಿ ಮಲಗುವ ಮುಂಚೆ ನಾಳೆ ಬೆಳಗ್ಗೆ ತಿಂಡಿಯೇನು ಮಾಡುವುದು ಎಂದು ಯೋಚಿಸುತ್ತಾರೆ. ಹೀಗಾದಾಗ ಮಹಿಳೆಯರ ನೆನಪಿಗೆ ಬರುವುದೇ ಉಪ್ಪಿಟ್ಟು ಅಥವಾ ಅವಲಕ್ಕಿ. ಆದರೆ ಈ ತಿಂಡಿಗಳೆಂದರೆ ಎಲ್ಲರಿಗೂ ಅಷ್ಟಕಷ್ಟೆ. ನೀವೇನಾದರೂ ಬೆಳಗ್ಗೆ ದಿಢೀರಾಗಿ ಅವಲಕ್ಕಿ ರೆಸಿಪಿಯನ್ನು ಮಲೆನಾಡಿನ ಶೈಲಿಯಲ್ಲಿ ಮಾಡಿದರೆ ಇಷ್ಟ ಪಡದವರು ಕೂಡ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಈ ಗೊಜ್ಜವಲಕ್ಕಿ ಮಾಡಲು ಈ ಕೆಲವು ಐಟಂ ಆಗಿದ್ದರೆ ಸಾಕು, ಮಾಡುವ ವಿಧಾನವಂತೂ ಸುಲಭವೇ ಸುಲಭ.

ಫಟಾಪಟ್ ಎಂದು ಮನೆಯಲ್ಲೇ ಸುಲಭವಾಗಿ ಮಾಡಿ ಮಲೆನಾಡಿನ ಗೊಜ್ಜವಲಕ್ಕಿ, ಇಲ್ಲಿದೆ ರೆಸಿಪಿ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 22, 2024 | 5:16 PM

Share

ಸಾಮಾನ್ಯವಾಗಿ ಒಂದೊಂದು ಪ್ರದೇಶಗಳಲ್ಲಿ ಒಂದು ಆಹಾರ ಪದ್ಧತಿಯಿರುತ್ತದೆ. ಅದರಲ್ಲಿಯು ಈ ಮಲೆನಾಡು ಹಾಗೂ ಕರಾವಳಿ ಭಾಗದ ಜನರ ಖಾದ್ಯಗಳು ಸ್ವಲ್ಪ ವಿಭಿನ್ನವಾಗಿರುತ್ತದೆ. ಇಲ್ಲಿ ಬೆಳಗ್ಗಿನ ತಿಂಡಿಗೆ ದೋಸೆ, ಕಡುಬು, ಅಕ್ಕಿ ರೊಟ್ಟಿ, ಇಡ್ಲಿ ಹೀಗೆ ಏನಾದರೂ ಒಂದು ಇದ್ದೆ ಇರುತ್ತದೆ. ಆದರೆ ಮಲೆನಾಡಿನ ಭಾಗದಲ್ಲಿ ಗೊಜ್ಜವಲಕ್ಕಿ ಖಾದ್ಯವು ಫೇಮಸ್ ಆಗಿದೆ. ಆದರೆ ರುಚಿಕರವಾದ ಮಲೆನಾಡಿನಲ್ಲಿ ಗೊಜ್ಜವಲಕ್ಕಿಯನ್ನು ಬೆಳಗ್ಗೆ ತಿಂಡಿಗೆ ಮಾತ್ರವಲ್ಲದೆ, ಸಂಜೆಯ ಕಾಫಿ ಅಥವಾ ಟೀ ಜೊತೆಗೆ ಇದನ್ನು ಮಾಡಿ ಸವಿಯಬಹುದು.

ಗೊಜ್ಜವಲಕ್ಕಿ ಮಾಡಲು ಬೇಕಾಗುವ ಪದಾರ್ಥಗಳು+

* ಎರಡು ಕಪ್ ನಷ್ಟು ಅವಲಕ್ಕಿ

* ತೆಂಗಿನ ತುರಿ

* ಸ್ವಲ್ಪ ಬೆಲ್ಲ

* ಹುಣಸೆ ಹಣ್ಣು

* ಕೊತ್ತಂಬರಿ ಸೊಪ್ಪು

* ರುಚಿಗೆ ತಕ್ಕಷ್ಟು ಉಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು

* ಮೂರರಿಂದ ನಾಲ್ಕು ಕೆಂಪು ಮೆಣಸಿನಕಾಯಿ

* ಎರಡು ಚಮಚ ಉದ್ದಿನ ಬೇಳೆ

* ಎರಡು ಚಮಚ ಕಡಲೆಬೇಳೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು

* ಒಂದೆರಡು ಒಣ ಮೆಣಸಿನಕಾಯಿ

* ಸಾಸಿವೆ

* ಎರಡು ಚಮಚ ಕಡಲೆಕಾಯಿ

* ಉದ್ದಿನ ಬೇಳೆ

* ಕಡಲೆಬೇಳೆ

* ಚಿಟಿಕೆ ಇಂಗು

* ಕರಿಬೇವಿನ ಎಲೆ

* ಅರಿಶಿನ ಪುಡಿ

* ಅಡುಗೆ ಎಣ್ಣೆ

ಇದನ್ನೂ ಓದಿ: ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ಮಾವಿನ ತಳಿಗಳಿವೆ! ಯಾವುವು?

ಮಲೆನಾಡು ಶೈಲಿಯ ಗೊಜ್ಜವಲಕ್ಕಿ ಮಾಡುವ ವಿಧಾನ

* ಒಂದು ಬಾಣಲೆಯನ್ನು ಸ್ಟವ್ ಮೇಲಿಟ್ಟು ಒಣ ಮೆಣಸಿನಕಾಯಿ, ಎರಡು ಚಮಚದಷ್ಟು ಉದ್ದಿನ ಬೇಳೆ ಹಾಗೂ ಕಡಲೆಬೇಳೆಯನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ.

* ಆ ಬಳಿಕ ದಪ್ಪ ಅವಲಕ್ಕಿಯನ್ನು ತೊಳೆದು ಐದು ನಿಮಿಷಗಳ ಕಾಲ ನೆನೆಸಿಡಿ. ಅದರೊಂದಿಗೆ ಒಂದು ಸಣ್ಣ ಬಟ್ಟಲಿನಲ್ಲಿ ಹುಣಿಸೆ ಹಣ್ಣನ್ನು ನೀರಿನಲ್ಲಿ ನೆನೆಸಿಡಿ.

* ಮತ್ತೊಂದು ಬಾಣಲೆಗೆ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಹಾಗೂ ಶೇಂಗಾ ಹಾಕಿ ಒಗ್ಗರಣೆ ಸಿದ್ದ ಮಾಡಿಕೊಳ್ಳಿ.

* ಇದಕ್ಕೆ ಅರಿಶಿನ ಪುಡಿ, ಕರಿಬೇವು ಮತ್ತು ಇಂಗು ಸೇರಿಸಿ ಸ್ಟವ್ ಆಫ್ ಮಾಡಿ. ತದನಂತರದಲ್ಲಿ ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿಕೊಳ್ಳಿ.

* ಇದನ್ನು ಸಣ್ಣಗೆ ಹುರಿಯಲ್ಲಿ ಒಮ್ಮೆ ಕುದಿಸಿಕೊಳ್ಳಿ, ಈಗಾಗಲೇ ನೆನೆಸಿಟ್ಟ ಅವಲಕ್ಕಿಯ ನೀರು ಹಿಂಡಿ ಇದಕ್ಕೆ ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ.

* ಮೂರು ನಾಲ್ಕು ನಿಮಿಷಗಳ ಮುಚ್ಚಳವನ್ನು ಮುಚ್ಚಿ ಕಡಿಮೆ ಹುರಿಯಲ್ಲಿ ಬೇಯಿಸಿಕೊಳ್ಳಿ.

* ಈಗಾಗಲೇ ಮಾಡಿಟ್ಟ ಮಸಾಲೆ ಪುಡಿ, ತೆಂಗಿನ ತುರಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿದರೆ ಮಲೆನಾಡು ಶೈಲಿಯ ಗೊಜ್ಜವಲಕ್ಕಿ ಸವಿಯಲು ಸಿದ್ಧ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ