National Flag Adoption Day 2024 : ಪ್ರತಿಯೊಬ್ಬ ಭಾರತೀಯನಿಗೂ ರಾಷ್ಟ್ರ ಧ್ವಜದ ಈ ವಿಷಯ ತಿಳಿದಿರಲೇಬೇಕು

ಭಾರತದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜಕ್ಕೆ ತನ್ನದೇ ಆಗಿರುವ ವಿಶೇಷತೆಗಳಿದ್ದು ಕೂಡಿದ್ದು, ರಾಷ್ಟ್ರೀಯ ಧ್ವಜ ದತ್ತು ದಿನವು ಪ್ರಮುಖವಾಗಿದೆ. 1947ರಲ್ಲಿ ಜುಲೈ 22 ರಂದು ನಡೆಸಿದ ಸಂವಿಧಾನ ಸಭೆಯಲ್ಲಿ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಳ್ಳಲಾಯಿತು. ಹೀಗಾಗಿ ಜುಲೈ 22ರಂದು ರಾಷ್ಟ್ರೀಯ ಧ್ವಜ ಸ್ವೀಕಾರ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.

National Flag Adoption Day 2024 : ಪ್ರತಿಯೊಬ್ಬ ಭಾರತೀಯನಿಗೂ ರಾಷ್ಟ್ರ ಧ್ವಜದ ಈ ವಿಷಯ ತಿಳಿದಿರಲೇಬೇಕು
ರಾಷ್ಟ್ರೀಯ ಧ್ವಜ ದಿನ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 22, 2024 | 10:01 AM

ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಧ್ವಜವನ್ನು ಹೊಂದಿದೆ. ಆದರೆ ನಮ್ಮ ಭಾರತದ ರಾಷ್ಟ್ರೀಯ ಧ್ವಜವು ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಕಡು ಹಸಿರು ಬಣ್ಣ ಹೊಂದಿದ್ದು, ತ್ರಿವರ್ಣ ಧ್ವಜವಾಗಿದೆ. ಬಿಳಿಭಾಗದ ಮಧ್ಯದಲ್ಲಿ ಅಶೋಕ ಚಕ್ರವನ್ನು ಹೊಂದಿದೆ. ರಾಷ್ಟ್ರವನ್ನು ಪ್ರತಿನಿಧಿಸುವ ಭಾರತೀಯ ಧ್ವಜದ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಲುವಾಗಿ ಜುಲೈ 22 ರಂದು ರಾಷ್ಟ್ರೀಯ ಧ್ವಜ ಸ್ವೀಕಾರ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.

ತ್ರಿವರ್ಣಧ್ವಜ ಸ್ವೀಕರಿಸಿದ ದಿನದ ಇತಿಹಾಸ

ತ್ರಿವರ್ಣಧ್ವಜ ಸ್ವೀಕರಿಸಿದ ದಿನವೇ ಜುಲೈ 22, 1947. ಈ ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರೀಯ ಧ್ವಜವನ್ನಾಗಿ ಸ್ವೀಕರಿಸಲಾಯಿತು. ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುನ್ನವೇ ನಮ್ಮ ನಾಯಕರು ವಿಶ್ವಕ್ಕೆ ರಾಷ್ಟ್ರಧ್ವಜ ಹೇಗಿರಲಿದೆ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ 1947 ರ ಜುಲೈ 22 ರಂದು ಸಂವಿಧಾನ ಸಭೆಯಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಂಡ ಸವಿ ನೆನಪಿಗಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಜನವರಿ 26, 2002ರಲ್ಲಿ ಧ್ವಜವನ್ನು ಹಾರಿಸುವ ನಿಯಮಗಳಲ್ಲಿ ಸ್ವಲ್ಪ ಬದಲಾವಣೆಗಳನ್ನು ತಂದಿದೆ. ಧ್ವಜದ ನಿಯಮಗಳನ್ನು ಪಾಲಿಸುವ ಮೂಲಕ ಧ್ವಜವನ್ನು ಹಾರಿಸಬಹುದಾಗಿದೆ.

ಇದನ್ನೂ ಓದಿ: ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ಮಾವಿನ ತಳಿಗಳಿವೆ! ಯಾವುವು?

ರಾಷ್ಟ್ರಧ್ವಜದ ಬಗ್ಗೆ ಈ ವಿಷಯಗಳು ನಿಮಗೆ ತಿಳಿದಿರಲಿ

  1. ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯುವಾಗ, ಹಾರಿಸುವಾಗ ಕೇಸರಿ ಭಾಗ ಮೇಲೆ ಇರಬೇಕು.
  2. ರಾಷ್ಟ್ರ ಧ್ವಜದಲ್ಲಿ ಬೇರೆ ಧ್ವಜ ಅಥವಾ ಲಾಂಛನ ಇರಬಾರದು.
  3. ಪ್ರತಿದಿನವು ರಾಷ್ಟ್ರಧ್ವಜವನ್ನು ಪ್ರಮುಖ ಸರ್ಕಾರಿ ಕಟ್ಟಡಗಳು, ರಾಷ್ಟ್ರಪತಿ ಭವನ, ಸಂಸತ್‌ ಭವನ, ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳಲ್ಲಿ ಹಾರಿಸಬೇಕು.
  4. ಹರಿದ ಧ್ವಜ ಹಾಗೂ ಪ್ಲಾಸ್ಟಿಕ್ ಧ್ವಜವನ್ನು ಹಾರಿಸುವಂತಿಲ್ಲ.
  5. ತ್ರಿವರ್ಣ ಧ್ವಜ ಪಕ್ಕದಲ್ಲಿ ಬೇರೆ ಧ್ವಜವನ್ನು ಹಾರಿಸುವುದಾದರೆ ಅದನ್ನು ರಾಷ್ಟ್ರ ಧ್ವಜದ ಎಡಕ್ಕೆ ಸಾಲಿನಲ್ಲಿ ಹಾರಿಸಬೇಕು.
  6. ರಾಷ್ಟ್ರೀಯ ಧ್ವಜವನ್ನು ವೈಯಕ್ತಿಕ ವ್ಯವಹಾರಕ್ಕೆ ಬಳಸುವಂತಿಲ್ಲ ಹಾಗೂ ಹಾರಿಸುವಂತಿಲ್ಲ.
  7. ಸೂರ್ಯಾಸ್ತದ ಸಮಯದಲ್ಲಿ ರಾಷ್ಟ್ರ ಧ್ವಜವನ್ನು ಕೆಳಕ್ಕೆ ಇಳಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ