National Mango Day 2024 : ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ಮಾವಿನ ತಳಿಗಳಿವೆ! ಯಾವುವು?

ಮಾವಿನ ಹಣ್ಣುಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸುವಾಸನೆಭರಿತ ಮತ್ತು ರುಚಿಯ ಮೂಲಕ ಎಲ್ಲರನ್ನೂ ಆಕರ್ಷಿಸುವ ಹಣ್ಣುಗಳ ರಾಜ ಮಾವಿಗೆ ಒಂದು ದಿನವನ್ನು ಮೀಸಲಿಡಲಾಗಿದ್ದು, ಅದುವೇ ಜುಲೈ 22. ಈ ದಿನದಂದು ಪ್ರತಿ ವರ್ಷ ರಾಷ್ಟ್ರೀಯ ಮಾವು ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

National Mango Day 2024 : ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ಮಾವಿನ ತಳಿಗಳಿವೆ! ಯಾವುವು?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 22, 2024 | 9:43 AM

ಬಹುತೇಕರ ನೆಚ್ಚಿನ ಹಣ್ಣುಗಳಲ್ಲಿ ಮಾವು ಕೂಡ ಒಂದು. ಅತ್ಯಂತ ರುಚಿಕರ ಹಣ್ಣಾಗಿರುವ ಮಾವು ಮಾವನ್ನು ಹಣ್ಣುಗಳ ರಾಜ ಕೂಡ ಹೌದು. ಸಿಹಿ, ಹುಳಿ ಮಿಶ್ರಿತ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಡಿ ಸಮೃದ್ಧವಾಗಿರುವ ಆರೋಗ್ಯಕ್ಕೂ ಹಿತಕರ. ಭಾರತದಲ್ಲಿ ವಿವಿಧ ತಳಿಯ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಈ ಮಾವಿನ ಹಣ್ಣು ತಿನ್ನಲು ಮಾತ್ರವಲ್ಲದೇ, ಮಾವಿನ ಹಣ್ಣಿನ ರಸಾಯನ, ಉಪ್ಪಿನಕಾಯಿ, ಮ್ಯಾಂಗೋ ಐಸ್ ಕ್ರೀಮ್ ಸೇರಿದಂತೆ ವಿವಿಧ ರೀತಿಯಲ್ಲಿ ಸವಿಯಬಹುದು. ಮಾವಿಗೂ ಮನ್ನಣೆ ನೀಡುವ ಸಲುವಾಗಿ ಪ್ರತಿ ವರ್ಷ ಜುಲೈ 22 ರಂದು ರಾಷ್ಟ್ರೀಯ ಮಾವು ದಿನವನ್ನು ಆಚರಿಸಲಾಗುತ್ತದೆ

ರಾಷ್ಟ್ರೀಯ ಮಾವು ದಿನದ ಇತಿಹಾಸ

ಭಾರತ ದೇಶದಲ್ಲಿ ಸರಿಸುಮಾರು 5,000 ವರ್ಷಗಳಿಂದಲೂ ಮಾವಿನಹಣ್ಣು ಬಳಕೆಯಲ್ಲಿದೆ. ಪೋರ್ಚುಗಿಸರು ಕ್ರಿಶ 1498ರಲ್ಲಿ ಕೇರಳಕ್ಕೆ ಬಂದ ನಂತರ ‘ಮಂಗ’ ಎಂದು ಮಾವಿನಹಣ್ಣನ್ನು ಗುರುತಿಸಲು ಆರಂಭಿಸಿದರು. ಆದರೆ ಬೀಜಗಳ ಸಾಗಣೆಯ ಸಮಸ್ಯೆಯಿದ್ದ ಕಾರಣ ದಕ್ಷಿಣಾರ್ಧಗೋಳದಲ್ಲಿ ಕ್ರಿಶ 1700ನೇ ಇಸವಿಯವರೆಗೂ ಮಾವಿನಹಣ್ಣಿನ ಗಿಡಗಳನ್ನು ನೆಡಲು ಸಾಧ್ಯವಾಗಿರಲಿಲ್ಲ. ಮಾವು ಬೆಳೆಯಲು ಯೋಗ್ಯವಾದ ವಾತಾವರಣವು ಇರಲಿಲ್ಲ. ಆದರೆ 18ನೇ ಶತಮಾನದಲ್ಲಿ ಮೊದಲ ಬಾರಿಗೆ ಬ್ರೆಜಿಲ್​ನಲ್ಲಿ ಮಾವಿನಗಿಡವನ್ನು ನೆಡಲಾಯಿತು. ಆದಾದ ಬಳಿಕ ರೈತರು ಕೂಡ ಮಾವು ಬೆಳೆಯಲು ಮುಂದಾದರು. ಇಂದು ದೇಶದಲ್ಲಿ ವಿವಿಧ ತಳಿಯ ಮಾವಿನ ಹಣ್ಣು ಲಭ್ಯವಿದೆ.

ಇದನ್ನೂ ಓದಿ: ನಿಮ್ಮ ಪ್ರೇಮಿಯೊಂದಿಗೆ ಅಪ್ಪಿ ತಪ್ಪಿಯೂ ಈ ರೀತಿ ನಡೆದುಕೊಳ್ಳಬೇಡಿ; ಬ್ರೇಕ್​​​ಅಪ್​​ಗೆ ಕಾರಣವಾಗಬಹುದು

ಮಾವು ಕುರಿತಾದ ಕುತೂಹಲಕಾರಿ ವಿಷಯಗಳಿವು

  • ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ಮಾವಿನ ತಳಿಗಳಿವೆ.
  • ಮಾವು ಬಾಂಗ್ಲಾದೇಶದ ರಾಷ್ಟ್ರೀಯ ಮರವಾಗಿದ್ದು, 2019ರಲ್ಲಿ ಬಾಂಗ್ಲಾ ಸರ್ಕಾರವು ಈ ಕುರಿತು ಅಧಿಕೃತ ಆದೇಶ ಹೊರಡಿಸಿತ್ತು.
  • ಮಧ್ಯಪ್ರದೇಶದಲ್ಲಿ ಬೆಳೆಯುವ ‘ನೂರ್‌ಜಹಾನ್’ ತಳಿಯ ಒಂದು ಮಾವಿನ ಹಣ್ಣಿನ ಬೆಲೆ ಬರೋಬ್ಬರಿ 1200 ರೂಪಾಯಿಯಾಗಿದೆ.
  • ಮಾವಿನ ಹಣ್ಣುಗಳನ್ನು ಮೊದಲ ಬಾರಿ ಅಮೆರಿಕಾಗೆ ರಫ್ತು ಮಾಡಿದ ದೇಶ ಫ್ಲೋರಿಡಾ.
  • ಜಗತ್ತಿನ ಅತ್ಯಂತ ದುಬಾರಿ ಮಾವುವೆಂದರೆ ಅದುವೇ ಜಪಾನಿನಲ್ಲಿ ಬೆಳೆಯುವ ಮಿಯಝಾಕಿ ತಳಿಯ ಮಾವು..
  • ಕರ್ನಾಟಕದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಮಾವಿನಹಣ್ಣಿಗೆ ಹೆಸರುವಾಸಿವಾಗಿರುವ ಸ್ಥಳವಾಗಿದೆ.
  • ವಿಶ್ವದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯುವ ದೇಶ ಭಾರತವಾಗಿದೆ.
  • ಈ ಮಾವಿನ ಮರಗಳು ಸರಿಸುಮಾರು 115-131 ಅಡಿ ಎತ್ತರದವರೆಗೆ ಬೆಳೆಯುತ್ತವೆಯಂತೆ.
  • ಮಾವಿನಹಣ್ಣಿನಲ್ಲಿ 20ಕ್ಕೂ ಹೆಚ್ಚು ವಿಟಮಿನ್ ಮತ್ತು ಖನಿಜಗಳು ಇವೆ. ಇದನ್ನು ‘ಅತ್ಯುತ್ತಮ ಆಹಾರ’ ಎನ್ನಲಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ