AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Poornima: ಇಂದಿನ ಜೀವನದಲ್ಲಿ ಗುರುವಿನ ಪಾತ್ರವೇನು? ಈ ಬಗ್ಗೆ ಸದ್ಗುರು ಏನು ಹೇಳ್ತಾರೆ ನೋಡಿ

ಇಂದು (ಜುಲೈ 21) ಪ್ರಪಂಚದಾದ್ಯಂತ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಗುರು ಪೂರ್ಣಿಮೆ ಈ ಶುಭ ಸಂದರ್ಭದಲ್ಲಿ ನಮ್ಮ ಜೀವನದಲ್ಲಿ ಗುರುವಿನ ಪಾತ್ರದ ಕುರಿತು ಈಶಾ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾಗಿರುವ ಸದ್ಗುರು ವಾಸುದೇವ್ ಅವರು ನೀಡಿರುವ ಕೆಲ ಸಲಹೆಗಳು ಇಲ್ಲಿವೆ.

Guru Poornima: ಇಂದಿನ ಜೀವನದಲ್ಲಿ ಗುರುವಿನ ಪಾತ್ರವೇನು? ಈ ಬಗ್ಗೆ ಸದ್ಗುರು ಏನು ಹೇಳ್ತಾರೆ ನೋಡಿ
Sadhguru
ಅಕ್ಷತಾ ವರ್ಕಾಡಿ
|

Updated on:Jul 21, 2024 | 6:03 PM

Share

ಉತ್ತರಾಯಣದ ಆಷಾಢ ಮಾಸದಲ್ಲಿ ಬರುವ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಇಂದು (ಜುಲೈ 21) ಪ್ರಪಂಚದಾದ್ಯಂತ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಅಂಧಕಾರ ಎಂಬ ಅಜ್ಞಾನದಿಂದ ಬೆಳಕು ಎಂಬ ಜ್ಞಾನದ ಕಡೆಗೆ ಕರೆದೊಯ್ಯುವವನೇ ಗುರು. ಗುರು ಪೂರ್ಣಿಮೆ ಈ ಶುಭ ಸಂದರ್ಭದಲ್ಲಿ ನಮ್ಮ ಜೀವನದಲ್ಲಿ ಗುರುವಿನ ಪಾತ್ರದ ಕುರಿತು ಈಶಾ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾಗಿರುವ ಸದ್ಗುರು ವಾಸುದೇವ್ ಅವರು ನೀಡಿರುವ ಸಲಹೆಗಳು ಇಲ್ಲಿವೆ.

“ಈಗಿನ ಕಾಲದಲ್ಲಿ ಗುರುವಿನ ಪಾತ್ರವೇನು ಅಂತ ಬಂದಾಗ, ನನ್ನ ಪಾತ್ರ ಜನರನ್ನು ಸಾಂತ್ವಾನ ಪಡಿಸೋದಲ್ಲ. ಜನ ಅವರ ಬದುಕನ್ನು ಎಲ್ಲಾ ವಿಧವಾಗಿಯೂ ಸಂಪೂರ್ಣವಾಗಿ ಬದುಕುವ ಹಾಗೆ ಅವರನ್ನು ಪ್ರೇರೇಪಿಸೋದು. ಆಧ್ಯಾತ್ಮಿಕ ವಿಜ್ಞಾನ ಅಂದ್ರೆ ಮನುಷ್ಯ ಸಂಪೂರ್ಣವಾಗಿ ಬದುಕುವಂತೆ ಮಾಡೋದು. ಅದಕ್ಕಾಗಿ ಅವನನ್ನು ಜಾಗೃತಗೊಳಿಸೋದು. ಜೀವನವನ್ನು ಆಳವಾಗಿ ಮತ್ತು ಬೇರೆ ಬೇರೆ ಆಯಮಾಗಳಲ್ಲಿ ಅಂದರೆ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಕವಾಗಿ ಬದುಕುವುದೇ ಜೀವನದ ಉದ್ದೇಶ. ಆದರೆ ಈಗಿನ ಜನ ಆಧ್ಯಾತ್ಮಿಕ ಹೆಸರಲ್ಲಿ ಬದುಕನ್ನು ಬದುಕುವುದನ್ನು ತಿರಸ್ಕರಿಸುತ್ತಾರೆ. ನನ್ನ ಬಳಿ ಜನರು ಸಾಂತ್ಮಾನ, ನೆಮ್ಮದಿ ಬಗ್ಗೆ ಮಾತಾಡುತ್ತಾರೆ. ಬಾಂಧ್ಯವ್ಯದಿಂದ ದೂರವಿರುವುದರ ಬಗ್ಗೆ ಮಾತಾಡ್ತಾ ಜೀವನದಿಂದಲೇ ಹಿಂದೆ ಸರಿಯುತ್ತಿದ್ದಾರೆ” ಎಂದು ಹೇಳುತ್ತಾರೆ.

ಸದ್ಗರು ಹೇಳುವಂತೆ ,”ಜೀವನವನ್ನು ಅನುಭವಿಸುವ ಏಕೈಕ ಮಾರ್ಗವೆಂದರೆ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು. ಜೀವನದಲ್ಲಿ ನಿಮ್ಮ ಒಳಗೊಳ್ಳುವಿಕೆ ಅಂದರೆ ಆಸಕ್ತಿ ಆಳವಾದಷ್ಟೂ ನೀವು ಜೀವನವನ್ನು ಹೆಚ್ಚು ಅರಿಯುತ್ತೀರಿ. ಆದ್ದರಿಂದ, ಆಧ್ಯಾತ್ಮಿಕತೆ ಎಂದರೆ ಜೀವನದೊಂದಿಗೆ ಅಂತಿಮ ಒಳಗೊಳ್ಳುವಿಕೆ, ಜೀವನವನ್ನು ಭಯ ಅಥವಾ ಆತಂಕದಿಂದ ಹಿಂತೆಗೆದುಕೊಳ್ಳುವುದಲ್ಲ.

ಭಯವು ಜೀವನದ ಸಹಜ ಸ್ಥಿತಿಯಲ್ಲ. ಭಯವು ಸೀಮಿತ ಗ್ರಹಿಕೆಯಿಂದಾಗಿ ಬೆಳೆಸಿಕೊಂಡಿರುವ ವಿಷಯ. ಆದ್ದರಿಂದ, ಜೀವನವನ್ನು ನೋಡುವ ನಿಮ್ಮ ಸಾಮರ್ಥ್ಯ, ನಿಮ್ಮ ಗ್ರಹಿಕೆಯು ಹೆಚ್ಚಿದಂತೆ, ನೀವು ಜೀವನವನ್ನು ಹೆಚ್ಚು ಸ್ಪಷ್ಟತೆಯಿಂದ ನೋಡುತ್ತೀರಿ. ಇದರಿಂದ ನಿಮ್ಮ ಭಯವು ಕಡಿಮೆಯಾಗುತ್ತದೆ. ಭಯವು ನೀವು ನಿಭಾಯಿಸಬೇಕಾದ ವಿಷಯವಲ್ಲ. ನಿಮ್ಮ ಜೀವನದಲ್ಲಿ ನೀವು ತರಬೇಕಾದದ್ದು ಸ್ಪಷ್ಟತೆ. ನಿಮ್ಮ ಗ್ರಹಿಕೆಯನ್ನು ಅಂತಿಮ ಸಾಧ್ಯತೆಯವರೆಗೆ ಹೆಚ್ಚಿಸಲು ಯೋಗದ ಸಂಪೂರ್ಣ ವಿಜ್ಞಾನವು ಈ ಕಡೆಗೆ ಕೇಂದ್ರೀಕರಿಸಿದೆ.

ಇದನ್ನೂ ಓದಿ: ಚಂದ್ರ ದೋಷದಿಂದ ಮುಕ್ತಿ ಪಡೆಯಲು, ಪೂರ್ವಜರ ಆಶೀರ್ವಾದಕ್ಕಾಗಿ ಗುರು ಪೂರ್ಣಿಮಾ ದಿನ ಹೀಗೆ ಮಾಡಿ

ಯೋಗದಲ್ಲಿ, ನಾವು ಶಿವನನ್ನು ಆದಿಯೋಗಿ ಮತ್ತು ಆದಿ ಗುರುವಾಗಿ ಕಾಣುತ್ತೇವೆ. ಅಂದರೆ, ಅವನು ಮೊದಲ ಯೋಗಿ ಮತ್ತು ಮೊದಲ ಗುರು, ಮತ್ತು ಯಾವಾಗಲೂ ಅವನನ್ನು ಮೂರನೇ ಕಣ್ಣಿನಂತೆ ಚಿತ್ರಿಸಲಾಗುತ್ತದೆ. ಮೂರನೇ ಕಣ್ಣು ಎಂದರೆ ಅವನು ಹಣೆಯಲ್ಲಿ ಬಿರುಕು ಹೊಂದಿರುವ ವಿಲಕ್ಷಣ ಎಂದು ಅರ್ಥವಲ್ಲ. ಅವನ ಗ್ರಹಿಕೆಯು ಅದರ ಅಂತಿಮ ಸಾಧ್ಯತೆಯನ್ನು ತಲುಪಿದೆ ಎಂದರ್ಥ. ಆದ್ದರಿಂದ, ನಿಮ್ಮ ಗ್ರಹಿಕೆ ಸ್ಪಷ್ಟವಾದಷ್ಟೂ, ನಿಮ್ಮ ಜೀವನದಲ್ಲಿ ಭಯವು ಕಡಿಮೆಯಾಗುತ್ತದೆ” ಎಂದು ಅವರು ಹೇಳುತ್ತಾರೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:55 pm, Sun, 21 July 24

ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್