Mookambika-Adi Shankaracharya: ಕೇರಳದವರಿಗೆ ಕೊಲ್ಲೂರು ಮೂಕಾಂಬಿಕೆ ಯಾಕೆ ಕುಲದೇವರು!? ಅಲ್ಲಿನ ಮಹಿಳೆಯರು ಬಿಳಿ ಸೀರೆ ಉಡುವುದೇಕೆ?

Kollur Mookambika and Adi Shankaracharya: ತಾನು ಸನ್ಯಾಸಿಯಾಗಿ ತಾಯಿಯ ಹೆಣವನ್ನು ಸಂಸ್ಕಾರ ಮಾಡುವ ಹಾಗಿಲ್ಲ. ತನ್ನ ತಾಯಿ ವಿಧವೆ ಅನ್ನುವ ಕಾರಣಕ್ಕೆ ಊರ ಮಂದಿ ಯಾರೂ ಸಹಾಯ ಮಾಡುವುದಿಲ್ಲ. ಇನ್ನು ಕೆಲವರು ಸಹಾಯ ಮಾಡಲು ಬಂದವರನ್ನು ಸಹಾಯ ಮಾಡಲು ಬಿಡುವುದಿಲ್ಲ. ನಿಸ್ಸಾಹಯಕನಾಗಿ ತಾಯಿ ಕೊಲ್ಲೂರು ಮೂಕಾಂಬಿಕೆಯನ್ನು ನೆನೆದು ಬಿಡುತ್ತಾರೆ. ಪವಾಡ ನಡೆದೇ ಹೋಗುತ್ತದೆ.

Mookambika-Adi Shankaracharya: ಕೇರಳದವರಿಗೆ ಕೊಲ್ಲೂರು ಮೂಕಾಂಬಿಕೆ ಯಾಕೆ ಕುಲದೇವರು!? ಅಲ್ಲಿನ ಮಹಿಳೆಯರು ಬಿಳಿ ಸೀರೆ ಉಡುವುದೇಕೆ?
ಕೇರಳದ ಜನರಿಗೆ ಯಾಕೆ ಕೊಲ್ಲೂರು ಮೂಕಾಂಬಿಕೆ ಕುಲದೇವರು!?
Follow us
ಸಾಧು ಶ್ರೀನಾಥ್​
|

Updated on:Jul 22, 2024 | 9:55 AM

ಅದು ಕಾಲಡಿ – ಅಂದಿನ ಕೇರಳದ ಒಂದು ಪುಟ್ಟ ಊರು (Adi Shankaracharya, Kalady). ತಂದೆ ಇಲ್ಲದ ತಬ್ಬಲಿಯಾದ ಬಾಲ ಶಂಕರ ತನ್ನ ಬಾಲ್ಯದಲ್ಲೇ ಸನ್ಯಾಸ ದೀಕ್ಷೆಯನ್ನು ತೊಡುತ್ತಾನೆ. ಇದ್ದ ಒಬ್ಬನೇ ಮಗ ಸನ್ಯಾಸಿಯಾಗುತ್ತಾನೆ ಅಂದಾಗ ವಿಧವೆಯಾದ ತಾಯಿ ಆರ್ಯಂಬೆ ದಿಕ್ಕು ತೋಚದೆ ಮಗನನ್ನು ಅಪ್ಪಿ ಹಿಡಿದು ಅತ್ತು ಕೇಳುತ್ತಾಳೆ. ನಾನು ಸಾಯುವಾಗ ಒಂದು ತೊಟ್ಟು ನೀರು ಬಿಟ್ಟು, ನನ್ನ ಚಿತೆಗೆ ಕೊಳ್ಳಿ ಇಡುವವರು ಯಾರಿದ್ದಾರೆ? ನನಗೆ ಕಡೆಗಾಲ ಬಂದಾಗ ನಿನ್ನನ್ನು ಎಲ್ಲಿ ಹುಡುಕಲಿ? ಎನ್ನುತ್ತಾ ಕರುಳು ಕಿತ್ತು ಬರುವ ಹಾಗೆ ಅಳುತ್ತಾಳೆ (Mother, Son).

ಅಮ್ಮ ನಿನ್ನ ಕಡೆಗಾಲ ಬಂದಾಗ ಏಕ ಮನಸಿನಿಂದ ನನ್ನನ್ನು ಜ್ಞಾನಿಸು, ನೀನು ಜ್ಞಾನ ಮಾಡಿ ಕರೆದ ಅರೆ ಕ್ಷಣದಲ್ಲಿ ನಿನ್ನ ಕಣ್ಣ ಮುಂದೆ ನಿಂತು ನಿನ್ನ ಕಾರ್ಯಗಳನ್ನೆಲ್ಲಾ ನಡೆಸಿಕೊಡುತ್ತೇನೆ ಎಂದು ತಾಯಿಗೆ ಸಮಾಧಾನದ ಮಾತುಗಳನ್ನು ಹೇಳಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ದೇಶ ಪರ್ಯಟನೆಗೆ ಹೊರಡುತ್ತಾನೆ ಬಾಲ ಶಂಕರ.

ಅದೊಂದು ದಿನ ತಾಯಿ ಆರ್ಯಂಬೆ ತಾನು ಸಾಯುವ ಕಾಲ ಸಮಿಸುತ್ತಿದೆ ಅನ್ನುವಾಗ ಮಗ ಶಂಕರ ಹೇಳಿದಂತೆ ಮನಸಿನಲ್ಲೆ ಸಾವಿನ ಮಂಚದಿಂದ ಮಗನನ್ನು ಜ್ಞಾನದಿಂದ ಕೂಗಿ ಕರೆಯುತ್ತಾಳೆ. ತಾಯಿಯ ಕರುಳಿನ ಕೂಗು ಶಂಕರಾಚಾರ್ಯರಿಗೆ ಮುಟ್ಟುತ್ತದೆ. ತಡ ಮಾಡದೆ ತಾಯಿಯ ಮುಂದೆ ನಿಲ್ಲುತ್ತಾರೆ ಶಂಕರಾಚಾರ್ಯರು!

Also Read:  ಬನ್ನಿ ಪುರಾತನ ಭಾರತ ಮಾತೆ ದೇವಸ್ಥಾನಕ್ಕೆ ಹೋಗಿಬರೋಣ, ಇಲ್ಲಿ ದೇವರುಗಳಿಲ್ಲ -ದೇಶಭಕ್ತಿ ತುಂಬಿದೆ!

ತನ್ನ ಮಗನನ್ನು ಕಣ್ಣು ತುಂಬಾ ನೋಡಿದ ತಾಯಿ ಮಗ ಬಿಟ್ಟ ತುಳಸಿ ನೀರಿನೊಂದಿಗೆ ನೆಮ್ಮದಿಯಿಂದ ಪ್ರಾಣ ಬಿಡುತ್ತಾಳೆ. ಶಂಕರಾಚಾರ್ಯರಿಗೆ ಅಗ್ನಿ ಪರೀಕ್ಷೆಯಾಗುತ್ತದೆ… ತಾಯಿಯ ಸಾವು. ತಾನು ಸನ್ಯಾಸಿಯಾಗಿ ತಾಯಿಯ ಹೆಣವನ್ನು ಸಂಸ್ಕಾರ ಮಾಡುವ ಹಾಗಿಲ್ಲ. ತನ್ನ ತಾಯಿ ವಿಧವೆ ಅನ್ನುವ ಕಾರಣಕ್ಕೆ ಊರ ಮಂದಿ ಯಾರೂ ಸಹಾಯ ಮಾಡುವುದಿಲ್ಲ. ಇನ್ನು ಕೆಲವರು ಸಹಾಯ ಮಾಡಲು ಬಂದವರನ್ನು ಸಹಾಯ ಮಾಡಲು ಬಿಡುವುದಿಲ್ಲ. ನಿಸ್ಸಾಹಯಕನಾಗಿ ತಾಯಿ ಕೊಲ್ಲೂರು ಮೂಕಾಂಬಿಕೆಯನ್ನು (Karnataka Kollur Mookambika) ನೆನೆದು ಬಿಡುತ್ತಾರೆ. ಪವಾಡ ನಡೆದೇ ಹೋಗುತ್ತದೆ.

Also Read: Anjaneya Swamy: ಆಂಜನೇಯನ ಮೇಲೆ ತಾಯಿ ಆಂಜನಿ ದೇವಿಗೆ ಬೇಸರ ಮೂಡುತ್ತದೆ, ಆ ಸಂದರ್ಭ ಯಾವುದು?

ತಾಯಿಯ ದೇಹವನ್ನು ಯೋಗ ಮಾಯೆಯ ಅಗ್ನಿಯಿಂದ ಸುಡುತ್ತಾರೆ:

ಇಂತಹ ಕ್ಲಿಷ್ಟ ಸಮಯದಲ್ಲೂ ಸಹಾಯ ಮಾಡದ ಊರ ಜನರ ಮೇಲೆ ಕೋಪ ತಾನಾಗಿಯೇ ಮೂಡುತ್ತದೆ. ವಿಧವೆ ಎಂದು ತಾತ್ಸಾರದಿಂದ ನೋಡಿದ ಈ ಊರಲ್ಲಿ ಎಲ್ಲರೂ ವಿಧವೆಯರಾಗಿ ಇರಲಿ ಎಂದು ಶಪಿಸಿ ಹೊರಟು ಹೋಗುತ್ತಾರೆ. ದಿನ ಕಳೆದಂತೆ ಶಾಪ ಫಲಿಸುತ್ತದೆ. ಅನೇಕ ಮಾಂಗಲ್ಯಗಳು ಕಳಚಿ ಬೀಳುತ್ತವೆ.

Also Read:  No Entry for Men Devotees – ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ, ಅದರಲ್ಲಿ 2 ಪುರುಷರದ್ದೇ ದೇವಾಲಯಗಳು! ಯಾಕೀ ಶಾಪ, ಕಟ್ಟುಪಾಡು?

ಮೂಢ ನಂಬಿಕೆಗಳ ಗೋಡೆ ನಶಿಸಿ ಹೋಗಿ ತಮ್ಮ ತಪ್ಪಿನ ಅರಿವಾಗುತ್ತದೆ. ಓಡೋಡಿ ಬಂದು ಶಂಕರಾಚಾರ್ಯರಲ್ಲಿ ಕ್ಷಮೆಯನ್ನು ಕೇಳಿ ತಪ್ಪನ್ನು ಮನ್ನಿಸುವಂತೆ ಬೇಡಿಕೊಳ್ಳುತ್ತಾರೆ. ಕರುಣೆಗೊಂಡ ಶಂಕರಾಚಾರ್ಯರು ಕನಿಕರದಿಂದ ಮಂಗಳ ಪ್ರದಾಯಿನಿಯಾದ ಕೊಲ್ಲೂರು ಮೂಕಾಂಬಿಕೆಯ ದರ್ಶನವನ್ನು ಮಾಡಿದರೆ ನಿಮ್ಮ ಸಕಲ ವಿಘ್ನಗಳೂ ದೂರವಾಗಿ, ನಿಮ್ಮ ಮಾಂಗಲ್ಯಗಳು ಗಟ್ಟಿಯಾಗುತ್ತವೆ ಎಂದು ಪರಿಮಾರ್ಜನೆಯ ದಾರಿ ತೋರಿಸುತ್ತಾರೆ. ವಿಧವೆಯರು ಅಮಂಗಳೆಯರಲ್ಲ ಅನ್ನುವುದಕ್ಕೆ ಬಿಳಿಯ ಸೀರೆ ಉಡುವ ಸಂಪ್ರದಾಯ ಅಂದಿನಿಂದ ಕೇರಳದಲ್ಲಿ ಶುರುವಾಗುತ್ತದೆ. ವಿಶೇಷವಾಗಿ ಓಣಂ ಸಂದರ್ಭದಲ್ಲಿ ಶ್ವೇತವರ್ಣದ ಸೀರೆಯುಟ್ಟು ಸಂಪ್ರದಾಯ ಆಚರಿಸುತ್ತಾರೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

Published On - 6:06 am, Mon, 22 July 24