Anjaneya Swamy: ಆಂಜನೇಯನ ಮೇಲೆ ತಾಯಿ ಆಂಜನಿ ದೇವಿಗೆ ಬೇಸರ ಮೂಡುತ್ತದೆ, ಆ ಸಂದರ್ಭ ಯಾವುದು?
Anjana Devi and Anjaneya Swamy: ತನ್ನ ತಾಯಿಯ ಬಾಯಿಂದ ಈ ಮಾತನ್ನು ಕೇಳಿದ ಹನುಮನ ಹೀಗೆ ಹೇಳುತ್ತಾನೆ: ನನಗೆ ನನ್ನ ಸ್ವಾಮಿ ಶ್ರೀ ರಾಮನ ಆದೇಶವಿತ್ತು. ಹೀಗಾಗಿ ನಾನು ಅಸಹಾಯಕನಾಗಿದ್ದೆ. ಇಲ್ಲದಿದ್ದರೆ ನಿನಗೆ ನನ್ನ ಮೇಲೆ ಯಾವ ಅಪವಾದಕ್ಕೂ ಅವಕಾಶ ಕೊಡುತ್ತಿರಲಿಲ್ಲ. ಆದರೆ ಆ ರಾವಣನ ಮೃತ್ಯು ನನ್ನ ಕೈಯಿಂದಲ್ಲ, ಪ್ರಭು ಶ್ರೀ ರಾಮನ ಕೈಯಿಂದ ಬರೆದಿತ್ತು. ವಿಧಿಯ ಈ ವಿಧಾನವನ್ನು ನನ್ನಿಂದ ಹೇಗೆ ಬದಲಾಯಿಸಲು ಸಾಧ್ಯ? ಎಂದು ಆಂಜನೇಯ ವಿವರಿಸುತ್ತಾನೆ.
Anjana Devi: ಅಂಜನಾದೇವಿ ತನ್ನ ಪುತ್ರ ಹನುಮನ ಮೇಲೆ ಅದೊಮ್ಮೆ ಬೇಸರಗೊಳ್ಳುತ್ತಾಳೆ! ಯಾಕೆ? ತಿಳಿಯೋಣ ಬನ್ನಿ. ರಾಮಾಯಣದಲ್ಲಿ ಯುದ್ಧ ಮುಕ್ತಾಯವಾದ ಮೇಲೆ ಹಿಂದಿರುಗುವಾಗ ದಾರಿಯಲ್ಲಿ ಹನುಮನ ಮನೆಯು ಎದುರಾಗುತ್ತದೆ. ಆಗ ತನ್ನ ತಾಯಿಯ ನೆನಪಾಗಿ ಹನುಮಾನ ಶ್ರೀರಾಮನೊಂದಿಗೆ ನಾವೆಲ್ಲ ನಮ್ಮ ಮನೆಗೆ ಹೋಗಿ ಅಲ್ಲಿರುವ ನನ್ನ ತಾಯಿಯ ದರ್ಶನ ಮಾಡಬಹುದೇ..? ಎಂದು ಕೇಳುತ್ತಾನೆ. ಪ್ರಭು ಶ್ರೀ ರಾಮನು ಹನುಮನಿಗೆ ಆಜ್ಞಾಪೂರ್ವಕವಾಗಿ ಹೀಗೆ ಹೇಳುತ್ತಾನೆ. ಅವರು ಕೇವಲ ನಿನ್ನ ತಾಯಿ ಅಲ್ಲ, ನನ್ನ ತಾಯಿಯೂ ಆಗಿದ್ದಾರೆ. ನಾನು ಕೂಡ ಅವರ ದರ್ಶನ ಮಾಡಬಯಸುತ್ತೇನೆ ಎಂದು ಹೇಳುತ್ತಾನೆ.
ಆಗ ಸಂತೋಷಗೊಂಡ ಎಲ್ಲರೂ ಸೇರಿ ಅಂಜನಾದೇವಿಯನ್ನು ಭೇಟಿಯಾಗಲು ಹೋದರು. ತನ್ನ ತಾಯಿಯ ಚರಣಗಳನ್ನು ಸ್ಪರ್ಶಿಸಿ ಅವಳಿಗೆ ಮನಪೂರ್ವಕ ವಂದನೆ ತಿಳಿಸಿದ ಹನುಮ, ತನ್ನ ಜೊತೆಗಿದ್ದ ಎಲ್ಲರನ್ನೂ ತಾಯಿಗೆ ಪರಿಚಯಿಸುತ್ತಾನೆ. ತಾಯಿ ಅಂಜನಾದೇವಿ ಪ್ರಭು ಶ್ರೀ ರಾಮನ ವಿಷಯವಾಗಿ ಎಲ್ಲ ಸಂಗತಿಯನ್ನೂ ಚೆನ್ನಾಗಿ ಬಲ್ಲವಳಾಗಿದ್ದಳು. ಶ್ರೀರಾಮ ಸಹ ತನ್ನನ್ನು ತಾಯಿಯೆಂದು ಸಂಬೋಧಿಸುವುದನ್ನು ಕೇಳಿ ಗದ್ಗದಿತಳಾದಳು.
ನಂತರ ಲಂಕೆಯ ಮೇಲೆ ವಿಜಯ ಪ್ರಾಪ್ತ ಮಾಡಿಕೊಂಡ ಬಗ್ಗೆ ಆರಂಭದಿಂದ ಎಲ್ಲ ಕಥೆಯನ್ನು ಹನುಮ ತನ್ನ ತಾಯಿಗೆ ವಿವರಿಸಿದ. ಕಥೆ ಕೇಳಿದ ಮೇಲೆ ಅಂಜನಾ ಮಾತೆಯು ಹನುಮನ ಮೇಲೆ ಬಹಳ ಕ್ರೋಧಿತಳಾಗುತ್ತಾಳೆ. ಆಗ ಅಂಜನಾ ದೇವಿಯು ಹೀಗೆ ಹೇಳಿದಳು – ಧಿಕ್ಕಾರವಿರಲಿ ನನಗೆ, ನಿನ್ನಂತ ಸಂತಾನಕ್ಕೆ ಜನ್ಮ ಕೊಟ್ಟು ನಾನು ಹಾಲು ಕುಡಿಸಿ ಪೋಷಿಸಿದ್ದಕ್ಕೆ. ನೀನು ಇಷ್ಟೊಂದು ಬಲಿಶಾಲಿಯಾಗಿದ್ದರೂ ಪ್ರಭುವಿಗೆ ಪರಿಶ್ರಮ ಮಾಡಿಸಿದೆ. ಅರೆ ಮೂರ್ಖ! ನಿನ್ನಲ್ಲಿ ಇಷ್ಟೊಂದು ಶಕ್ತಿ ಇದೆ. ನೀನು ರಾವಣ ಸಹಿತವಾಗಿ ಲಂಕೆಯನ್ನೇ ಸಮುದ್ರದಲ್ಲಿ ಮುಳುಗಿಸುವವನು! ಅಷ್ಟು ಸಾಮರ್ಥ್ಯವುಳ್ಳವನಾಗಿದ್ದ ನೀನು ಅಲ್ಲಿದ್ದೂ.. ಅಲ್ಲಿ ಯಾಕೆ ರಾಮ ಸೇತು ನಿರ್ಮಾಣವಾಯಿತು, ಯಾಕೆ ವಾನರರು ಕೂಡ ಬಲಿಯಾದರು? ಎಂದು ಪ್ರಶ್ನಿಸುತ್ತಾಳೆ.
ತನ್ನ ತಾಯಿಯ ಬಾಯಿಂದ ಈ ಮಾತನ್ನು ಕೇಳಿದ ಹನುಮನ ಹೀಗೆ ಹೇಳುತ್ತಾನೆ: ನನಗೆ ನನ್ನ ಸ್ವಾಮಿ ಶ್ರೀ ರಾಮನ ಆದೇಶವಿತ್ತು. ಹೀಗಾಗಿ ನಾನು ಅಸಹಾಯಕನಾಗಿದ್ದೆ. ಇಲ್ಲದಿದ್ದರೆ ನಿನಗೆ ನನ್ನ ಮೇಲೆ ಯಾವ ಅಪವಾದಕ್ಕೂ ಅವಕಾಶ ಕೊಡುತ್ತಿರಲಿಲ್ಲ. ಆದರೆ ಆ ರಾವಣನ ಮೃತ್ಯು ನನ್ನ ಕೈಯಿಂದಲ್ಲ, ಪ್ರಭು ಶ್ರೀ ರಾಮನ ಕೈಯಿಂದ ಬರೆದಿತ್ತು. ವಿಧಿಯ ಈ ವಿಧಾನವನ್ನು ನನ್ನಿಂದ ಹೇಗೆ ಬದಲಾಯಿಸಲು ಸಾಧ್ಯ. ರಾವಣನ ಮೃತ್ಯು ಮೊದಲೇ ಬರೆಯಲಾಗಿತ್ತು. ಅವನ ಸಾವು ಅದೇ ರೀತಿ ಸಂಭವಿಸುವುದಿತ್ತು ಎಂದು ಆಂಜನೇಯ ವಿವರಿಸುತ್ತಾನೆ.
ಆಗ ತಾಯಿ ಅಂಜನಾದೇವಿಯು ಹೇಳಿದಳು… ಪುತ್ರನೇ ನೀನು ಸರಿಯಾಗಿ ಹೇಳುತ್ತಿರುವೆ. ನಿನ್ನ ಕಡೆಯಿಂದ ನೀನು ಪರಿಪೂರ್ಣನಾಗಿರುವೆ. ನನಗೆ ಗರ್ವವಿದೆ ನಿನ್ನಂತ ಪುತ್ರನು ನನ್ನ ಗರ್ಭದಲ್ಲಿ ಜನಿಸಿದ ಎಂದು. ಈ ರೀತಿ ಹೇಳಿ ತಾಯಿ ಅಂಜನಾದೇವಿಯು ಶಾಂತಳಾದಳು. ಪ್ರತಿಕ್ಷಣ ಹನುಮನನ್ನು ಭಕ್ತಿಯಿಂದ ವಂದಿಸುವವರಿಗೆ… ಸ್ವರ್ಗದಲ್ಲಿ ದೇವತೆಗಳು ಕೂಡ ಅವರನ್ನು ಅಭಿನಂದಿಸುತ್ತಾರೆ ಎಂ ಮಾತಿದೆ. ಜೈ ಶ್ರೀರಾಮ್.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)