ರಾಜೇಶ್ ಕೃಷ್ಣನ್ ಬಗ್ಗೆ ಎಸ್ಪಿಬಿಗೆ ಇತ್ತು ವಿಶೇಷ ಹೆಮ್ಮೆ
ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರು ರಾಜೇಶ್ ಕೃಷ್ಣನ್ ಅವರ ಗಾಯನ ಶೈಲಿಯನ್ನು ಮೆಚ್ಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿದೆ. ಗಾಯಕ ರಾಜೇಶ್ ಕೃಷ್ಣನ್ ಅವರು ಕನ್ನಡ ಚಿತ್ರರಂಗದಲ್ಲಿ ಗಾಯಕ ಮತ್ತು ನಟರಾಗಿ ಯಶಸ್ವಿಯಾಗಿದ್ದಾರೆ. ‘ಸರಿಗಮಪ’ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ.
ಎಸ್ಪಿ ಬಾಲಸುಬ್ರಮಣ್ಯಮ್ ಅವರು ಚಿತ್ರರಂಗ ಕಂಡ ಶ್ರೇಷ್ಠ ಗಾಯಕರಲ್ಲಿ ಒಬ್ಬರು. ಅವರು ಸಾವಿರಾರು ಹಾಡುಗಳನ್ನು ಹಾಡಿದ್ದರೂ ಅವರಿಗೆ ಯಾವುದೇ ಅಹಂ ಇರಲಿಲ್ಲ. ಎಂದಿಗೂ ಅವರು ಅಹಂ ತೋರಿಸಿದವರಲ್ಲ. ದೊಡ್ಡ ಗಾಯಕರಿರಲಿ, ಚಿಕ್ಕ ಗಾಯಕರಿರಲಿ ಅವರು ಎಲ್ಲರ ಜೊತೆಯೂ ಸಮನಾಗಿ ನಡೆದುಕೊಳ್ಳುತ್ತಿದ್ದರು. ಈಗ ಅವರು ರಾಜೇಶ್ ಕೃಷ್ಣನ್ ಬಗ್ಗೆ ಮಾತನಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜೇಶ್ ಕೃಷ್ಣನ್ ಕೂಡ ಓರ್ವ ಅದ್ಭುತ ಗಾಯಕ. ಕನ್ನಡದವರೇ ಆದ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಉತ್ತಮವಾಗಿ ಅವರು ಹಾಡುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಅವರ ಬಗ್ಗೆ ಅನೇಕರು ಮಾತನಾಡಿದ್ದು ಇದೆ. ಅದೇ ರೀತಿ ರಾಜೇಶ್ ಕೃಷ್ಣನ್ ಬಗ್ಗೆ ಎಸ್ಪಿಬಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.
‘ರಾಜೇಶ್ ಅಂತ ಒಬ್ಬ ಸಿಂಗರ್ ಇದಾನೆ. ಸೇಮ್ ಟು ಸೇಮ್ ನನ್ನ ಹಾಗೇ ಹಾಡ್ತಾನೆ. ಎಷ್ಟೋ ಬಾರಿ ನಾನೇ ಮೋಸ ಹೋಗಿದ್ದೀನಿ’ ಎಂದು ರಾಜೇಶ್ ಕೃಷ್ಣನ್ ಬಗ್ಗೆ ಎಸ್ಪಿಬಿ ಸಂದರ್ಶನದಲ್ಲ ಗರ್ವದಿಂದ ಹೇಳಿಕೊಂಡಿದ್ದರು. ರಾಜೇಶ್ ಅವರ ಕಲೆಯನ್ನು ಎಸ್ಪಿಬಿ ಅವರು ಮೆಚ್ಚಿಕೊಂಡಿದ್ದರು.
View this post on Instagram
90ರ ದಶಕದಿಂದ ರಾಜೇಶ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಗೌರಿ ಗಣೇಶ’ ಚಿತ್ರದ ‘ಮಾತಿನಲ್ಲೆ..’ ಹಾಡನ್ನು ಅವರು ಹಾಡಿದರು. ‘ಹುಚ್ಚ’ ಚಿತ್ರದ ‘ಉಸಿರೇ.. ಉಸಿರೇ’ ಹಾಡಿ ಸಾಕಷ್ಟು ಹೆಸರು ಮಾಡಿದರು. ಅವರು ಸಾಕಷ್ಟು ಅವಾರ್ಡ್ ಪಡೆದಿದ್ದಾರೆ. ಅವರು ನಟನಾಗಿಯೂ ಫೇಮಸ್ ಆಗಿದ್ದಾರೆ. ‘ಗಾಳಿಪಟ’ ಚಿತ್ರದಲ್ಲಿ ಕಿಟ್ಟಿ ಆಗಿ ಅವರು ಕಾಣಿಸಿಕೊಂಡಿದ್ದರು. ಅವರ ಪಾತ್ರ ಗಮನ ಸೆಳೆದಿತ್ತು.
ಇದನ್ನೂ ಓದಿ: ಸರಿಗಮಪ ಶೋನಿಂದ ರಾಜೇಶ್ ಕೃಷ್ಣನ್ ಹೊರಹೋಗಲು ಅನುಶ್ರೀ ಕಾರಣ’; ಅಚ್ಚರಿ ವಿಚಾರ ಹೇಳಿದ ವಿಜಯ್ ಪ್ರಕಾಶ್
ರಾಜೇಶ್ ಕೃಷ್ಣನ್ ಅವರು ಸದ್ಯ ‘ಸರಿಗಮಪ’ ಹೊಸ ಸೀಸನ್ನ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದಾರೆ. ಅವರನ್ನು ಜಡ್ಜ್ ಆಗಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವರು ‘ಎದೆ ತುಂಬು ಹಾಡುವೆನು’ಗಾಗಿ ‘ಸರಿಗಮಪ’ ಶೋ ಬಿಟ್ಟು ಕಲರ್ಸ್ ಕನ್ನಡ ಶೋಗೆ ಹೋಗಿದ್ದರು. ಆದರೆ, ಈಗ ಅವರು ಮರಳಿದ್ದಾರೆ. ಈ ಕಾರಣಕ್ಕೆ ಫ್ಯಾನ್ಸ್ ತುಂಬಾನೇ ಖುಷಿಪಟ್ಟಿದ್ದಾರೆ. ಅವರ ಜೊತೆ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:07 am, Sat, 4 January 25