ಸರಿಗಮಪ ಶೋನಿಂದ ರಾಜೇಶ್ ಕೃಷ್ಣನ್ ಹೊರಹೋಗಲು ಅನುಶ್ರೀ ಕಾರಣ’; ಅಚ್ಚರಿ ವಿಚಾರ ಹೇಳಿದ ವಿಜಯ್ ಪ್ರಕಾಶ್

Reality Show: ಸರೆಗಮಪ ಹೊಸ ಸೀಸನ್ ಪ್ರಾರಂಭ ಆಗಿದೆ. ರಾಜೇಶ್ ಕೃಷ್ಣನ್ ಮತ್ತೆ ಜಡ್ಜ್ ಆಗಿ ಶೋಗೆ ವಾಪಸ್ಸಾಗಿದ್ದಾರೆ. ಆದರೆ ಈ ಹಿಂದೆ ಅವರು ಶೋ ಬಿಟ್ಟು ಹೋಗಲು ಕಾರಣ ಏನೆಂಬುದನ್ನು ವಿವರಿಸಲಾಗಿದೆ. ಅನುಶ್ರೀ ಅವರಿಂದ ರಾಜೇಶ್ ಕೃಷ್ಣನ್ ಶೋ ಬಿಟ್ಟು ಹೊರಗೆ ಹೋಗಿದ್ದರಂತೆ.

ಸರಿಗಮಪ ಶೋನಿಂದ ರಾಜೇಶ್ ಕೃಷ್ಣನ್ ಹೊರಹೋಗಲು ಅನುಶ್ರೀ ಕಾರಣ’; ಅಚ್ಚರಿ ವಿಚಾರ ಹೇಳಿದ ವಿಜಯ್ ಪ್ರಕಾಶ್
ರಾಜೇಶ್ ಕೃಷ್ಣನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Dec 14, 2024 | 10:21 PM

‘ಸರಿಗಮಪ’ ಶೋ ಮತ್ತೆ ಆರಂಭ ಆಗಿರೋದು ಗೊತ್ತೇ ಇದೆ. ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ (ಡಿಸೆಂಬರ್ 14) ಈ ಶೋ ಪ್ರಸಾರ ಆರಂಭಿಸಿದೆ. ಈ ಶೋಗೆ ಮೆಗಾ ಆಡಿಷನ್​ಗೆ ಈ ಬಾರಿ ಬರೋಬ್ಬರಿ 40 ಸ್ಪರ್ಧಿಗಳು ಇದ್ದು, ಈ ಪೈಕಿ ಕೆಲವು ಸ್ಪರ್ಧಿಗಳನ್ನು ಫೈನಲ್ ಆಗಲಿದ್ದಾರೆ. ಈ ಬಾರಿ ಜಡ್ಜ್ ಸ್ಥಾನದಲ್ಲಿ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಇದ್ದಾರೆ. ಸ್ಪರ್ಧಿಗಳನ್ನು ಈ ಮೂವರನ್ನು ಫೈನಲ್ ಮಾಡಲಿದ್ದಾರೆ. ರಾಜೇಶ್ ಕೃಷ್ಣನ್ ಎಂಟ್ರಿಗೆ ಫನ್ ಮಾಡಲಾಯಿತು.

ರಾಜೇಶ್ ಕೃಷ್ಣನ್ ಅವರು ಈ ಮೊದಲು ‘ಸರಿಗಮಪ’ ಶೋ ಜಡ್ಜ್ ಸ್ಥಾನದಲ್ಲಿ ಇದ್ದರು. ಆ ಬಳಿಕ ಅವರು ಕಾರಣಾಂತರಗಳಿಂದ ಈ ಶೋನ ಬಿಟ್ಟು ಹೋದರು. ಅವರು ಈ ಶೋನ ತೊರೆದು ಮೂರು ವರ್ಷಗಳು ಕಳೆದಿವೆ. ಈಗ 2024ರ ಅಂತ್ಯದಲ್ಲಿ ಆರಂಭ ಆಗಿರುವ ‘ಸರಿಗಮಪ’ ಶೋಗೆ ಅವರು ಮತ್ತೆ ಆಗಮಿಸಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ. ರಾಜೇಶ್ ಕೃಷ್ಣನ್ ಅವರು ಈ ಶೋ ಬಿಡಲು ಅನುಶ್ರೀ ಕಾರಣ ಎಂದು ವಿಜಯ್ ಪ್ರಕಾಶ್ ಅವರು ಕಾಲೆಳೆದಿದ್ದಾರೆ.

View this post on Instagram

A post shared by Zee Kannada (@zeekannada)

‘ನೀವು ಬಂದಿದ್ದು ಬಹಳ ಸಂತೋಷ ಆಯಿತು. ನೀವು ನನ್ನ ಗುರುಗಳು’ ಎಂದು ಅನುಶ್ರೀ ಹೇಳಿದರು. ಇದಕ್ಕೆ ಫನ್ ಆಗಿ ಉತ್ತರ ಕೊಟ್ಟರು ವಿಜಯ್ ಪ್ರಕಾಶ್. ‘ಅನುಶ್ರೀ ಇದಾಳೆ ಎಂದೇ ಅಲ್ಲವೇ ನೀವು ಶೋನ ಬಿಟ್ಟು ಹೋಗಿದ್ದು’ ಎಂದರು. ಇದಕ್ಕೆ ರಾಜೇಶ್ ಕೃಷ್ಣನ್ ಹೌದು ಎಂದರು. ಆ ಬಳಿಕ ಇದಕ್ಕೆ ಕಾರಣ ವಿವರಿಸಲಾಯಿತು.

ಇದನ್ನೂ ಓದಿ:ಬರ್ತಿದೆ ‘ಸರಿಗಮಪ’ ಶೋ; ಜಡ್ಜ್ ಸ್ಥಾನಕ್ಕಾಗಿ ಮತ್ತೆ ಬಂದ ರಾಜೇಶ್ ಕೃಷ್ಣನ್

‘ಅನುಶ್ರೀ ಸಂಗೀತ ಹೇಳಿಕೊಡಿ ಎಂದು ಕೇಳಿ ಕೇಳಿ ರಾಜೇಶ್ ಕೃಷ್ಣನ್ ಅವರು ಸುಸ್ತಾಗಿದ್ದಾರೆ. ಅನುಶ್ರೀಗೆ ಸಂಗೀತ ಕಲಿಸುವ ಪ್ರಯತ್ನದಲ್ಲಿ ಈಗ ರಾಜೇಶ್​ಗೆ ಐದೇ ಸ್ವರ ನೆನಪಿದೆ. ಶೋ ಬಿಡೋಕೆ ನೀವೇ ಕಾರಣ’ ಎಂದು ಅನುಶ್ರೀ ಬಗ್ಗೆ ಫನ್ ಮಾಡಿದರು ವಿಜಯ್ ಪ್ರಕಾಶ್. ಇದಕ್ಕೆ ರಾಜೇಶ್ ಕೃಷ್ಣನ್ ಕೂಡ ಹೌದು ಎಂದರು. ‘ಸರಿಗಮಪ’ ಅವರು ಈ ಬಾರಿ 40 ಸ್ಪರ್ಧಿಗಳು ಇದ್ದಾರೆ. ಮೆಗಾ ಆಡಿಷನ್ ನಡೆಯುತ್ತಿದೆ. ಕೆಲವು ವಾರಗಳ ಈ ಆಡಿಷನ್ ಪ್ರಸಾರ ಕಾಣಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ