ಪರಸ್ಪರ ಜಗಳ ಮಾಡಿಕೊಂಡ ಧನರಾಜ್-ರಜತ್ಗೆ ಶಿಕ್ಷೆ ನೀಡಿದ ಕಿಚ್ಚ
Bigg Boss Kannada: ಬಿಗ್ಬಾಸ್ ಕನ್ನಡದಲ್ಲಿ ಧನರಾಜ್ ಮತ್ತು ರಜತ್ ಪರಸ್ಪರ ಕಿತ್ತಾಡಿಕೊಂಡಿದ್ದರು. ಧನರಾಜ್ ಮೇಲೆ ಹಲ್ಲೆ ಮಾಡಲು ರಜತ್ ಮುಂದಾಗಿದ್ದರು. ಆದರೆ ಮನೆಯವರು ಇಬ್ಬರನ್ನೂ ತಡೆದರು. ಶನಿವಾರದ ಎಪಿಸೋಡ್ಗೆ ಬಂದಿದ್ದ ಸುದೀಪ್, ಇಬ್ಬರಿಗೂ ಶಿಕ್ಷೆ ನೀಡಿದ್ದಾರೆ. ಮುಂದಿನ ಆದೇಶ ಬರುವವರೆಗೆ ರಜತ್ ಜೈಲಿನಲ್ಲಿ ಇರಬೇಕಿದೆ.
ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ಹಲವು ಘಟನೆಗಳು ನಡೆದಿವೆ. ಗೌತಮಿ ಕ್ಯಾಪ್ಟನ್ ಆಗಿದ್ದಾರೆ. ಗೌತಮಿ ಹಾಗೂ ಮಂಜು ಪರಸ್ಪರ ದೂರಾಗಿದ್ದಾರೆ. ತ್ರಿವಿಕ್ರಮ್-ಚೈತ್ರಾ ಜೈಲಿಗೆ ಹೋಗಿದ್ದಾರೆ. ಮನೆಯವರಿಗೆ ಶಿಕ್ಷೆ ಕೊಡಲು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಧನರಾಜ್ ಮತ್ತು ರಜತ್ ಸಖತ್ ಆಗಿ ಜಗಳ ಮಾಡಿಕೊಂಡಿದ್ದಾರೆ. ತನಗೆ ಕಳಪೆ ಕೊಟ್ಟಿದ್ದಕ್ಕೆ ಸಿಟ್ಟಾದ ರಜತ್, ಧನರಾಜ್ಗೆ ಮೇಲೆ ಹಲ್ಲೆಗೆ ಮುಂದಾಗಿದ್ದರು. ಕೊನೆಗೆ ಮನೆಯವರ ಮಧ್ಯ ಪ್ರವೇಶದಿಂದ ಜಗಳ ಅಷ್ಟಕ್ಕೆ ನಿಂತಿತು.
ನಿನ್ನೆ ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಈ ವಿಷಯವಾಗಿ ಮಾತನಾಡಿದರು. ‘ನೀವೇನು ಮನುಷ್ಯರಾಗಿ ಇರಲು ಮನೆಯ ಒಳಗೆ ಹೋಗಿದ್ದೀರೋ ಅಥವಾ ಪ್ರಾಣಿಗಳಾಗಿ ಇರಲು ಮನೆಗೆ ಹೋಗಿದ್ದೀರೋ?’ ಎಂದು ಪ್ರಶ್ನೆ ಮಾಡಿದರು. ಮಾತು ಮುಂದುವರೆಸಿ, ಧನರಾಜ್ಗೆ, ‘ನೀವೇಕೆ ರಜತ್ ಕೆನ್ನೆ ತಟ್ಟಿ ಅವರಿಗೆ ಕೋಪ ಬರಿಸುವ ಪ್ರಯತ್ನ ಮಾಡಿದಿರಿ’ ಎಂದು ಪ್ರಶ್ನಿಸಿದರು. ಇನ್ನು ರಜತ್ಗೆ ನಿಮ್ಮ ನಾಲಗೆ ಮೇಲೆ ಹಿಡಿತ ಇರಲಿ, ಚೆನ್ನಾಗಿ ಆಡುತ್ತಿದ್ದೀರಿ ಆದರೆ ಆಡುವ ಭಾಷೆ ಮೇಲೆ ಹಿಡಿತ ಇರಲಿ’ ಎಂದರು.
ಧನರಾಜ್ ಹಾಗೂ ರಜತ್ ಗೆ ಪರಸ್ಪರ ಅಪ್ಪಿಕೊಂಡು ರಾಜಿ ಆಗುವಂತೆ ಹೇಳಿದ ಸುದೀಪ್, ಕೊನೆಗೆ ಇಬ್ಬರಿಗೂ ಶಿಕ್ಷೆಯೊಂದನ್ನು ನೀಡಿದರು. ಒಂದು ಚಕ್ರಗಳಿರುವ ಜೈಲು ತರಿಸಿ, ಅದರಲ್ಲಿ ರಜತ್ ಸೇರಿಕೊಳ್ಳುವಂತೆ ಹೇಳಿದರು. ಮುಂದಿನ ಆದೇಶ ಬರುವವರೆಗೆ ರಜತ್ ಆ ಜೈಲಿನಲ್ಲಿಯೇ ಇರಬೇಕು. ಆ ಚಕ್ರಗಳಿರುವ ಜೈಲನ್ನು ಧನರಾಜ್ ಮನೆಯಲ್ಲೆಲ್ಲ ತಳ್ಳಿಕೊಂಡು ಓಡಾಡಬೇಕು. ರಜತ್ ಎಲ್ಲಿ ಹೇಳುತ್ತಾರೋ ಅಲ್ಲಿಗೆ ಆ ಜೈಲನ್ನು ತಳ್ಳಬೇಕು.
ಇದನ್ನೂ ಓದಿ:ಬಿಗ್ಬಾಸ್ಗೆ ಯಾವ ಸ್ಪರ್ಧಿಯಿಂದ ಎಷ್ಟು ಟಿಆರ್ಪಿ ಬರುತ್ತೆ?
ಆ ಮೂಲಕ ಇಬ್ಬರಿಗೂ ಶಿಕ್ಷೆ ನೀಡಿದರು ಸುದೀಪ್. ಆದರೆ ರಜತ್ಗೆ ಇದು ಸಮಸ್ಯೆ ಆಯ್ತು. ಬಟ್ಟೆ ಬದಲಿಸುವುದು ನಿದ್ದೆ ಮಾಡುವುದು, ಟಾಯ್ಲೆಟ್ಗೆ ಹೋಗುವುದು ಎಲ್ಲ ಹೇಗೆ ಎಂಬುದು ರಜತ್ ಪ್ರಶ್ನೆ. ಆದರೆ ರಜತ್ ಪ್ರಶ್ನೆಗಳಿಗೆ ಸುದೀಪ್ ಉತ್ತರ ನೀಡಲಿಲ್ಲ. ಮುಂದಿನ ಆದೇಶ ಬರುವವರೆಗೆ ಧನರಾಜ್ ಆ ಪುಟ್ಟ ಜೈಲಿನಲ್ಲೇ ಇರಬೇಕಿದೆ. ಧನರಾಜ್, ರಜತ್ ಹೇಳಿದಲ್ಲೆಲ್ಲ ಆ ಜೈಲನ್ನು ತಳ್ಳಿಕೊಂಡು ಓಡಾಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:31 am, Sun, 15 December 24