‘ನಂಗೇನು ತೆವಲಾ’: ಮೊದಲ ಬಾರಿಗೆ ಭವ್ಯಾ ವಿರುದ್ಧ ತಿರುಗಿಬಿದ್ದ ತ್ರಿವಿಕ್ರಂ
Bigg Boss Kannada: ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಈ ಮೊದಲು ಇಬ್ಬರೂ ‘ಬಿಗ್ ಬಾಸ್ ಕನ್ನಡ ಮಿನಿ ಸೀಸನ್ನಲ್ಲಿ ಭಾಗಿ ಆಗಿದ್ದರು. ಈ ಕಾರಣಕ್ಕೋ ಏನೋ ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಇವರು ಒಟ್ಟಾಗಿ ಆಟ ಆಡುತ್ತಿದ್ದಾರೆ. ಆದರೆ, ಈ ಬಾಡಿಂಗ್ ಇಬ್ಬರ ಆಟದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಅನೇಕರ ಅಭಿಪ್ರಾಯ. ಈಗ ಇಬ್ಬರ ಮಧ್ಯೆ ಕಿರಿಕ್ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಈ ಮೊದಲು ಇಬ್ಬರೂ ‘ಬಿಗ್ ಬಾಸ್ ಕನ್ನಡ ಮಿನಿ ಸೀಸನ್ನಲ್ಲಿ ಭಾಗಿ ಆಗಿದ್ದರು. ಈ ಕಾರಣಕ್ಕೋ ಏನೋ ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಇವರು ಒಟ್ಟಾಗಿ ಆಟ ಆಡುತ್ತಿದ್ದಾರೆ. ಆದರೆ, ಈ ಬಾಡಿಂಗ್ ಇಬ್ಬರ ಆಟದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಅನೇಕರ ಅಭಿಪ್ರಾಯ. ಈಗ ಇಬ್ಬರ ಮಧ್ಯೆ ಕಿರಿಕ್ ಆಗಿದೆ.
ಈ ವಾರ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಂ ಅವರು ಕಳಪೆ ಆಗಿದ್ದರು. ಈ ಕಾರಣಕ್ಕೆ ಇಬ್ಬರೂ ಜೈಲು ಸೇರಿದ್ದಾರೆ. ಅಲ್ಲಿ ಇಡೀ ಮನೆಯ ಸ್ಪರ್ಧಿಗಳಿಗೆ ತೊಂದರೆ ಕೊಟ್ಟಿದ್ದಾರೆ. ಈ ತೊಂದರೆ ಮಿತಿಮೀರಿದೆ. ಈ ಕಾರಣಕ್ಕೆ ಅನೇಕರಿಗೆ ಬೇಸರ ಆಗಿದೆ. ಈ ಮಧ್ಯೆ ತ್ರಿವಿಕ್ರಂ ಅವರು ಭವ್ಯಾ ಗೌಡ ಅವರಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಭವ್ಯಾ ಗೌಡ ಅವರು ದೂರದಲ್ಲಿ ಕಸ ಗುಡಿಸುತ್ತಾ ಇದ್ದರು. ಆಗ ತ್ರಿವಿಕ್ರಂ ಅವರು ಭವ್ಯಾ ಗೌಡ ಅವರನ್ನು ಕರೆದರು. ‘ಇಲ್ಲಿ ನನಗೆ ಡಸ್ಟ್ ಅಲರ್ಜಿ ಆಗುತ್ತಿದೆ. ಬಂದು ಕಸ ಗುಡಿಸಿ’ ಎಂದರು ತ್ರಿವಿಕ್ರಂ. ಆದರೆ, ಭವ್ಯಾ ಗೌಡ ಬರಲಿಲ್ಲ. ‘ಏನು ನಿಮ್ಮ ಸಮಸ್ಯೆ’ ಎಂದು ಭವ್ಯಾ ಕೇಳಿದರು. ಇದಕ್ಕೆ ತ್ರಿವಿಕ್ರಂ ಸಿಟ್ಟಾದರು.
‘ನನಗೆ ಡಸ್ಟ್ ಅಲರ್ಜಿ ಆಗುತ್ತಿದೆ. ಬಂದು ಕಸ ಗುಡಿಸಿ. ನಂಗೇನು ಸುಮ್ಮನೆ ಹೇಳೋಕೆ ತೆವಲಾ? ನೀವೇ ನಮ್ಮನ್ನು ಒಳಕ್ಕೆ ಕಳುಹಿಸಿದ್ದು’ ಎಂದು ಕೂಗಾಡಿಕೊಂಡರು ತ್ರಿವಿಕ್ರಂ. ಅವರ ಮಾತಿನಿಂದ ಭವ್ಯಾ ಗೌಡ ಅವರು ಸಾಕಷ್ಟು ಬೇಸರಗೊಂಡರು. ತ್ರಿವಿಕ್ರಂ ಬಳಿ ಅವರು ಜಗಳಕ್ಕೆ ಇಳಿದರು. ಆ ಬಳಿಕ ಅಸಲಿ ವಿಚಾರ ಏನು ಎಂಬುದು ಗೊತ್ತಾಯಿತು.
ಭವ್ಯಾ ಗೌಡ ಅವರು ಜೈಲಿನ ಬಳಿ ಬಂದು ಹರಟೆ ಹೊಡೆಯಬೇಕು ಎಂಬುದು ತ್ರಿವಿಕ್ರಂ ಅವರ ಆಸೆ ಆಗಿತ್ತು. ಆದರೆ, ಈ ಆಸೆ ಈಡೇರಿಸಿಕೊಳ್ಳಲು ತ್ರಿವಿಕ್ರಂ ಅವರು ಇಷ್ಟೆಲ್ಲ ಸಾಹಸ ಮಾಡಿದರು. ‘ನೀವೇ ತಾನೇ ಆಗ ಇಲ್ಲಿಗೆ ಬರಬೇಡಿ ಎಂದು ಹೇಳಿದ್ದು. ಈಗ ನೋಡಿದರೆ ಬನ್ನಿ ಎನ್ನುತ್ತಿದ್ದೀರಲ್ಲ’ ಎಂದರು ಭವ್ಯಾ ಗೌಡ. ಅಲ್ಲಿಗೆ ಇಬ್ಬರ ಮಧ್ಯೆ ಎಲ್ಲವೂ ಸಮಸ್ಯೆ ಬಗೆಹರಿಯಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ