ಸುದೀಪ್ ಎದುರು ಬೆಣ್ಣೆ ಹಚ್ಚಿ ಮಾತನಾಡಿದ ಗೌತಮಿ; ಸರಿಯಾಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ

ಬಿಗ್ ಬಾಸ್ ಮನೆಯಲ್ಲಿ ಶನಿವಾರದ ಎಪಿಸೋಡ್​ನಲ್ಲಿ ಎಲ್ಲರಿಗೂ ಕ್ಲಾಸ್ ತೆಗೆದುಕೊಳ್ಳಲಾಗುತ್ತದೆ. ಭಾನುವಾರ ಫನ್ ಇರುತ್ತದೆ. ಆ ದಿನ ಸುದೀಪ್ ಅವರು ಯಾರಿಗೂ ಬೈಯ್ಯೋಕೆ ಹೋಗಲ್ಲ. ಆದಾಗ್ಯೂ ಅವರು ಗೌತಮಿ ಅವರಿಗೆ ಪಾಠ ಮಾಡುವ ಪರಿಸ್ಥಿತಿ ಬಂದಿದೆ. ಈ ಪರಿಸ್ಥಿತಿಯನ್ನು ಸ್ವತಃ ಅವರೇ ತಂದುಕೊಂಡಿದ್ದಾರೆ. ಇದಕ್ಕೆ ಸುದೀಪ್ ಬುದ್ಧಿವಾದ ಹೇಳಿದ್ದಾರೆ.

ಸುದೀಪ್ ಎದುರು ಬೆಣ್ಣೆ ಹಚ್ಚಿ ಮಾತನಾಡಿದ ಗೌತಮಿ; ಸರಿಯಾಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ
ಗೌತಮಿ-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Dec 16, 2024 | 7:34 AM

ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಅವರು ಬೆಣ್ಣೆ ಹಚ್ಚಿ ಮಾತನಾಡಬೇಡಿ ಎಂದು ಸಾಕಷ್ಟು ಬಾರಿ ಕೇಳಿಕೊಂಡಿದ್ದು ಇದೆ. ಆದರೆ, ಇದನ್ನು ಮನೆಯ ಯಾರೊಬ್ಬರೂ ಕೇಳುತ್ತಿಲ್ಲ. ಪದೇ ಪದೇ ಇದೇ ತಪ್ಪನ್ನು ಮಾಡುತ್ತಿದ್ದಾರೆ. ಈಗ ಈ ವಿಚಾರ ಚರ್ಚೆಗೆ ಬಂದಿದೆ. ಸುದೀಪ್ ಎದುರೇ ಪಾಲಿಶ್ ಆಗಿ ಮಾತನಾಡಲು ಹೋದ ಗೌತಮಿ ಅವರು ಸರಿಯಾಗಿ ಪಾಠ ಹೇಳಿಸಿಕೊಂಡಿದ್ದಾರೆ. ಭಾನುವಾರದ ಎಪಿಸೋಡ್​ನಲ್ಲಿ ಅದು ಹೈಲೈಟ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಶನಿವಾರದ ಎಪಿಸೋಡ್​ನಲ್ಲಿ ಎಲ್ಲರಿಗೂ ಕ್ಲಾಸ್ ತೆಗೆದುಕೊಳ್ಳಲಾಗುತ್ತದೆ. ಭಾನುವಾರ ಫನ್ ಇರುತ್ತದೆ. ಆ ದಿನ ಸುದೀಪ್ ಅವರು ಯಾರಿಗೂ ಬೈಯ್ಯೋಕೆ ಹೋಗಲ್ಲ. ಆದಾಗ್ಯೂ ಅವರು ಗೌತಮಿ ಅವರಿಗೆ ಪಾಠ ಮಾಡುವ ಪರಿಸ್ಥಿತಿ ಬಂದಿದೆ. ಈ ಪರಿಸ್ಥಿತಿಯನ್ನು ಸ್ವತಃ ಅವರೇ ತಂದುಕೊಂಡಿದ್ದಾರೆ. ಇದಕ್ಕೆ ಸುದೀಪ್ ಬುದ್ಧಿವಾದ ಹೇಳಿದ್ದಾರೆ.

ಬಾಕ್ಸಿಂಗ್ ಸೆಟ್​ನ ನಿರ್ಮಿಸಲಾಗಿತ್ತು. ಯಾರದ್ದಾದರೂ ವಿರುದ್ಧ ಕೋಪ ತೀರಿಸಿಕೊಳ್ಳಬೇಕು ಎಂದರೆ ಅವರ ಫೋಟೋನ ಅಂಟಿಸಿ, ಅದಕ್ಕೆ ಬಾಕ್ಸಿಂಗ್ ಗ್ಲೌಸ್​ನಿಂದ ಗುದ್ದಬೇಕಿತ್ತು. ಈ ಕೆಲಸವನ್ನು ಮನೆಯವರು ಮಾಡಿದ್ದಾರೆ. ಆದರೆ, ಗೌತಮಿ ಮಾತ್ರ ಇದಕ್ಕೆ ರಾಗ ಎಳೆದರು. ‘ನನಗೆ ಯಾರ ಮೇಲೂ ಕೋಪ ಇಲ್ಲ. ಆದರೂ..’ ಎಂದು ಹೇಳಲು ಹೋದರು. ಇದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಜೊತೆಗೆ ಗೌತಮಿಗೆ ಪಂಚ್ ಮಾಡುವ ಅವಕಾಶ ನೀಡಲೇ ಇಲ್ಲ.

ಇದನ್ನೂ ಓದಿ: ತಂದೆ ನಿಧನ ಹೊಂದಿದ್ದಕ್ಕೆ ಹೊರ ಹೋದ್ರಾ ಗೋಲ್ಡ್ ಸುರೇಶ್? ಇಲ್ಲಿದೆ ಅಸಲಿ ವಿಚಾರ

‘ಟಾಸ್ಕ್ ಕೊಟ್ಟಾಗ ಮನೆಯ ಎಲ್ಲ ಸ್ಪರ್ಧಿಗಳು ಮಾಡಿದರು. ಆದರೂ ಎಂಬ ಪದ ಬಂದಾಗ, ಅದು ಸುಗರ್ ಕೋಟೆಡ್ ಆಗುತ್ತದೆ. ಈ ಟಾಸ್ಕ್ ಕೊಟ್ಟ ಅವರು ಮೂರ್ಖರು. ನಿಮ್ಮ ಪ್ರಕಾರ ಯಾರು ಕಳಪೆ ಎಂದು ಕೇಳ್ತೀನಿ. ಇಲ್ಲಿ ಯಾರೂ ಕಳಪೆ ಇಲ್ಲ ಆದರೂ ಹೇಳ್ತೀನಿ ಎಂದೆಲ್ಲ ಹೇಳೋಕೆ ಹೋದಾಗ ಅದು ಪಾಲಿಶ್​ ಸಾಲುಗಳಾಗುತ್ತದೆ. ಆ ಸಾಲುಗಳು ಅಗತ್ಯವಿಲ್ಲ’ ಎಂದಿದ್ದಾರೆ ಅವರು. ಆ ಬಳಿಕ ಪಂಚ್ ಮಾಡಲು ಸುದೀಪ್ ಅವರು ಅವಕಾಶವನ್ನು ಕೊಡಲೇ ಇಲ್ಲ. ಆ ಬಳಿಕ ಗೌತಮಿ ಅವರು ಕಣ್ಣೀರು ಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗೆದ್ರೆ ಪಕ್ಷದ್ದು, ಸೋತ್ರೆ ಇವಿಎಂನದ್ದು: ಒಮರ್ ಅಬ್ದುಲ್ಲಾ ವ್ಯಂಗ್ಯ
ಗೆದ್ರೆ ಪಕ್ಷದ್ದು, ಸೋತ್ರೆ ಇವಿಎಂನದ್ದು: ಒಮರ್ ಅಬ್ದುಲ್ಲಾ ವ್ಯಂಗ್ಯ
‘ಮ್ಯಾಕ್ಸ್’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮ; ಲೈವ್​ ವಿಡಿಯೋ ನೋಡಿ..
‘ಮ್ಯಾಕ್ಸ್’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮ; ಲೈವ್​ ವಿಡಿಯೋ ನೋಡಿ..
ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!