ಬರ್ತಿದೆ ‘ಸರಿಗಮಪ’ ಶೋ; ಜಡ್ಜ್ ಸ್ಥಾನಕ್ಕಾಗಿ ಮತ್ತೆ ಬಂದ ರಾಜೇಶ್ ಕೃಷ್ಣನ್

ಜೀ ಕನ್ನಡ ವಾಹಿನಿ ಹೊಸ ಪ್ರೋಮೋ ಒಂದನ್ನು ರಿಲೀಸ್ ಮಾಡಿದೆ. ಈ ಪ್ರೋಮೋದಲ್ಲಿ ಬೀಚ್ ಪಕ್ಕ ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ನಿಂತಿರುತ್ತಾರೆ. ‘ನಾವೆಲ್ಲ ಸಿಕ್ಕಿ ಎಷ್ಟು ದಿನ ಆಯ್ತು’ ಎನ್ನುವಾಗಲೇ ರಾಜೇಶ್ ಕೃಷ್ಣನ್ ಆಗಮನ ಆಗುತ್ತದೆ.

ಬರ್ತಿದೆ ‘ಸರಿಗಮಪ’ ಶೋ; ಜಡ್ಜ್ ಸ್ಥಾನಕ್ಕಾಗಿ ಮತ್ತೆ ಬಂದ ರಾಜೇಶ್ ಕೃಷ್ಣನ್
ಬರ್ತಿದೆ ‘ಸರಿಗಮಪ’ ಶೋ; ಜಡ್ಜ್ ಸ್ಥಾನಕ್ಕಾಗಿ ಮತ್ತೆ ಬಂದ ರಾಜೇಶ್ ಕೃಷ್ಣನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 26, 2024 | 7:57 AM

ಈ ಮೊದಲು ‘ಸರಿಗಮಪ’ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಅವರು ಜಡ್ಜ್ ಆಗಿದ್ದರು. ಕಲರ್ಸ್ ಕನ್ನಡದಲ್ಲಿ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಆರಂಭ ಆದ ಬಳಿಕ ರಾಜೇಶ್ ಅವರು ಅಲ್ಲಿಗೆ ತೆರಳಿದರು. ಈ ಕಾರಣಕ್ಕೆ ಅವರು ಈ ಕಾರ್ಯಕ್ರಮದಿಂದ ದೂರ ಆಗಬೇಕಾಯಿತು. ಈ ಬಗ್ಗೆ ಫ್ಯಾನ್ಸ್​ಗೆ ಬೇಸರ ಇತ್ತು. ಈಗ ಬೇಸರ ದೂರ ಆಗುವ ಸಮಯ ಬಂದಿದೆ. ರಾಜೇಶ್ ಕೃಷ್ಣನ್ ಅವರು ಮರಳಿ ಜೀ ಕನ್ನಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಜೀ ಕನ್ನಡ ವಾಹಿನಿ ಹೊಸ ಪ್ರೋಮೋ ಒಂದನ್ನು ರಿಲೀಸ್ ಮಾಡಿದೆ. ಈ ಪ್ರೋಮೋದಲ್ಲಿ ಬೀಚ್ ಪಕ್ಕ ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ನಿಂತಿರುತ್ತಾರೆ. ‘ನಾವೆಲ್ಲ ಸಿಕ್ಕಿ ಎಷ್ಟು ದಿನ ಆಯ್ತು’ ಎನ್ನುವಾಗಲೇ ರಾಜೇಶ್ ಕೃಷ್ಣನ್ ಆಗಮನ ಆಗುತ್ತದೆ. ಮೂವರೂ ಸೇರಿ ಹೊಸದಾಗಿ ಏನಾದರೂ ಅಡ್ವೆಂಚರ್ ಆ್ಯಕ್ಟಿವಿಟಿ ಮಾಡೋಣ ಎನ್ನುವ ನಿರ್ಧಾರಕ್ಕೆ ಬರುತ್ತಾರೆ.

ಮೊದಲು ಮೂವರು ಸೇರಿ ಸ್ಕೈ ಡೈವಿಂಗ್ ಮಾಡುತ್ತಾರೆ. ಆದರೆ, ಥ್ರಿಲ್ ಬರೋದೇ ಇಲ್ಲ. ನಂತರ ಮರಳುಗಾಡಲ್ಲಿ ತೂಫಾನ್ ಬರುವಾಗ ಇವರು ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಾರೆ. ಅಲ್ಲಿಯೂ ಅವರಿಗೆ ಮಜಾ ಸಿಗೋದಿಲ್ಲ. ಆ ಬಳಿಕ ಹಿಮಾಲಯಕ್ಕೆ ಟ್ರೆಕ್ ಹೋಗುತ್ತಾರೆ. ಏನೇ ಆದರೂ ಥ್ರಿಲ್ ಮಾತ್ರ ಸಿಗೋದಿಲ್ಲ.

View this post on Instagram

A post shared by Zee Kannada (@zeekannada)

‘ಆಕಾಶದಿಂದ ಭೂಮಿಯತನಕ ಓಡಾಡಿದ್ವಿ. ಥ್ರಿಲ್ ಮಾತ್ರ ಸಿಕ್ಕಿಲ್ಲ’ ಎಂದ ಅವರಿಗೆ ಆಗ ಕಾಣೋದೇ ಸರಿಗಮಪ. ‘ಥ್ರಿಲ್ ಎಲ್ಲಿ ಸಿಗುತ್ತದೆ ಅನ್ನೋದು ಗೊತ್ತಾಯ್ತು’ ಎನ್ನುತ್ತಾರೆ ಅವರು. ‘ಸರಿಗಮಪ’ ಶೀಘ್ರದಲ್ಲೇ ಬರಲಿದೆ ಎಂದು ಹೇಳಲಾಗಿದೆ. ‘ನೀವಿಷ್ಟು ದಿನ ಕಾತರ, ಕುತೂಹಲದಿಂದ ಕಾಯ್ತಿದ್ದ ಸಂಗೀತ ಸಾಮ್ರಾಜ್ಯದ ವೈಭವ ಹೊಸ ಥ್ರಿಲ್‌ನೊಂದಿಗೆ ಮತ್ತೆ ಬರ್ತಿದೆ ನಿಮ್ಮ ಮುಂದೆ.  ಸರಿಗಮಪ ಅತಿ ಶೀಘ್ರದಲ್ಲಿ’ ಎಂಬ ಕ್ಯಾಪ್ಶನ್ ನೀಡಲಾಗಿದೆ.

ಇದನ್ನೂ ಓದಿ: ಎಸ್​.ಪಿ. ಬಾಲಸುಬ್ರಹ್ಮಣ್ಯಂ ನೆನೆದು ಹಾಡುವಾಗಲೇ ಕಣ್ಣೀರಿಟ್ಟ ರಾಜೇಶ್​ ಕೃಷ್ಣನ್​

ರಾಜೇಶ್ ಕೃಷ್ಣನ್ ಬಂದಿದ್ದು ಅನೇಕರಿಗೆ ಖುಷಿ ನೀಡಿದೆ. ‘ರಾಜೇಶ್ ಕೃಷ್ಣನ್ ಬಂದಿದ್ದಾರೆ ಈ ಸಲ ಸರಿಗಮಪ ಷೋ ತುಂಬಾ ಚೆನ್ನಾಗಿರುತ್ತದೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ರಾಜೇಶ್ ಕೃಷ್ಣನ್ ಬಂದಿದ್ದು ಖುಷಿ ಇದೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್