ಬಿಗ್ ಬಾಸ್ ಮನೆಯಲ್ಲಿ ಬೆಳಿಗ್ಗೆ ಯಶ್ ಸಿನಿಮಾ ಹಾಡು; ಇದಕ್ಕಿದೆ ವಿಶೇಷ ಕಾರಣ

ಬಿಗ್ ಬಾಸ್ ಕನ್ನಡದಲ್ಲಿ ಬೆಳಗ್ಗೆ ಯಾವ ಹಾಡುಗಳು ಹಾಕುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸುತ್ತದೆ. ಯಶ್ ಅವರ ‘ಕೆಜಿಎಫ್’ ಚಿತ್ರದ ‘ಧೀರ ಧೀರ..’ ಹಾಡು ಪ್ಲೇ ಆಗಿ ಅಭಿಮಾನಿಗಳನ್ನು ಖುಷಿಪಡಿಸಿದೆ. ದರ್ಶನ್ ಅವರ ಹಾಡು ಕೂಡ ಕೇಳಿಸಿದೆ. ರಾಜಾಡಳಿತದ ಟಾಸ್ಕ್‌ಗೆ ಸಂಬಂಧಿಸಿದಂತೆ ‘ಧೀರ ಧೀರ’ ಹಾಡು ಆಯ್ಕೆಯಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಬೆಳಿಗ್ಗೆ ಯಶ್ ಸಿನಿಮಾ ಹಾಡು; ಇದಕ್ಕಿದೆ ವಿಶೇಷ ಕಾರಣ
ಯಶ್
Follow us
ರಾಜೇಶ್ ದುಗ್ಗುಮನೆ
|

Updated on:Nov 26, 2024 | 8:35 AM

‘ಬಿಗ್ ಬಾಸ್’ನಲ್ಲಿ ಮುಂಜಾನೆ ಯಾವ ಸಾಂಗ್ ಹಾಕುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಸದಾ ಇರುತ್ತದೆ. ಈ ವಿಚಾರವಾಗಿ ಸದಾ ಚರ್ಚೆಗಳು ನಡೆಯುತ್ತವೆ. ದರ್ಶನ್ ಫ್ಯಾನ್ಸ್ ನಮ್ಮ ನೆಚ್ಚಿನ ನಟನ ಸಾಂಗ್ ಹಾಕೋದಿಲ್ಲ ಎಂದು ತಕರಾರು ತೆಗೆದಿದ್ದು ಇದೆ. ಅದೇ ರೀತಿ ಯಶ್ ಸಿನಿಮಾ ಹಾಡುಗಳು ಪ್ಲೇ ಆಗಿದ್ದು ಕಡಿಮೆ. ಈಗ ನವೆಂಬರ್ 25ರ ಎಪಿಸೋಡ್​ನಲ್ಲಿ ಒಂದು ಅಚ್ಚರಿ ಕಾದಿತ್ತು. ಬಿಗ್ ಬಾಸ್​ನಲ್ಲಿ ಮುಂಜಾನೆ ಯಶ್ ಸಿನಿಮಾ ಹಾಡು ಪ್ಲೇ ಆಗಿದೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಯಶ್ ಹಾಗೂ ಸುದೀಪ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಆದರೆ, ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು ಕಡಿಮೆ. ಇವರ ಮಧ್ಯೆ ಏನೋ ವೈಮನಸ್ಸು ಇದೆ ಎಂಬ ವಿಚಾರ ಆಗಾಗ ಚರ್ಚೆ ಆಗುತ್ತಾ ಇರುತ್ತದೆ. ಈ ಕಾರಣಕ್ಕೆ ಯಶ್ ಸಿನಿಮಾ ಹಾಡನ್ನು ಸುದೀಪ್ ನೇತೃತ್ವದ ಬಿಗ್ ಬಾಸ್ ಮನೆಯಲ್ಲಿ ಹಾಕೋದಿಲ್ಲ ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅದು ಸುಳ್ಳಾಗಿದೆ.

‘ಕೆಜಿಎಫ್’ ಚಿತ್ರದ ‘ಧೀರ ಧೀರ..’ ಹಾಡನ್ನು ಪ್ಲೇ ಮಾಡಲಾಗಿದೆ. ಈ ಹಾಡನ್ನು ಕೇಳುತ್ತಿದ್ದಂತೆ ಮನೆ ಮಂದಿ ಜೋಶ್​ನಲ್ಲಿ ಕುಣಿದಾಡಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿದೆ. ಇದಕ್ಕೆ ರವಿ ಬಸ್ರೂರು ಅವರೇ ಸಾಹಿತ್ಯ ಬರೆದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈ ಹಾಡನ್ನು ಪ್ಲೇ ಮಾಡಲು ಒಂದು ಕಾರಣ ಇದೆ. ಅದುವೇ ರಾಜಾಡಳಿತದ ಟಾಸ್ಕ್. ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿರೋ ಮಂಜು ಅವರು ಮನೆಯ ರಾಜನಾಗಿದ್ದಾರೆ. ಅವರ ಆಡಳಿತದಲ್ಲಿ ಇಡೀ ಮನೆ ಸಾಗುತ್ತಿದೆ. ‘ಧೀರ..’ ಹಾಡಿನಲ್ಲಿ ‘ಧೀರ ಧೀರ ಧೀರ ಈ ಸುಲ್ತಾನ’ ಎನ್ನುವ ಸಾಲುಗಳು ಬರತ್ತವೆ. ಹೀಗಾಗಿ, ಟಾಸ್ಕ್​​ನ ಮುನ್ಸೂಚನೆಯಾಗಿ ಈ ಹಾಡನ್ನು ಹಾಕಲಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಬಂತು ದರ್ಶನ್ ಹಾಡು; ಕುಣಿದಾಡಿದ ರಜತ್

ಇನ್ನು, ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಹಾಡು ಕೂಡ ಕೇಳಿಸಿದೆ. ರಜತ್ ಅವರು ‘ಕರಿಯ’ ಚಿತ್ರದ ‘ಕೆಂಚಾಲೋ ಮಂಚಾಲೋ ಹೆಂಗವ್ಳಾ ನಿನ್​ ಡವ್​ಗಳು..’ ಹಾಡನ್ನು ಹೇಳಿದ್ದಾರೆ. ಈ ಹಾಡಿಗೆ ಅವರು ಡ್ಯಾನ್ಸ್ ಕೂಡ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:24 am, Tue, 26 November 24

ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!