ಗೌತಮಿ ಧರಿಸಿದ್ದ ಪಾಸಿಟಿವ್ ಮುಖವಾಡ ಬಯಲು; ಮೋಕ್ಷಿತಾ ಈಗ ದುಷ್ಮನ್

ಕೆಲವೇ ದಿನಗಳ ಹಿಂದೆ ಗೌತಮಿ ಜಾದವ್ ಮತ್ತು ಮೋಕ್ಷಿತಾ ಪೈ ಅವರು ಸಿಕ್ಕಾಪಟ್ಟೆ ಆಪ್ತವಾಗಿದ್ದರು. ಯಾವುದೇ ವಿಚಾರ ಇದ್ದರೂ ಪರಸ್ಪರ ಚರ್ಚೆ ಮಾಡುತ್ತಿದ್ದರು. ಒಬ್ಬರಿಗೆ ಇನ್ನೊಬ್ಬರು ಬೆಂಬಲವಾಗಿ ನಿಂತಿದ್ದರು. ಆದರೆ ಈಗ ಮೋಕ್ಷಿತಾ ಅವರು ಸಂಪೂರ್ಣ ಬದಲಾಗಿದ್ದಾರೆ. ಗೌತಮಿ ವಿರುದ್ಧ ಅವರು ತಿರುಗಿ ನಿಂತಿದ್ದಾರೆ. ಗೌತಮಿಯ ಪಾಸಿಟಿವ್ ಮುಖವಾಡ ತೆಗೆಯಲು ಮೋಕ್ಷಿತಾ ನಿರ್ಧರಿಸಿದ್ದಾರೆ.

ಗೌತಮಿ ಧರಿಸಿದ್ದ ಪಾಸಿಟಿವ್ ಮುಖವಾಡ ಬಯಲು; ಮೋಕ್ಷಿತಾ ಈಗ ದುಷ್ಮನ್
ಮೋಕ್ಷಿತಾ ಪೈ, ಗೌತಮಿ ಜಾದವ್
Follow us
ಮದನ್​ ಕುಮಾರ್​
|

Updated on: Nov 25, 2024 | 10:51 PM

ಬಿಗ್ ಬಾಸ್ ಮನೆಯಲ್ಲಿ ತಂತ್ರ, ಕುತಂತ್ರ ಮಾಡುವುದು ಅನಿವಾರ್ಯ. ಅಂತಹ ಜಾಗದಲ್ಲಿ ಬರೀ ಪಾಸಿಟಿವ್ ಆಗಿ ಇರುತ್ತೇನೆ ಎಂದರೆ ಅದು ಬೂಟಾಟಿಕೆಯೇ ಸರಿ. ನಟಿ ಗೌತಮಿ ಜಾದವ್ ಅವರು ಮೊದಲ ದಿನದಿಂದಲೂ ಪಾಸಿಟಿವ್ ಮಂತ್ರ ಜಪಿಸುತ್ತಿದ್ದಾರೆ. ಆದರೆ ಅದು ಅವರಿಗೆ ಬ್ಯಾಕ್ ಫೈರ್​ ಆಗುತ್ತಿದೆ. ಈಗ ಬಿಗ್ ಬಾಸ್​ ಮನೆಯಲ್ಲಿ ಇರುವ ಬಹುತೇಕ ಸದಸ್ಯರು ಗೌತಮಿಯ ‘ಪಾಸಿಟಿವ್’ ಹೇಳಿಕೆಗಳನ್ನು ಖಂಡಿಸುತ್ತಿದ್ದಾರೆ. ಮುಖ್ಯವಾಗಿ ಮೋಕ್ಷಿತಾ ಪೈ ಅವರು ಕಟುವಾಗಿ ಟೀಕಿಸುತ್ತಿದ್ದಾರೆ. ಅಚ್ಚರಿ ಏನೆಂದರೆ, ಒಂದಷ್ಟು ದಿನಗಳ ಹಿಂದೆ ಗೌತಮಿ ಹಾಗೂ ಮೋಕ್ಷಿತಾ ಪ್ರಾಣ ಸ್ನೇಹಿತೆಯರಾಗಿದ್ದರು.

ಗೌತಮಿ ಅವರು ಅಂದುಕೊಂಡ ರೀತಿಯಲ್ಲಿ ನಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ವಿಚಾರವನ್ನು ಇಟ್ಟುಕೊಂಡು ಎಲ್ಲರೂ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗೌತಮಿ ಅವರನ್ನು ಹತ್ತಿರದಿಂದ ಕಂಡವರು ಮೋಕ್ಷಿತಾ ಪೈ. ಹಾಗಾಗಿ ಗೌತಮಿ ಅವರ ಎಲ್ಲ ನಡೆಗಳ ಬಗ್ಗೆ ಮೋಕ್ಷಿತಾಗೆ ಮಾಹಿತಿ ಇದೆ. ಈ ಹಿಂದೆ ಗೌತಮಿ ಹೇಗೆ ನಡೆದುಕೊಂಡಿದ್ದರು? ಏನೆಲ್ಲ ಮಾತುಗಳನ್ನು ಆಡಿದ್ದರು ಎಂಬುದನ್ನು ಈಗ ಮೋಕ್ಷಿತಾ ಬಯಲು ಮಾಡುತ್ತಿದ್ದಾರೆ.

ಪಾಸಿಟಿವ್ ಎಂಬುದೇ ನಿಜವಲ್ಲ. ಇದು ಗೌತಮಿ ಅವರ ತಂತ್ರಗಾರಿಕೆ ಅಷ್ಟೇ ಎನಿಸುತ್ತಿದೆ. ಎಲ್ಲರ ರೀತಿ ಗೌತಮಿ ಕೂಡ ಗಾಸಿಪ್ ಮಾಡಿದ್ದಾರೆ. ಗುಂಪುಗಾರಿಕೆ ಮಾಡಿದ್ದಾರೆ. ಬೇರೆಯವರ ಕೆಡುಕುಗಳನ್ನೇ ಗುರುತಿಸಿದ್ದಾರೆ. ಪಕ್ಷಪಾತ ಆಗುವ ಹಾಗೆ ನಡೆದುಕೊಂಡಿದ್ದಾರೆ. ಇದನ್ನೆಲ್ಲ ನಗುಮುಖದಿಂದ ಮಾಡಿ, ಅದನ್ನೇ ಪಾಸಿಟಿವಿಟಿ ಎಂದುಕೊಂಡು ಓಡಾಡುತ್ತಿದ್ದಾರೆ. ಅವರ ಈ ಗುಣ ಅನೇಕರಿಗೆ ಇಷ್ಟ ಆಗುತ್ತಿಲ್ಲ.

ಇದನ್ನೂ ಓದಿ: ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು

ಉಗ್ರಂ ಮಂಜು, ಗೌತಮಿ ಜಾದವ್ ಹಾಗೂ ಮೋಕ್ಷಿತಾ ಪೈ ಅವರು ಒಂದು ಗುಂಪಾಗಿ ಇರುತ್ತಿದ್ದರು. ಆ ಗುಂಪಿನಲ್ಲಿ ನಿಧಾನಕ್ಕೆ ಮೋಕ್ಷಿತಾ ಪೈ ಅವರಿಗೆ ಆದ್ಯತೆ ಕಡಿಮೆ ಆಗಲು ಶುರುವಾಯಿತು. ಮೋಕ್ಷಿತಾ ಅವರನ್ನು ಬಿಟ್ಟು ಕೇವಲ ಉಗ್ರಂ ಮಂಜು ಮತ್ತು ಗೌತಮಿ ಅವರೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಶುರು ಮಾಡಿದರು. ಇದರಿಂದ ಮೋಕ್ಷಿತಾಗೆ ಬೇಸರ ಆಯಿತು. ಆದ್ದರಿಂದ ಅವರು ಗೌತಮಿ ವಿರುದ್ಧ ಸಿಡಿದೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಗೌತಮಿ ಮತ್ತು ಮೋಕ್ಷಿತಾ ಅವರು ಜೋರಾಗಿ ಜಗಳ ಮಾಡಿಕೊಂಡರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ