AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಬಂತು ದರ್ಶನ್ ಹಾಡು; ಕುಣಿದಾಡಿದ ರಜತ್

ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನ ಬೆಳಿಗ್ಗೆ ಒಂದೊಂದು ಹಾಡು ಪ್ಲೇ ಆಗುತ್ತದೆ. ಹಲವು ನಟರ ಸಿನಿಮಾದ ಹಾಡುಗಳು ಕೇಳಿಸುತ್ತವೆ. ಆದರೆ ದರ್ಶನ್ ನಟನೆಯ ಸಿನಿಮಾಗಳ ಹಾಡು ಕೇಳಿಸುತ್ತಿಲ್ಲ. ಪ್ರತಿ ಸೀಸನ್​ನಲ್ಲೂ ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತದೆ. ಈಗ 11ನೇ ಸೀಸನ್ ನಡೆಯುತ್ತಿದೆ. ಈ ಬಾರಿ ದರ್ಶನ್ ಸಾಂಗ್ ಕೇಳಿಸಿದೆ. ಆದರೆ ಒಂದು ಟ್ವಿಸ್ಟ್​ ಇದೆ.

ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಬಂತು ದರ್ಶನ್ ಹಾಡು; ಕುಣಿದಾಡಿದ ರಜತ್
ರಜತ್, ದರ್ಶನ್
ಮದನ್​ ಕುಮಾರ್​
|

Updated on: Nov 25, 2024 | 11:25 PM

Share

ದೊಡ್ಮನೆಯ ಸದಸ್ಯರಿಗೆ ಬೆಳಗಾಗುವುದೇ ಸಿನಿಮಾ ಹಾಡುಗಳ ಮೂಲಕ. ಅಲಾರ್ಮ್​ ರೀತಿಯಲ್ಲಿ ಪ್ರತಿ ದಿನವೂ ಒಂದೊಂದು ಹಾಡು ಕೇಳಿಸುತ್ತಿದೆ. ಹಾಡು ಪ್ಲೇ ಆದಾಗ ಎಲ್ಲರೂ ಎಚ್ಚರಗೊಳ್ಳುತ್ತಾರೆ. ತಮ್ಮಿಷ್ಟದ ಹಾಡು ಬಂದರೆ ಸ್ಪರ್ಧಿಗಳ ಜೋಶ್ ಜೋರಾಗಿ ಇರುತ್ತದೆ. ಕನ್ನಡ ಚಿತ್ರರಂಗದ ಬೇರೆ ಬೇರೆ ಹೀರೋಗಳ ಹಾಡು ಕೇಳಿಸುತ್ತದೆ. ಅಗತ್ಯವಿದ್ದರೆ ಟಾಸ್ಕ್​ ಸಂದರ್ಭದಲ್ಲಿಯೂ ಹಾಡುಗಳನ್ನು ಪ್ಲೇ ಮಾಡಲಾಗುತ್ತದೆ. ಇಷ್ಟೆಲ್ಲ ಆದರೂ ಕೂಡ ದರ್ಶನ್ ನಟನೆಯ ಸಿನಿಮಾಗಳ ಹಾಡುಗಳು ಬರುವುದಿಲ್ಲ! ಪ್ರತಿ ಸೀಸನ್​ ಆರಂಭ ಆಗಾಗಲೂ ಜನರು ಈ ಬಗ್ಗೆ ಮಾತನಾಡುತ್ತಾರೆ. ಬಿಗ್ ಬಾಸ್​ ಕಾರ್ಯಕ್ರಮದ ನವೆಂಬರ್​ 25ರ ಎಪಿಸೋಡ್​ನಲ್ಲಿ ದರ್ಶನ್ ಅವರ ಹಾಡು ಕೇಳಿಸಿದೆ! ಆದರೆ ಅದು ಮುಂಜಾನೆ ಕೇಳಿಬರುವ ಸಾಂಗ್ ಅಲ್ಲ.

ಬಿಗ್ ಬಾಸ್​ ಆಟದಲ್ಲಿ ರಾಜಾಡಳಿತದ ಟಾಸ್ಕ್​ ನೀಡಲಾಗಿದೆ ಕ್ಯಾಪ್ಟನ್ ಮಂಜು ಅವರು ಮಹಾರಾಜ ಆಗಿದ್ದಾರೆ. ತ್ರಿವಿಕ್ರಮ್​ ಮತ್ತು ರಜತ್ ಅವರು ಸೇನಾಧಿಪತಿಗಳಾಗಿದ್ದಾರೆ. ಗೋಲ್ಡ್​ ಸುರೇಶ್ ಅವರು ಸಲಹಗಾರನಾಗಿದ್ದಾರೆ. ಇನ್ನುಳಿದವರು ಪ್ರಜೆಗಳಾಗಿದ್ದಾರೆ. ಮಹಾರಾಜ ಮಂಜು ಹೇಳಿದಂತೆ ಎಲ್ಲರೂ ನಡೆದುಕೊಳ್ಳುತ್ತಿದ್ದಾರೆ. ಒಂದು ಹಾಡು ಹೇಳಿ ಎಂದು ರಜತ್​ಗೆ ಮಂಜು ಆಜ್ಞೆ ಮಾಡಿದರು. ಆಗ ರಜತ್ ಅವರು ‘ಕರಿಯ’ ಸಿನಿಮಾದ ಹಾಡು ಹೇಳಿದರು.

ರಜತ್ ಅವರು ‘ಕರಿಯ’ ಚಿತ್ರದ ‘ಕೆಂಚಾಲೋ ಮಂಚಾಲೋ ಹೆಂಗವ್ಳಾ ನಿನ್​ ಡವ್​ಗಳು..’ ಹಾಡನ್ನು ಹೇಳಿದರು. ಪುನಃ ಅದೇ ಹಾಡನ್ನು ಹೇಳುತ್ತಾ ಡ್ಯಾನ್ಸ್ ಮಾಡುವಂತೆ ಮಂಜು ಆದೇಶಿಸಿದರು. ಎರಡನೇ ಬಾರಿ ರಜತ್ ಅವರು ಡ್ಯಾನ್ಸ್ ಮಾಡುತ್ತಾ ಆ ಸಾಂಗ್ ಹೇಳಿದರು. ರಜತ್ ಡ್ಯಾನ್ಸ್ ಮಾಡಿದ ಪರಿ ಕಂಡು ಎಲ್ಲರೂ ನಗುತ್ತಾ ಎಂಜಾಯ್ ಮಾಡಿದರು. ಈ ಮೂಲಕವಾದರೂ ಬಿಗ್ ಬಾಸ್ ಮನೆಯಲ್ಲಿ ದರ್ಶನ್ ನಟನೆಯ ಸಿನಿಮಾದ ಹಾಡು ಕಿವಿಗೆ ಬೀಳುವಂತಾಗಿದೆ.

ಇದನ್ನೂ ಓದಿ: ‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಜಿ. ಪರಮೇಶ್ವರ್

‘ಕರಿಯ’ ಸಿನಿಮಾ 2003ರಲ್ಲಿ ತೆರೆಕಂಡಿತ್ತು. ದರ್ಶನ್​ ನಟನೆಯ ಆ ಸಿನಿಮಾಗೆ ಪ್ರೇಮ್​ ನಿರ್ದೇಶನ ಮಾಡಿದ್ದರು. ಗುರುಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ವಿ. ನಾಗೇಂದ್ರ ಪ್ರಸಾದ್​ ಅವರು ಬರೆದ ‘ಕೆಂಚಾಲೋ ಮಂಚಾಲೋ..’ ಹಾಡಿಗೆ ಸಿ. ಅಶ್ವತ್, ಗುರುರಾಜ್​ ಹೊಸಕೋಟೆ, ಮುರಳಿ ಮೋಹನ್ ಧ್ವನಿ ನೀಡಿದ್ದರು. ಈ ವರ್ಷ ಕೂಡ ‘ಕರಿಯ’ ಸಿನಿಮಾ ಮರು ಬಿಡುಗಡೆ ಆದಾಗ ದರ್ಶನ್​ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದರು. ‘ಕೆಂಚಾಲೋ ಮಂಚಾಲೋ..’ ಹಾಡು ಚಿತ್ರಮಂದಿರದಲ್ಲಿ ಬಂದಾಗ ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದರು. ಆ ಹಾಡಿಗೆ ಇರುವ ತಾಕತ್ತು ಅಂಥದ್ದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ