‘ಸಿಹಿ ಜೊತೆ ಕಹಿಯೂ ಬಂದಳು’; ಡಬಲ್ ರೋಲ್​ಗೆ ವೀಕ್ಷಕರ ರಿಯಾಕ್ಷನ್ ಹೀಗಿತ್ತು

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಅವಳಿ ಸಹೋದರಿಯ ಪ್ರವೇಶದಿಂದ ಹೊಸ ಟ್ವಿಸ್ಟ್ ಉಂಟಾಗಿದೆ. ಇದಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಟ್ವಿಸ್ಟ್ ಅನ್ನು ಸ್ವಾಗತಿಸಿದರೆ, ಇನ್ನು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಸಿಹಿ ಜೊತೆ ಕಹಿಯೂ ಬಂದಳು’; ಡಬಲ್ ರೋಲ್​ಗೆ ವೀಕ್ಷಕರ ರಿಯಾಕ್ಷನ್ ಹೀಗಿತ್ತು
ಸಿಹಿ ದ್ವಿಪಾತ್ರ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 26, 2024 | 7:42 AM

‘ಸೀತಾ ರಾಮ’ ಧಾರಾವಾಹಿ ಹೊಸ ಹೊಸ ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಸಿಹಿಯನ್ನು ಪದೇ ಪದೇ ಕಿಡ್ನ್ಯಾಪ್ ಮಾಡಿಸೋ ಕೆಲಸ ಆಗುತ್ತಿದೆ. ಇದಕ್ಕೆ ವೀಕ್ಷಕರು ಈಗಾಗಲೇ ಬೇಸರ ಹೊರಹಾಕಿದ್ದರು. ಹೀಗಿರುವಾಗಲೇ ಸಿಹಿಯದ್ದು ದ್ವಿಪಾತ್ರ ಮಾಡಿಸಿಬಿಟ್ಟರೆ. ಈ ರೀತಿಯ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇದಕ್ಕೆ ವೀಕ್ಷಕರ ಕಡೆಯಿಂದ ಬೇಸರ ವ್ಯಕ್ತವಾಗಿದೆ. ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ.

ಸೀತಾ ಬಾಡಿಗೆ ತಾಯಿ. ಅವರು ಪ್ರಗ್ನೆಂಟ್ ಆದಾಗ ಎರಡು ಮಗು ಹೊಟ್ಟೆಯಲ್ಲಿ ಇತ್ತು ಹಾಗೂ ಒಂದು ಮಗು ಸತ್ತಿದೆ ಎಂದು ಹೇಳಲಾಗಿತ್ತು. ಆದರೆ, ಮತ್ತೊಂದು ಮಗು ಕೂಡ ಬದುಕಿದೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಈ ರೀತಿಯ ಟ್ವಿಸ್ಟ್​ನ ಧಾರಾವಾಹಿಯಲ್ಲಿ ನೀಡಲಾಗಿದೆ. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿದೆ. ಇದನ್ನು ವೀಕ್ಷಕರು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಿಲ್ಲ.

‘ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಆದರೆ, ಇತ್ತೀಚೆಗೆ ಅದು ಕುಗ್ಗುತ್ತಿದೆ. ಈ ಕಾರಣಕ್ಕೆ ನಿರ್ದೇಶಕರು ಹೊಸ ಹೊಸ ರೀತಿಯ ಟ್ವಿಸ್ಟ್​ಗಳನ್ನು ನೀಡೋಕೆ ಆರಂಭಿಸಿದ್ದಾರೆ. ಈ ಧಾರಾವಾಹಿಯಲ್ಲಿ ಸಿಹಿಯ ಜೊತೆ ಮತ್ತೊಬ್ಬರನ್ನು ಕರೆ ತರಲಾಗಿದೆ. ಸಿಹಿಯ ಟ್ವಿನ್​ನ ಕರೆತರಲಾಗಿದೆ. ಜೀ ಕನ್ನಡ ವಾಹಿನಿ ಹೊಸ ಪ್ರೋಮೋ ರಿಲೀಸ್ ಮಾಡಿದೆ.

ಈ ಪ್ರೋಮೋದಲ್ಲಿ ಸರ್ಕಸ್ ಮಾಡುವ ಗುಂಪನ್ನು ತೋರಿಸಲಾಗಿದೆ. ಈ ಗುಂಪಿನಲ್ಲಿ ಸಿಹಿ ರೀತಿಯೇ ಇರುವ ವ್ಯಕ್ತಿ ಕಾಣಿಸಿದ್ದಾಳೆ. ಇತ್ತೀಚೆಗೆ ಕೋರ್ಟ್​ನಲ್ಲಿ ಮಾತನಾಡುವಾಗ, ‘ಸೀತಾಗೆ ಎರಡು ಮಗು ಜನಿಸಿತ್ತು. ಆದರೆ, ಒಂದು ಮಗು ನಿಧನ ಹೊಂದಿದೆ’ ಎಂದು ಹೇಳಿದ್ದರು. ಈಗ ಮಗು ಬದುಕಿದೆ ಎಂಬ ರೀತಿಯಲ್ಲಿ ತೋರಿಸಲಾಗಿದೆ.

View this post on Instagram

A post shared by Zee Kannada (@zeekannada)

‘ಸೀತಾ ರಾಮ’ ಧಾರಾವಾಹಿ ನೋಡುತ್ತಿರುವ ವೀಕ್ಷಕರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ‘ಸಿಹಿ ಜೊತೆ ಕಹಿಯೂ ಬಂದಳು’ ಎಂದರು ಕೆಲವರು ಹೇಳಿದ್ದಾರೆ. ‘ಹೆಸರು ಸೀತಾ ರಾಮ. ಇಲ್ಲಿ ಸೀತಾ ರಾಮರ ಬಿಟ್ಟು ಸಿಹಿಯೇ ಹೈಲೈಟ್ ಆಗುತ್ತಿದ್ದಾಳೆ. ಅವಳ ಜೊತೆ ಮತ್ತೊಬ್ಬಳೂ ಬಂದರಲ್ಲ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿಯಲ್ಲಿ ಇದೆಂಥಾ ಟ್ವಿಸ್ಟ್: ಸಿಹಿಯ ಪಾತ್ರವೇ ಕೊನೆ ಆಯ್ತಲ್ಲ..

ಒಂದೊಮ್ಮೆ ಸಿಹಿಯ ಸಹೋದರಿ ಬಿಗ್ ಬಾಸ್​ಗೆ ಬಂದರೆ ಯಾವ ರೀತಿಯಲ್ಲಿ ಇರುತ್ತದೆ. ಈ ಮಗುವನ್ನು ಸೀತಾ ಸ್ವೀಕರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.