AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ ರಾಮ’ ಧಾರಾವಾಹಿಯಲ್ಲಿ ಇದೆಂಥಾ ಟ್ವಿಸ್ಟ್: ಸಿಹಿಯ ಪಾತ್ರವೇ ಕೊನೆ ಆಯ್ತಲ್ಲ..

Seetha Raama Serial: ‘ಸೀತಾ ರಾಮ’ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಧಾರಾವಾಹಿಯ ಕತೆಯಲ್ಲಿ ಆಗಾಗ್ಗೆ ಒಂದು ಕುತೂಹಲಕಾರಿ ತಿರುವುಗಳು ತೆರೆದುಕೊಳ್ಳುತ್ತಲೇ ಇವೆ. ಇದೀಗ ‘ಸೀತಾ ರಾಮ’ ಧಾರಾವಾಹಿ ಕತೆಯಲ್ಲಿ ದೊಡ್ಡ ತಿರುವೊಂದು ಬಂದಿದೆ. ಏನದು? ಇಲ್ಲಿ ಓದಿ.

‘ಸೀತಾ ರಾಮ’ ಧಾರಾವಾಹಿಯಲ್ಲಿ ಇದೆಂಥಾ ಟ್ವಿಸ್ಟ್: ಸಿಹಿಯ ಪಾತ್ರವೇ ಕೊನೆ ಆಯ್ತಲ್ಲ..
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 23, 2024 | 6:59 PM

Share

‘ಸೀತಾ ರಾಮ’ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿತು. ಈ ಧಾರಾವಾಹಿಯಲ್ಲಿ ಸೀತಾ (ವೈಷ್ಣವಿ ಗೌಡ) ಹಾಗೂ ರಾಮ್ (ಗಗನ್ ಚಿನ್ನಪ್ಪ) ಪಾತ್ರಗಳ ಜೊತೆಗೆ ಸಿಹಿ (ರೀತು) ಪಾತ್ರವೂ ಮುಖ್ಯವಾಗಿದೆ. ಆದರೆ, ಈಗ ಈ ಪಾತ್ರವನ್ನೇ ನಿರ್ದೇಶಕರು ಕೊನೆ ಮಾಡಲು ಹೊರಟಂತೆ ಇದೆ. ಜೀ ಕನ್ನಡದಲ್ಲಿ ಹೊಸದಾಗಿ ಪ್ರೋಮೋ ರಿಲೀಸ್ ಮಾಡಲಾಗಿದೆ. ಈ ಪ್ರೋಮೋದಲ್ಲಿ ನಿರ್ದೇಶಕ ಸಿಹಿಯ ಪಾತ್ರವನ್ನೇ ಕೊನೆ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ.

‘ಸೀತಾ ರಾಮ’ ಧಾರಾವಾಹಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ಇತ್ತೀಚೆಗೆ ಧಾರಾವಾಹಿಯ ಟಿಆರ್ಪಿ ಕಡಿಮೆ ಆಗಿದೆ ಎಂದು ಹೇಳಲಾಗಿತ್ತು. ಇದಕ್ಕಾಗಿಯೇ ಟಿಆರ್ಪಿ ಪಡೆಯಲು ದೊಡ್ಡ ಟ್ವಿಸ್ಟ್ ಅನ್ನು ಕೊಡಲಾಯಿತೇ ಎನ್ನುವ ಪ್ರಶ್ನೆಯು ಮೂಡಿದೆ. ಈ ಟ್ವಿಸ್ಟ್ನ ಪ್ರೇಕ್ಷಕರು ಹೇಗೆ ಅರಗಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

View this post on Instagram

A post shared by Zee Kannada (@zeekannada)

ರಾಮನ ಕಚೇರಿಯಲ್ಲಿ ಸೀತಾಳು ಕೆಲಸ ಮಾಡಿಕೊಂಡು ಇದ್ದವಳು. ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಸೀತಾಗೆ ಸಿಹಿ ಹೆಸರಿನ ಮಗಳು ಇದ್ದಾಳೆ. ಈ ಮಗಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾಗಿತ್ತು. ಈ ವಿಚಾರ ವೀಕ್ಷಕರಿಗೆ ಮಾತ್ರವಲ್ಲ ರಾಮ್ ಮನೆಯ ಎಲ್ಲರಿಗೂ ಗೊತ್ತಾಗಿದೆ. ಸಿಹಿಯ ನಿಜವಾದ ತಂದೆ-ತಾಯಿ ಮೇಘಶ್ಯಾಮ್ ಹಾಗೂ ಶಾಲಿನಿ ತಮಗೆ ಬೇಕು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಮಗುವನ್ನು ನೀಡಲು ರಾಮ್ ಹಾಗೂ ಸೀತಾ ರೆಡಿ ಇಲ್ಲ. ಹೀಗಿರುವಾಗಲೇ ಸಿಹಿಗೆ ಅಪಘಾತ ಆಗಿದೆ. ಈ ಅಪಘಾತ ಮಾಡಿಸಿದ್ದು ಭಾರ್ಗವಿ ಅನ್ನೋದು ಕೂಡ ಆಗಿದೆ.

ಇದನ್ನೂ ಓದಿ:ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹಾರರ್​ ಧಾರಾವಾಹಿ ‘ನೂರು ಜನ್ಮಕು’

ಜೀ ಕನ್ನಡದಲ್ಲಿ ಪ್ರೋಮೋ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರೋಮೋದಲ್ಲಿ ಸಿಹಿ ಐಸ್ಕ್ರೀಮ್ ತಿನ್ನುತ್ತಾ ನಿಂತಿರುತ್ತಾಳೆ. ಆಗ ಅಲ್ಲಿಯೇ ಇದ್ದ ಸೀತಾಗೆ ಅಪಘಾತ ಆಗುವುದರಲ್ಲಿ ಇರುತ್ತದೆ. ಅದನ್ನು ತಪ್ಪಿಸಲು ಹೋಗಿ ಸಿಹಿಗೆ ಅಪಘಾತ ಆಗುತ್ತದೆ. ಸಿಹಿ ನಿಧನ ಹೊಂದಿ ಆಕೆಯ ಆತ್ಮ ಎದ್ದೇಳುವಂತೆ ತೋರಿಸಲಾಗಿದೆ.

‘ಬಿಗ್ ಬಾಸ್’ ಪ್ರಸಾರ ಕಾಣುತ್ತಿದೆ. ಅದೇ ಸಮಯದಲ್ಲಿ ‘ಸೀತಾ ರಾಮ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಕಾರಣಕ್ಕೆ ಟಿಆರ್ಪಿ ಕುಗ್ಗಿದೆ. ಈಗ ಟಿಆರ್ಪಿ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ‘ಸೀತಾ ರಾಮ’ ಧಾರಾವಾಹಿಗೆ ಟ್ವಿಸ್ಟ್ ಕೊಡಲಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಂತೂ ಸುಳ್ಳಲ್ಲ. ಸಿಹಿ ಪಾತ್ರವೇ ಕೊನೆ ಆದಮೇಲೆ ನಾವೇಕೆ ಆ ಧಾರಾವಾಹಿಗಳನ್ನು ನೋಡಬೇಕು ಎಂದು ಕೆಲವರು ಹೇಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ