ಕಲರ್ಸ್​ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್​ಗೆ ಗುಡ್ ನ್ಯೂಸ್

ಈ ಆವೃತ್ತಿಯ ಕನ್ನಡ ಬಿಗ್ ಬಾಸ್ ಕಳೆದ ಸೀಸನ್​ಗಳಿಗಿಂತ ಹೆಚ್ಚು ಸುದ್ದಿಯಲ್ಲಿದೆ. ಆರಂಭದಿಂದಲೇ ಈ ರಿಯಾಲಿಟಿಶೋ ಇಷ್ಟು ಸುದ್ದಿಯಲ್ಲಿ ಇರುವುದು ಇದೇ ಮೊದಲು ಎಂದೇ ಹೇಳಬಹುದು. ಇದಕ್ಕೆ ಜಗದೀಶ್ ಅವರು ಕೂಡ ಕಾರಣ ಎನ್ನಬಹುದು. ಈಗ ಅವರು ಕಲರ್ಸ್​ನ ಶೋ ಒಂದಕ್ಕೆ ಬಂದಿದ್ದಾರೆ.

ಕಲರ್ಸ್​ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್​ಗೆ ಗುಡ್ ನ್ಯೂಸ್
ಜಗದೀಶ್
Follow us
|

Updated on: Oct 24, 2024 | 9:58 AM

ಲಾಯರ್ ಜಗದೀಶ್ ಅವರು ಮಹಿಳೆಯರ ವಿರುದ್ಧ ನಿಂದನೀಯ ಶಬ್ದಗಳ ಬಳಕೆ ಮಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈ ಕಾರಣದಿಂದಲೇ ಅವರನ್ನು ಬಿಗ್ ಬಾಸ್​ನಿಂದ ಎಲಿಮಿನೇಟ್ ಕೂಡ ಮಾಡಲಾಯಿತು. ಅವರನ್ನು ಮರಳಿ ಕರೆಸಬೇಕು ಎನ್ನುವ ಆಗ್ರಹ ಬಿಗ್ ಬಾಸ್​ನಲ್ಲಿ ಜೋರಾಗಿದೆ. ಹೀಗಿರುವಾಗಲೇ ಜಗದೀಶ್ ಅವರು ಕಲರ್ಸ್​ ಕನ್ನಡದ ಶೋಗೆ ಅತಿಥಿಯಾಗಿ ಬಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಜಗದೀಶ್ ಬಿಗ್ ಬಾಸ್​ನಲ್ಲಿ ಎಲ್ಲಾ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದ್ದರು. ಈ ಕಾರಣದಿಂದಲೇ 1 Vs 15 ಎಂಬ ವಾತಾವರಣ ಬಿಗ್ ಬಾಸ್ ಮನೆಯಲ್ಲಿ ಸೃಷ್ಟಿ ಆಗಿತ್ತು. ಅವರನ್ನು ಹೊರಕ್ಕೆ ಹಾಕಬೇಕು ಎಂದು ಅನೇಕರು ಪ್ರಯತ್ನಪಟ್ಟರು. ಅವರು ನಿಂದನೀಯ ಶಬ್ದಗಳ ಬಳಕೆ ಮಾಡಿ ಎಲಿಮಿನೇಟ್ ಆಗಿದ್ದಾರೆ. ಇದು ಅವರ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. ಈಗ ಅವರನ್ನು ಕರೆಸಬೇಕು ಎಂಬ ಕೂಗು ಜೋರಾಗಿದೆ. ಹೀಗಿರುವಾಗಲೇ ಅವರು ಕಲರ್ಸ್​ನ ‘ಸಚಿರುಚಿ ಸೀಸನ್ 3’ ಶೋಗೆ ಶೆಫ್ ಆಗಿ ಬಂದಿದ್ದಾರೆ.

ಜಗದೀಶ್ ಅವರು ಅಡುಗೆ ಮಾಡುವುದನ್ನು ತೋರಿಸಲಾಗಿದೆ. ಆ್ಯಂಕರ್ ಜಾಹ್ನವಿ ಅವರು ಜಗದೀಶ್​ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಲ್ಲಿ ಹೈಲೈಟ್ ಆಗಿದ್ದು ‘ಹಂಸ ಮೇಲೆ ನಿಮಗೆ ಕ್ರಶ್’ ಆಗಿತ್ತಾ ಎಂಬುದು. ಇದಕ್ಕೆ ಜಗದೀಶ್ ಅವರು ನಕ್ಕಿದ್ದಾರೆ. ಜಗದೀಶ್ ಅವರು ನಗುವಿನಲ್ಲೇ ಜನರಿಗೆ ಉತ್ತರ ಸಿಕ್ಕಿದೆ.

ಬಿಗ್ ಬಾಸ್ ಮನೆಯಲ್ಲಿರುವ ಹಂಸ ಹಾಗೂ ಜಗದೀಶ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಪದೇ ಪದೇ ಹಂಸ ಅವರನ್ನು ಜಗದೀಶ್ ಕಾಡಿದ್ದರು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕವೂ ಜಗದೀಶ್​ಗೆ ಈ ಕುರಿತು ಪ್ರಶ್ನೆಗಳು ಎದುರಾಗುತ್ತಿವೆ.

ಇದನ್ನೂ ಓದಿ: ಹನುಮಂತನ ಮುಗ್ಧತೆಗೆ ಎಲ್ಲರೂ ಫಿದಾ; ಒಂದೇ ಮಾತಿನಿಂದ ಎಲ್ಲರ ಮನ ಗೆದ್ದ ಬಿಗ್ ಬಾಸ್ ಸ್ಪರ್ಧಿ

‘ಬಿಗ್ ಬಾಸ್ ಪಾಲಿಗೆ ಜಗದೀಶ್ ಮುಗಿದ ಅಧ್ಯಾಯ. ಹಾಗೆ ಕರೆಸೋದಾದರೆ ಹುಚ್ಚ ವೆಂಕಟ್ ಅವರನ್ನೂ ಕರೆಸಬೇಕಾಗುತ್ತದೆ’ ಎಂದು ಸುದೀಪ್ ಹೇಳಿದ್ದರು. ಈ ಮೂಲಕ ಜಗದೀಶ್ ಅವರನ್ನು ಮರಳಿ ಶೋಗೆ ಕರೆಸೋದೇ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?
ದೇವರ ಮುಂದೆ ಕಣ್ಣೀರು ಹಾಕಿದ್ರೆ ಏನಾಗುತ್ತೆ ಗೊತ್ತಾ?
ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ
ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ
ತುಂಗಭದ್ರಾ ಪೈಪ್‌ಲೈನ್ ಒಡೆದು 50 ಎಕರೆ ಬೆಳೆ ಮುಳುಗಡೆ
ತುಂಗಭದ್ರಾ ಪೈಪ್‌ಲೈನ್ ಒಡೆದು 50 ಎಕರೆ ಬೆಳೆ ಮುಳುಗಡೆ
ಕಟ್ಟಡ ಕುಸಿತ: ಅಧಿಕಾರಿಗಳನ್ನ ತರಾಟೆಗೆ ತಗೊಂಡ್ರು ಲೋಕಾಯುಕ್ತ ನ್ಯಾಯಮೂರ್ತಿ
ಕಟ್ಟಡ ಕುಸಿತ: ಅಧಿಕಾರಿಗಳನ್ನ ತರಾಟೆಗೆ ತಗೊಂಡ್ರು ಲೋಕಾಯುಕ್ತ ನ್ಯಾಯಮೂರ್ತಿ
‘ಬಘೀರ’ದಲ್ಲಿ ಹೇಗಿದೆ ಗರುಡಾ ರಾಮ್ ಪಾತ್ರ? ಕಥೆ ಬಗ್ಗೆ ಸುಳಿವು ನೀಡಿದ ನಟ
‘ಬಘೀರ’ದಲ್ಲಿ ಹೇಗಿದೆ ಗರುಡಾ ರಾಮ್ ಪಾತ್ರ? ಕಥೆ ಬಗ್ಗೆ ಸುಳಿವು ನೀಡಿದ ನಟ
ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ