‘ಹಂಸಾ ಇದ್ದಲ್ಲಿ ನಾನಿರಲ್ಲ’; ಬಿಗ್ ಬಾಸ್ ಮನೆಯಲ್ಲಿ ಸಿಡಿದೆದ್ದ ಜಗದೀಶ್ ಗೆಳೆಯ

ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹೆಚ್ಚು ಕ್ಲೋಸ್ ಆಗಿ ಇದ್ದಿದ್ದು ಸುರೇಶ್ ಜೊತೆ ಮಾತ್ರ. ಸುರೇಶ್ ಕೂಡ ಜಗದೀಶ್ ಜೊತೆ ಉತ್ತಮವಾಗಿಯೇ ಇದ್ದರು. ಆದರೆ, ದಿನ ಕಳೆದಂತೆ ಜಗದೀಶ್ ವರ್ತನೆ ಸುರೇಶ್​ಗೆ ಇಷ್ಟ ಆಗಲೇ ಇಲ್ಲ. ಈಗ ಜಗದೀಶ್ ಮನೆಯಲ್ಲಿ ಇಲ್ಲ. ಜಗದೀಶ್ ಫ್ರೆಂಡ್ ಹಂಸಾ ವಿರುದ್ಧ ಸುರೇಶ್ ಸಿಟ್ಟಾಗಿದ್ದಾರೆ.

‘ಹಂಸಾ ಇದ್ದಲ್ಲಿ ನಾನಿರಲ್ಲ’; ಬಿಗ್ ಬಾಸ್ ಮನೆಯಲ್ಲಿ ಸಿಡಿದೆದ್ದ ಜಗದೀಶ್ ಗೆಳೆಯ
ಜಗದೀಶ್-ಹಂಸಾ
Follow us
ರಾಜೇಶ್ ದುಗ್ಗುಮನೆ
|

Updated on: Oct 24, 2024 | 11:21 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭ ಆಗಿ ತಿಂಗಳು ಕಳೆಯುವುದರ ಒಳಗೆ ಸಾಕಷ್ಟು ಬೆಳವಣಿಗೆಗಳು ನಡೆದು ಹೋಗಿವೆ. ಕೆಲವು ಸ್ಪರ್ಧಿಗಳು ಜಗಳ ಆಡಿಕೊಂಡು ಹೊರ ಹೋಗಿದ್ದಾರೆ. ಈ ಪೈಕಿ ಜಗದೀಶ್ ಕೂಡ ಇದ್ದಾರೆ. ಅವರಿಗೆ ಹಂಸ ಮೇಲೆ ವಿಶೇಷ ಕಾಳಜಿ ಇತ್ತು. ಜಗದೀಶ್ ಮನೆಯಿಂದ ಹೊರ ಹೋಗುತ್ತಿದ್ದಂತೆ ಜಗದೀಶ್ ಗೆಳೆಯ ಗೋಲ್ಡ್ ಸುರೇಶ್ ಹಾಗೂ ಹಂಸಾ ಮಧ್ಯೆ ಕಿರಿಕ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹೆಚ್ಚು ಕ್ಲೋಸ್ ಆಗಿ ಇದ್ದಿದ್ದು ಸುರೇಶ್ ಜೊತೆ ಮಾತ್ರ. ಸುರೇಶ್ ಕೂಡ ಜಗದೀಶ್ ಜೊತೆ ಉತ್ತಮವಾಗಿಯೇ ಇದ್ದರು. ಆದರೆ, ದಿನ ಕಳೆದಂತೆ ಜಗದೀಶ್ ವರ್ತನೆ ಸುರೇಶ್​ಗೆ ಇಷ್ಟ ಆಗಲೇ ಇಲ್ಲ. ಹೀಗಾಗಿ ಅಂತರ ಕಾಯ್ದುಕೊಂಡರು. ಹಂಸಾ ಬಗ್ಗೆ ಜಗದೀಶ್ ಕೆಟ್ಟದಾಗಿ ಮಾತನಾಡಿದರು ಎಂಬುದನ್ನು ಕೂಡ ಎಲ್ಲರಿಗೂ ತಿಳಿಸಿದ್ದು ಇದೇ ಸುರೇಶ್. ಈಗ ಹಂಸಾ ಜೊತೆ ಅವರಿಗೆ ಅಸಮಾಧಾನ ಭುಗಿಲೆದ್ದಿದೆ.

ಕಿಚನ್​ನ ಕ್ಲೀನಿಂಗ್​ಗೆ ಹಂಸಾ ಹಾಗೂ ಸುರೇಶ್​ನ ನೇಮಕ ಮಾಡಿದ್ದರು ಕ್ಯಾಪ್ಟನ್ ಐಶ್ವರ್ಯಾ. ಆದರೆ, ಇದು ಸುರೇಶ್​ಗೆ ಇಷ್ಟ ಆಗಿಲ್ಲ. ಈ ಕಾರಣಕ್ಕೆ ಅವರು ‘ಹಂಸಾ ಜೊತೆಗಿದ್ದರೆ ನಾನು ಕ್ಲೀನಿಂಗ್ ಮಾಡಲ್ಲ’ ಎಂದರು. ಆ ಬಳಿಕ ಸುರೇಶ್ ಹಠ ನೋಡಿ ಹೆದರಿದ ಐಶ್ವರ್ಯಾ ಅವರು ಹಂಸನ ಜಾಗಕ್ಕೆ ಧನರಾಜ್ ಅವರನ್ನು ಕರೆತಂದರು. ಆ ಬಳಿಕವೇ ಸುರೇಶ್ ಕೆಲಸ ಮಾಡೋಕೆ ಒಪ್ಪಿದರು.

ಸುರೇಶ್ ಅವರು ಈ ರೀತಿ ಮಾಡೋಕೂ ಒಂದು ಕಾರಣ ಇದೆ. ‘ನನ್ನ ಕಪ್​ನ ಎಲ್ಲರೂ ಬಳಸುತ್ತಾರೆ. ಈ ಕಾರಣಕ್ಕೆ ನನ್ನ ಕಪ್​ ಮೇಲೆ ಲಿಪ್​ಸ್ಟಿಕ್ ಇರುವಂತೆ ನೋಡಿಕೊಂಡೆ. ಇದಕ್ಕೆ ಸುರೇಶ್ ಸಿಟ್ಟಾಗಿದ್ದಾರೆ. ನಿಮ್ಮ ಕಪ್​ಗೆ ಲಿಪ್​ಸ್ಟಿಕ್ ಬಡಿಡಿದೆ ಕ್ಲೀನ್ ಮಾಡಿ ಎಂದು ಹೇಳಿದ್ದರೆ ಮುಗಿದಿತ್ತು’ ಎಂಬ ಅಭಿಪ್ರಾಯವನ್ನು ಹಂಸಾ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಲರ್ಸ್​ ಶೋಗೆ ಮರಳಿದ ಲಾಯರ್ ಜಗದೀಶ್; ಫ್ಯಾನ್ಸ್​ಗೆ ಗುಡ್ ನ್ಯೂಸ್

ಜಗದೀಶ್ ಅವರು ಇದ್ದಿದ್ದರೆ ಹಂಸಾ ಜೊತೆ ಮತ್ತಷ್ಟು ಕ್ಲೋಸ್ ಆಗುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಜಗದೀಶ್ ಇದ್ದಿದ್ದರೆ ಸುರೇಶ್ ಅವರು ಹಂಸಾ ಜೊತೆ ಇಷ್ಟೊಂದು ದ್ವೇಷ ಸಾಧಿಸುತ್ತಾ ಇರಲಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.