ಚೈತ್ರಾನ ರೂಮಿಗೆ ಕರೆದುಕೊಂಡು ಹೋದ ತ್ರಿವಿಕ್ರಮ್; ಕೆಂಡಾಮಂಡಲ ಆದ ಐಶ್ವರ್ಯಾ

ಬಿಗ್ ಬಾಸ್​ ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಆಗುತ್ತದೆ. ಈಗ ಚೈತ್ರಾ ಅವರನ್ನು ತ್ರಿವಿಕ್ರಮ್ ಅವರು ರೂಮಿನ ಒಳಗೆ ಕರೆದುಕೊಂಡು ಹೋಗಿದ್ದಕ್ಕೆ ಐಶ್ವರ್ಯಾ ಅವರಿಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಈ ಮೂವರ ನಡುವೆ ದೊಡ್ಡ ಜಗಳ ಆಗಿದೆ. ಗುರುವಾರದ (ಅಕ್ಟೋಬರ್​ 24) ಸಂಚಿಕೆಯಲ್ಲಿ ಈ ಘಟನೆ ನಡೆದಿದೆ.

ಚೈತ್ರಾನ ರೂಮಿಗೆ ಕರೆದುಕೊಂಡು ಹೋದ ತ್ರಿವಿಕ್ರಮ್; ಕೆಂಡಾಮಂಡಲ ಆದ ಐಶ್ವರ್ಯಾ
ಐಶ್ವರ್ಯಾ, ತ್ರಿವಿಕ್ರಮ್, ಚೈತ್ರಾ ಕುಂದಾಪುರ
Follow us
|

Updated on:Oct 24, 2024 | 10:39 PM

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಜಗಳಕ್ಕೆ ಬರ ಇಲ್ಲ. ಈ ವಾರದ ಕ್ಯಾಪ್ಟನ್ ಆಗಿ ಐಶ್ವರ್ಯಾ ಹಾಗೂ ತ್ರಿವಿಕ್ರಮ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್​ ಒಂದು ಟಾಸ್ಕ್​ ನೀಡಿದ್ದಾರೆ. ಅದು ರಾಜಕೀಯದ ಥೀಮ್​ನಲ್ಲಿದೆ. ರಾಜಕೀಯ ಎಂದಮೇಲೆ ಜಗಳ ಇರಲೇಬೇಕು. ಎರಡು ಗುಂಪುಗಳ ನಡುವೆ ಈ ಆಟ ನಡೆಯುತ್ತಿದೆ. ಒಂದು ಟೀಮ್​ಗೆ ಐಶ್ವಯಾ ಲೀಡರ್ ಆಗಿದ್ದರೆ, ಇನ್ನೊಂದಕ್ಕೆ ತ್ರಿವಿಕ್ರಮ್ ಲೀಡರ್ ಆಗಿದ್ದಾರೆ. ಚೈತ್ರಾ ಕುಂದಾಪುರ ಅವರು ತ್ರಿವಿಕ್ರಮ್ ಅವರ ಟೀಮ್​ನಲ್ಲಿ ಇದ್ದಾರೆ.

ಇದು ಶಕ್ತಿ ಮತ್ತು ಯುಕ್ತಿಯ ಆಟ. ಸಿಕ್ಕಾಪಟ್ಟೆ ಪ್ಲ್ಯಾನ್ ಮಾಡಿ ಆಟ ಆಡಬೇಕಾಗುತ್ತದೆ. ಹಾಗಾಗಿ ತಮ್ಮ ಟೀಮ್​ನ ಸದಸ್ಯರಾದ ಚೈತ್ರಾ ಕುಂದಾಪುರ ಅವರನ್ನು ತ್ರಿವಿಕ್ರಮ್ ಅವರು ಕ್ಯಾಪ್ಟನ್ ರೂಮಿಗೆ ಕರೆದುಕೊಂಡು ಹೋದರು. ಕ್ಯಾಪ್ಟನ್ ರೂಮಿನಲ್ಲಿ ಚೈತ್ರಾ ಮತ್ತು ತ್ರಿವಿಕ್ರಮ್ ಅವರು ಮಾತನಾಡುತ್ತಿರುವಾಗ ಐಶ್ವರ್ಯಾ ಅವರ ಗಮನ ಆ ಕಡೆ ಹರಿಯಿತು. ಆಗಲೇ ಜಗಳ ಶುರುವಾಯಿತು.

ಕ್ಯಾಪ್ಟನ್​ ರೂಮಿಗೆ ಬೇರೆಯವರನ್ನು ಕರೆದುಕೊಂಡು ಹೋಗುವಂತಿಲ್ಲ. ಆದರೆ ಗೇಮ್​ ಬಗ್ಗೆ ತಂತ್ರಗಾರಿಕೆ ಮಾಡಲು ಚೈತ್ರಾ ಅವರನ್ನು ಕ್ಯಾಪ್ಟನ್ ರೂಮಿಗೆ ತ್ರಿವಿಕ್ರಮ್ ಕರೆದುಕೊಂಡು ಹೋಗಿದ್ದಾರೆ. ಅದನ್ನು ನೋಡಿ ಐಶ್ವರ್ಯಾ ಕೆಂಡಾಮಂಡಲ ಆಗಿದ್ದಾರೆ. ‘ಮೊದಲು ಇವರನ್ನು ಹೊರಗಡೆ ಕರೆದುಕೊಂಡು ಹೋಗಿ’ ಎಂದು ಐಶ್ವರ್ಯಾ ಕೂಗಾಡಿದ್ದಾರೆ.

ಇದನ್ನೂ ಓದಿ: ಲಾಯರ್ ಅಲ್ಲ ಎಂದವರಿಗೆ ಬಿಗ್ ಬಾಸ್​ನಿಂದ ಬಂದು ತಿರುಗೇಟು ಕೊಟ್ಟ ಜಗದೀಶ್

ಐಶ್ವರ್ಯಾ ಮತ್ತು ತ್ರಿವಿಕ್ರಮ್ ಅವರು ಜೋಡಿಯಾಗಿ ಕ್ಯಾಪ್ಟನ್ ಆಗಿರುವುದರಿಂದ ಕ್ಯಾಪ್ಟನ್ ರೂಮಿನ ಮೇಲೆ ಇಬ್ಬರಿಗೂ ಸಮಾನ ಅಧಿಕಾರ ಇದೆ. ಕ್ಯಾಪ್ಟನ್ ಅಲ್ಲದವರು ಆ ರೂಮಿನ ಒಳಗೆ ಹೋದರೆ ಬಿಗ್ ಬಾಸ್ ಶಿಕ್ಷೆ ನೀಡಬಹುದು. ಆ ಕಾರಣದಿಂದಲೇ ಐಶ್ವರ್ಯಾ ಅವರು ಈ ಪರಿ ಸಿಟ್ಟಾಗಿದ್ದಾರೆ. ಚೈತ್ರಾ ಅವರನ್ನು ಕೂಡಲೇ ಹೊರಗೆ ಕಳಿಸಬೇಕು ಎಂದು ಅವರು ಕೂಗಾಡಿದರು.

ಪೋಸ್ಟರ್ ಕಾಪಾಡಿಕೊಳ್ಳುವ ಟಾಸ್ಕ್​ನಲ್ಲಿ ಎರಡೂ ತಂಡದವರು ಕಿತ್ತಾಡಿಕೊಂಡಿದ್ದಾರೆ. ತಳ್ಳಾಟ, ನೂಕಾಟ ಕೂಡ ನಡೆದಿದೆ. ಉಗ್ರಂ ಮಂಜು, ಗೋಲ್ಡ್ ಸುರೇಶ್ ಮುಂತಾದವರಿಗೆ ಗಾಯಗಳು ಕೂಡ ಆಗಿವೆ. ಸ್ಪರ್ಧಿಗಳ ತಳ್ಳಾಟ ಮಿತಿ ಮೀರಿದ್ದರಿಂದ ‘ಈ ಕೂಡಲೇ ಆಟ ನಿಲ್ಲಿಸಿ’ ಎಂದು ಬಿಗ್ ಬಾಸ್​ ಆದೇಶಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:36 pm, Thu, 24 October 24

ದಿವ್ಯ ನಿರ್ಲಕ್ಷ್ಯ ತೊರಿ ರನೌಟ್​ಗೆ ಬಲಿಯಾದ ಕಿವೀಸ್ ನಾಯಕಿ
ದಿವ್ಯ ನಿರ್ಲಕ್ಷ್ಯ ತೊರಿ ರನೌಟ್​ಗೆ ಬಲಿಯಾದ ಕಿವೀಸ್ ನಾಯಕಿ
ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರ ಮಾಡುವ ಅವಕಾಶ ಎಲ್ಲರಿಗೂ ಇದೆ: ಶಾಸಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರ ಮಾಡುವ ಅವಕಾಶ ಎಲ್ಲರಿಗೂ ಇದೆ: ಶಾಸಕ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್
ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್