‘ಮಾಡಿದ್ದುಣ್ಣೋ ಮಹರಾಯ’; ಬಿಗ್ ಬಾಸ್​ನಲ್ಲಿ ಮಂಜುಗೆ ತಿರುಗಿ ಬಂತು ಕರ್ಮ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮಂಜು ಅವರನ್ನು ಮಾನಸಾಳನ್ನು ತಳ್ಳಿದ ಆರೋಪಿಸಲಾಗಿದೆ. ಇದರಿಂದ ಮಾನಸಾ ಗಾಯಗೊಂಡಿದ್ದಾರೆ. ಮಂಜು ಕ್ಷಮೆ ಕೇಳಿದ್ದಾರೆ. ನಂತರದ ಟಾಸ್ಕ್‌ನಲ್ಲಿ ತ್ರಿವಿಕ್ರಂ ಮತ್ತು ಮಂಜು ನಡುವೆ ಕಿತ್ತಾಟ ಆಗಿದೆ. ಈ ಘಟನೆಗಳು ದೊಡ್ಮನೆಯಲ್ಲಿ ಹೊಸ ವಿವಾದವನ್ನು ಸೃಷ್ಟಿಸಿವೆ.

‘ಮಾಡಿದ್ದುಣ್ಣೋ ಮಹರಾಯ’; ಬಿಗ್ ಬಾಸ್​ನಲ್ಲಿ ಮಂಜುಗೆ ತಿರುಗಿ ಬಂತು ಕರ್ಮ
ಬಿಗ್ ಬಾಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 25, 2024 | 9:38 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಇತ್ತೀಚೆಗೆ ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ ಆರೋಪ ಬಂದಿತ್ತು. ಇದನ್ನು ಮಾಡಿದ ರಂಜಿತ್ ಅವರನ್ನು ಹೊರಕ್ಕೆ ಹಾಕಲಾಗಿದೆ. ಜಗದೀಶ್ ಅವರನ್ನು ತಳ್ಳಿದ ಆರೋಪ ಎದುರಾಗಿತ್ತು. ಈಗ ಮತ್ತೆ ದೊಡ್ಮನೆಯಲ್ಲಿ ಮ್ಯಾನ್ ಹ್ಯಾಂಡ್ಲಿಂಗ್ ಆರೋಪ ಎದುರಾಗಿದೆ. ಇದನ್ನು ಮಾಡಿದ್ದು ಮಂಜು ಎಂದು ಕೆಲವರು ಆರೋಪಿಸಿದ್ದಾರೆ.

ಬಿಗ್ ಬಾಸ್​ನ ಗ್ಲಾಸ್ ಡೋರ್ ಬಳಿ ಚರ್ಚೆಗಳು ನಡೆಯುತ್ತಿದ್ದವು. ಮಂಜು ಹಾಗೂ ವಿರೋಧ ಪಕ್ಷಗಳ ನಡುವೆ ಕಿತ್ತಾಟ ನಡೆದಿದೆ. ಈ ಕಿತ್ತಾಟದಲ್ಲಿ ಮಾನಸಾ ಮಂಜುಗೆ ಅಡ್ಡ ಬಂದಿದ್ದಾರೆ. ಆಗ ಮಂಜು ಅವರು ಮಾನಸಾನ ತಳ್ಳಿದ್ದಾರೆ. ಮಾನಸಾ ಹೋಗಿ ಬಾಗಿಲಿನ ಹ್ಯಾಂಡಲ್​ಗೆ ಹೊಡೆದುಕೊಂಡಿದ್ದಾರೆ. ಅವರ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದಿದೆ. ಇದರಿಂದ ಅವರು ಕಣ್ಣೀರು ಹಾಕಿದ್ದಾರೆ. ಇದನ್ನು ಮನೆಯವರು ಕೆಲವರು ಟೀಕೆ ಮಾಡಿದ್ದಾರೆ. ‘150 ರೂಪಾಯಿ ಆ್ಯಕ್ಟಿಂಗ್’ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಕೆಲವರು ಇದನ್ನು ಮ್ಯಾನ್ ಹ್ಯಾಂಡಲಿಂಗ್ ಎಂದು ಕರೆದಿದ್ದಾರೆ. ಈ ವಿಚಾರವಾಗಿ ಮಂಜು ಅವರು ಕ್ಷಮೆ ಕೇಳಿದ್ದಾರೆ. ‘ನಾನು ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ’ ಎಂದು ಅವರ ಬಳಿ ಹೇಳಿಕೊಂಡಿದ್ದಾರೆ. ಈ ಕ್ಷಮೆಯನ್ನು ಮಾನಸಾ ಅವರು ಒಪ್ಪಿದ್ದಾರೆ.

ಇದಾದ ಬಳಿಕ ಟಾಸ್ಕ್ ನಡೆಯಿತು. ಈ ಟಾಸ್ಕ್ ವೇಳೆ ತ್ರಿವಿಕ್ರಂ ಅವರು ಮಂಜುನ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ವೇಳೆ ತ್ರಿವಿಕ್ರಂ ಅವರ ಕೈ ಮಂಜು ಬಾಯಿಗೆ ತಾಗಿ ಅಲ್ಲಿ ಗಾಯವಾಗಿದೆ. ಅನೇಕರು ಇದನ್ನು ಕರ್ಮ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ‘ಬಿಗ್ ಬಾಸ್​’ ಮನೆ ಪ್ರವೇಶಕ್ಕೆ ಕೊನೆಗೂ ಸಿಕ್ಕಿತು ಅವಕಾಶ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎಲ್ಲಾ ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಸದ್ಯ ದೊಡ್ಮನೆಯಲ್ಲಿ 15 ಸ್ಪರ್ಧಿಗಳು ಇದ್ದಾರೆ. ಗಾಯಕ ಹನುಮಂತ ಅವರು ಇತ್ತೀಚೆಗೆ ದೊಡ್ಮನೆಗೆ ಬಂದಿದ್ದಾರೆ. ಎಲಿಮಿನೇಟ್ ಆದ ಜಗದೀಶ್ ಮತ್ತೆ ಬಿಗ್ ಬಾಸ್​ಗೆ ಬರಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.