ಹನುಮಂತನ ಮುಗ್ಧತೆಗೆ ಎಲ್ಲರೂ ಫಿದಾ; ಒಂದೇ ಮಾತಿನಿಂದ ಎಲ್ಲರ ಮನ ಗೆದ್ದ ಬಿಗ್ ಬಾಸ್ ಸ್ಪರ್ಧಿ
ಹನುಮಂತ ಅವರ ಈ ಮುಗ್ಧತೆ ಹಾಗೂ ಒಳ್ಳೆಯತನ ಎಲ್ಲರಿಗೂ ಇಷ್ಟ ಆಗಿದೆ. ಐಸ್ಕ್ರೀಮ್ ಕೊಟ್ಟ ಅವರಿಗೆ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ‘ಮನೆ ಬಿಟ್ಟು ಹೋಗುವವರೆಗೆ ಕೀ ನನ್ನ ಬಳಿಯೇ ಇರಲಿ’ ಎಂದು ಹನುಮಂತ್ ಹೇಳಿಕೊಂಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಗಾಯಕ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇದನ್ನು ಕೆಲವರು ಟೀಕೆ ಮಾಡಿದ್ದರು. ಅವರು ಬಿಗ್ ಬಾಸ್ಗೆ ಸರಿಯಾದ ವ್ಯಕ್ತಿ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಅವರು ದೊಡ್ಮನೆ ಸೇರಿದ ಕೆಲವೇ ದಿನಗಳಲ್ಲಿ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ಹಾಡಿನ ಮೂಲಕ ಅವರು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಒಳ್ಳೆಯತನ, ಮುಗ್ಧತೆಗೆ ಎಲ್ಲರೂ ಫಿದಾ ಆಗಿದ್ದಾರೆ.
ಹನುಮಂತಗೆ ದೊಡ್ಮನೆಯ ಕನ್ಫೆಷನ್ರೂಂಗೆ ಬರೋಕೆ ಹೇಳಲಾಯಿತು. ಒಳಗೆ ಹೋದ ಅವರಿಗೆ ಬಿಗ್ ಬಾಸ್ ಐಸ್ಕ್ರೀಂ ಬಾಕ್ಸ್ನ ಕೀ ಕೊಟ್ಟರು. ಅಲ್ಲದೆ ಒಂದು ಷರತ್ತನ್ನು ಕೂಡ ಹಾಕಿದರು. ‘ಮನೆಯವರ ಬಳಿ ಎಂಟರ್ಟೇನ್ಮೆಂಟ್ ಮಾಡುವಂತೆ ನೀವು ಕೇಳಬಹುದು. ಅದರಿಂದ ನಿಮಗೆ ಖುಷಿ ಆದರೆ ಐಸ್ಕ್ರೀಂ ತೆಗೆದುಕೊಡಬಹುದು’ ಎಂದು ಬಿಗ್ ಬಾಸ್ ಹೇಳಿದರು.
ಅದರಂತೆ ಹನುಮಂತ ಅವರು ಎಲ್ಲರ ಬಳಿಯೂ ಮನರಂಜನೆ ನೀಡುವಂತೆ ಕೋರಿದರು. ಕೆಲವರು ಹನುಮಂತ ಅವರ ಆಸೆಯನ್ನು ಈಡೇರಿಸಿದರೆ, ಇನ್ನೂ ಕೆಲವರು ಅವರ ಮಾತಿಗೆ ಬೆಲೆ ಕೊಡಲೇ ಇಲ್ಲ. ಇದೇ ಕಾರಣ ಕೊಟ್ಟರು ಮನರಂಜನೆ ನೀಡದವರಿಗೆ ಐಸ್ಕ್ರೀಂ ಕೊಡಲ್ಲ ಎಂದು ಹೇಳುವ ಅವಕಾಶ ಹನುಮಂತ್ಗೆ ಇತ್ತು. ಆದರೆ, ಹನುಮಂತ ಹಾಗೆ ಮಾಡಲೇ ಇಲ್ಲ.
‘ನಮಗೆ ನೀವು ಐಸ್ಕ್ರೀಂ ವಿಚಾರ ಹೇಳಿದ್ರಿ. ಒಂದೈದು ಜನ ಮಾಡಿಲ್ಲ. ಮಾಡಿದವರು ನಮ್ಮವರೇ, ಮಾಡದೇ ಇದ್ದವರೂ ನಮ್ಮವರೇ. ಬಿಗ್ ಬಾಸ್ ಮನೆಗೆ ಬಂದ ಖುಷಿಗೆ ಎಲ್ಲರಿಗೂ ಐಸ್ಕ್ರೀಂ ಕೊಡ್ತೀನಿ. ನೀವು ಬೈದರೂ ಬೈಸಿಕೊಳ್ಳುತ್ತೇನೆ’ ಎಂದರು ಹನುಮಂತ.
ಇದನ್ನೂ ಓದಿ: ಜಗದೀಶ್ ಇದ್ದಾಗ ಜಗಳ, ಹನುಮಂತ ಬಂದ್ಮೇಲೆ ನಗು: ಬದಲಾಯ್ತು ಬಿಗ್ ಬಾಸ್ ಮನೆ
ಹನುಮಂತ ಅವರ ಈ ಮುಗ್ಧತೆ ಹಾಗೂ ಒಳ್ಳೆಯತನ ಎಲ್ಲರಿಗೂ ಇಷ್ಟ ಆಗಿದೆ. ಐಸ್ಕ್ರೀಮ್ ಕೊಟ್ಟ ಅವರಿಗೆ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ‘ಮನೆ ಬಿಟ್ಟು ಹೋಗುವವರೆಗೆ ಕೀ ನನ್ನ ಬಳಿಯೇ ಇರಲಿ’ ಎಂದು ಹನುಮಂತ್ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.