‘ರೋಲೆಕ್ಸ್’ ಪಾತ್ರದ ಭವಿಷ್ಯ ಏನು? ಸೂರ್ಯ ಕೊಟ್ಟರು ಉತ್ತರ

ಕಮಲ್ ಹಾಸನ್ ನಟನೆಯ ‘ವಿಕ್ರಂ’ ಸಿನಿಮಾನಲ್ಲಿ ಸೂರ್ಯ ನಿರ್ವಹಿಸಿದ್ದ ರೋಲೆಕ್ಸ್ ಪಾತ್ರ ದೊಡ್ಡ ಹಿಟ್ ಆಗಿತ್ತು. ಒಂದೆರಡು ನಿಮಿಷ ಮಾತ್ರವೇ ತೆರೆಯ ಮೇಲೆ ಕಾಣಿಸಿಕೊಂಡರೂ ಸಹ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಆ ಪಾತ್ರ ಗಳಿಸಿತ್ತು. ರೋಲೆಕ್ಸ್ ಪಾತ್ರದ ಪ್ರತ್ಯೇಕ ಸಿನಿಮಾ ಬಗ್ಗೆ ಸೂರ್ಯ ಮಾತನಾಡಿದ್ದಾರೆ.

‘ರೋಲೆಕ್ಸ್’ ಪಾತ್ರದ ಭವಿಷ್ಯ ಏನು? ಸೂರ್ಯ ಕೊಟ್ಟರು ಉತ್ತರ
Follow us
ಮಂಜುನಾಥ ಸಿ.
|

Updated on: Oct 23, 2024 | 12:56 PM

ಕಮಲ್ ಹಾಸನ್ ನಟನೆಯ ‘ವಿಕ್ರಂ’ ಸಿನಿಮಾ 2022 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದ ಹಾಡುಗಳು, ಕಮಲ್ ಪಾತ್ರ, ರಿವೇಂಜ್ ಕತೆ ಎಲ್ಲವೂ ಜನರಿಗೆ ಇಷ್ಟವಾಗಿತ್ತು. ಆದರೆ ಸಿನಿಮಾದ ಕೊನೆಯ ಐದು ನಿಮಿಷದಲ್ಲಿ ಕಾಣಿಸಿಕೊಳ್ಳುವ ಸೂರ್ಯ ಪಾತ್ರವಂತೂ ಭಾರಿ ಹಿಟ್ ಆಗಿತ್ತು. ‘ರೋಲೆಕ್ಸ್’ ಹೆಸರಿನ ವಿಲನ್ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದರು. ಕೊನೆಯ ಒಂದೆರಡು ನಿಮಿಷ ಮಾತ್ರ ಅವರ ಪಾತ್ರ ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆಯಾದರೂ ಪ್ರೇಕ್ಷಕರಿಗೆ ಆ ಪಾತ್ರ ಸಖತ್ ಇಷ್ಟವಾಗಿತ್ತು. ಆ ಪಾತ್ರವನ್ನು ಇರಿಸಿಕೊಂಡು ಪ್ರತ್ಯೇಕ ಸಿನಿಮಾ ಮಾಡಬೇಕೆಂಬ ಒತ್ತಾಯ ಪ್ರೇಕ್ಷಕರಿಂದ ಕೇಳಿ ಬರುತ್ತಲೇ ಇತ್ತು. ಆ ಬಗ್ಗೆ ಈಗ ಸ್ವತಃ ಸೂರ್ಯ ಮಾತನಾಡಿದ್ದಾರೆ.

ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರದಲ್ಲಿ ಸೂರ್ಯ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸೂರ್ಯ ಭಾಗಿಯಾಗಿದ್ದಾಗ ಅವರಿಗೆ ‘ರೋಲೆಕ್ಸ್’ ಪಾತ್ರದ ಬಗ್ಗೆ ಪ್ರಶ್ನೆ ಕೇಳಲಾಯ್ತು. ‘ರೋಲೆಕ್ಸ್’ ಭವಿಷ್ಯ ಏನಾಗಲಿದೆ? ಮತ್ತೆ ರೋಲೆಕ್ಸ್ ಅನ್ನು ತೆರೆಯ ಮೇಲೆ ನೋಡಬಹುದಾ ಎಂಬ ಪ್ರಶ್ನೆಯನ್ನು ಸಂದರ್ಶಕ ಸೂರ್ಯ ಅವರಿಗೆ ಕೇಳಿದರು.

ಅದಕ್ಕೆ ಉತ್ತರಿಸಿದ ಸೂರ್ಯ, ‘ರೋಲೆಕ್ಸ್, ಪಾತ್ರಕ್ಕಾಗಿ ನಾನು ಕೇವಲ ಅರ್ಧ ದಿನ ಮಾತ್ರವೇ ಶೂಟಿಂಗ್​ನಲ್ಲಿ ಭಾಗವಹಿಸಿದ್ದೆ. ಆದರೆ ಆ ಅರ್ಧ ದಿನದ ಶ್ರಮ ಇಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳ ಪ್ರೀತಿ, ಬೆಂಬಲ ಗಳಿಸಿಕೊಡುತ್ತದೆ ಎಂದು ನಾನು ಊಹಿಸಿರಲಿಲ್ಲ. ‘ವಿಕ್ರಂ’ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ‘ರೋಲೆಕ್ಸ್’ ಪಾತ್ರವನ್ನೇ ಇರಿಸಿಕೊಂಡು ಸ್ಟಾಂಡ್ ಅಲೋನ್ ಸಿನಿಮಾ ಮಾಡುವ ಬಗ್ಗೆ ನನ್ನ ಬಳಿ ಚರ್ಚಿಸಿದ್ದಾರೆ. ಎರಡು ಬಾರಿ ನಾವು ಈ ವಿಷಯವಾಗಿ ಮೀಟಿಂಗ್ ಮಾಡಿದ್ದೇವೆ. ಆದರೆ ಯಾವುದೂ ಸಹ ಅಂತಿಮಗೊಂಡಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:

ಮುಂದುವರೆದು, ‘ರೋಲೆಕ್ಸ್’ ಸಿನಿಮಾ ಮಾಡುವುದೋ ಅಥವಾ ‘ಇರುಂಬು ಕೈ ಮಾಯಾವಿ’ ಸಿನಿಮಾ ಮಾಡುವುದೋ ಆ ಬಗ್ಗೆ ನಾವು ನಿರ್ಣಯ ಮಾಡಬೇಕಿದೆ’ ಎಂದಿದ್ದಾರೆ. ‘ಇರುಂಬು ಕೈ ಮಾಯಾವಿ’ ಸಿನಿಮಾ ಒಂದು ಕೈ ಕಳೆದುಕೊಂಡಿರುವ ಒಬ್ಬ ಸೂಪರ್ ಹೀರೋ ಕತೆಯಾಗಿದೆ. ಸಿನಿಮಾದಲ್ಲಿ ಸೂರ್ಯ ನಾಯಕ, ಲೋಕೇಶ್ ಕನಗರಾಜ್ ನಿರ್ದೇಶಕ. ಆದರೆ ಆ ಸಿನಿಮಾದ ಕತೆಯೂ ಸಹ ಇನ್ನೂ ಅಂತಿಮವಾಗಿಲ್ಲ.

ಈಗ ‘ಕೈದಿ 2’ ಸಿನಿಮಾದ ಬಗ್ಗೆಯೂ ಚರ್ಚೆ ಆರಂಭವಾಗಿದ್ದು, ಆ ಸಿನಿಮಾದಲ್ಲಿ ರೋಲೆಕ್ಸ್ ಹಾಗೂ ಕಾರ್ತಿ (ಕೈದಿ ಸಿನಿಮಾ ನಾಯಕ, ಸೂರ್ಯ ಸಹೋದರ) ಪರಸ್ಪರ ಎದುರು-ಬದುರು ಆಗುತ್ತಾರಾ? ಎಂಬ ಸಂದರ್ಶಕರ ಪ್ರಶ್ನೆಗೆ, ಈಗ ಯಾವುದನ್ನೂ ಹೇಳಲಾಗದು, ನಾನು ಕೆಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದೇನೆ. ಲೋಕೇಶ್ ಸಹ ಅವರ ಕೆಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಇದು ಹೀಗೆಯೇ ಆಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ’ ಎಂದಿದ್ದಾರೆ ಸೂರ್ಯ.

ಸೂರ್ಯ ನಟನೆಯ ‘ಕಂಗುವ’ ಸಿನಿಮಾ ನವೆಂಬರ್ 14 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ದಿಶಾ ಪಟಾನಿ ನಾಯಕಿ, ಬಾಬಿ ಡಿಯೋಲ್ ವಿಲನ್. ಸಿನಿಮಾವನ್ನು ಜ್ಞಾನವೇಲು ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ