ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹಾರರ್​ ಧಾರಾವಾಹಿ ‘ನೂರು ಜನ್ಮಕು’

‘ಗೀತಾ’ ಧಾರಾವಾಹಿ ಬಳಿಕ ಧನುಷ್ ಗೌಡ ಅವರು ವಿವಾಹ ಆದರು. ಒಂದು ಬ್ರೇಕ್ ಪಡೆದ ಅವರು ಈಗ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಕಲರ್ಸ್ ಕನ್ನಡದ ‘ನೂರು ಜನ್ಮಕು’ ಧಾರಾವಾಹಿಯಲ್ಲಿ ಹೀರೋ ಆಗಿ ಅವರು ನಟಿಸುತ್ತಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹಾರರ್​ ಧಾರಾವಾಹಿ ‘ನೂರು ಜನ್ಮಕು’
ನೂರು ಜನ್ಮಕು
Follow us
ರಾಜೇಶ್ ದುಗ್ಗುಮನೆ
|

Updated on: Oct 23, 2024 | 2:52 PM

ಇತ್ತೀಚೆಗೆ ಧಾರಾವಾಹಿಗಳ ಮಧ್ಯೆ ಸಾಕಷ್ಟು ಕಾಂಪಿಟೇಷನ್ ನಡೆಯುತ್ತಿದೆ. ಬಹುತೇಕ ಧಾರಾವಾಹಿಗಳಲ್ಲಿ ಅತ್ತೆ-ಸೊಸೆಯ ಕಥೆಗಳೇ ಇವೆ. ಹೀರೋ ಶ್ರೀಮಂತ ಆದರೆ, ಹೀರೋಯಿನ್ ಬಡವೆ. ಇಬ್ಬರ ಮಧ್ಯೆ ಪ್ರೀತಿ ಮೂಡುತ್ತದೆ. ಇದಕ್ಕೊಬ್ಬ ವಿಲನ್. ಹೀಗಿರುವಾಗ ಈಗ ಹಾರರ್ ಧಾರಾವಾಹಿಯನ್ನು ವೀಕ್ಷಕರ ಮುಂದೆ ತರಲು ಕಲರ್ಸ್ ಕನ್ನಡ ಮುಂದಾಗಿದೆ. ಈ ಧಾರಾವಾಹಿಗೆ ‘ನೂರು ಜನ್ಮಕು’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಧಾರಾವಾಹಿಯಲ್ಲಿ ‘ಗೀತಾ’ ಖ್ಯಾತಿಯ ಧನುಷ್ ಗೌಡ ಅವರು ನಟಿಸುತ್ತಿದ್ದಾರೆ.

‘ಗೀತಾ’ ಧಾರಾವಾಹಿ ಬಳಿಕ ಧನುಷ್ ಗೌಡ ಅವರು ವಿವಾಹ ಆದರು. ಒಂದು ಬ್ರೇಕ್ ಪಡೆದ ಅವರು ಈಗ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಕಲರ್ಸ್ ಕನ್ನಡದ ‘ನೂರು ಜನ್ಮಕು’ ಧಾರಾವಾಹಿಯಲ್ಲಿ ಹೀರೋ ಆಗಿ ಅವರು ನಟಿಸುತ್ತಿದ್ದಾರೆ. ಈ ಚಿತ್ರ ಪಕ್ಕಾ ಹಾರರ್​ ಶೈಲಿಯ ಕಥೆ ಎಂಬುದು ಟೀಸರ್ ನೋಡಿದವರಿಗೆ ಅನಿಸುತ್ತಿದೆ.

‘ಪ್ರೀತ್ಸೋ ಜೀವಗಳ ಜೊತೆ ಇಡೀ ಪ್ರಪಂಚಾನೇ ನಿಂತಿದ್ರೆ, ಅದೇ ಪ್ರೀತಿನಾ ದ್ವಂಸ ಮಾಡೋಕೆ ಒಂದು ಆತ್ಮ ಕಾಯ್ತಿದೆ’ ಎಂಬ ಧ್ವನಿ ಪ್ರೋಮೋದಲ್ಲಿ ಬರುತ್ತದೆ. ಪ್ರೋಮೋದಲ್ಲಿ ದೆವ್ವವನ್ನು ಕೂಡ ತೋರಿಸಲಾಗಿದೆ. ಹೀಗಾಗಿ ಇದು ಆತ್ಮಕ್ಕೆ ಸಂಬಂಧಿಸಿದ ಕಥೆ ಎಂಬುದು ಪಕ್ಕಾ ಆಗಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಸದ್ಯ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಸೀಸನ್ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಬೇಕು. ಈ ಸೀಸನ್ ಪೂರ್ಣಗೊಂಡ ಬಳಿಕ ಧಾರಾವಾಹಿ ಪ್ರಸಾರ ಕಾಣುತ್ತದೆಯೇ ಅಥವಾ ಅದಕ್ಕೂ ಮೊದಲೇ ‘ನೂರು ಜನ್ಮಕು’ ಧಾರಾವಾಹಿ ಪ್ರಸಾರ ಕಾಣುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:  ಧನುಷ್ ಗೌಡ-ಸಂಜನಾ ವಿವಾಹ; ಇಲ್ಲಿವೆ ಮದುವೆಯ ಫೋಟೋಸ್

ಧನುಷ್ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು ‘ಗೀತಾ’ ಧಾರಾವಾಹಿ. ಈ ಧಾರಾವಾಹಿಯ ಮೊದಲ ಎಪಿಸೋಡ್ ಪ್ರಸಾರ ಕಂಡಿದ್ದು 2020ರ ಜನವರಿ 6ರಂದು. ಧನುಷ್ ಗೌಡ ಹಾಗೂ ಭವ್ಯಾ ಗೌಡ ನಟಿಸಿದ್ದರು. ಈ ಧಾರಾವಾಹಿ 1107 ಎಪಿಸೋಡ್​ಗಳು ಪ್ರಸಾರ ಕಂಡಿವೆ. ಈ ವರ್ಷ ಮಾರ್ಚ್​ 9ರಂದು ಧಾರಾವಾಹಿ ಪೂರ್ಣಗೊಂಡಿದೆ. ಈ ಧಾರಾವಾಹಿಯ ನಟಿ ಭವ್ಯಾ ಗೌಡ ಅವರು ಸದ್ಯ ಬಿಗ್ ಬಾಸ್​ನಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ