- TV9 Kannada Kannada News Photos Geetha Serial Fame Dhanush Gowda Wedding With Sanjana Photos go viral
ಧನುಷ್ ಗೌಡ-ಸಂಜನಾ ವಿವಾಹ; ಇಲ್ಲಿವೆ ಮದುವೆಯ ಫೋಟೋಸ್
Dhanush Gowda-Sanjana Wedding: ‘ಗೀತಾ’ ಧಾರಾವಾಹಿ ಮೂಲಕ ಫೇಮಸ್ ಆದವರು ಧನುಷ್ ಗೌಡ. ಅವರಿಗೆ ದೊಡ್ಡ ಮಟ್ಟದ ಖ್ಯಾತಿ ನೀಡಿದ ಧಾರಾವಾಹಿ ಇದು. ಅವರ ವಿವಾಹ ನಡೆದಿದೆ. ಸಂಜನಾ ಅವರನ್ನು ಧನುಷ್ ವರಿಸಿದ್ದಾರೆ. ಮದುವೆ ಸಂದರ್ಭದ ಫೋಟೋಗಳು ಇಲ್ಲಿವೆ.
Updated on:Apr 27, 2024 | 10:48 AM

‘ಗೀತಾ’ ಧಾರಾವಾಹಿ ಮೂಲಕ ಫೇಮಸ್ ಆದವರು ನಟ ಧನುಷ್ ಗೌಡ. ಅವರ ಮದುವೆ ಈಗ ಅದ್ದೂರಿಯಾಗಿ ನಡೆದಿದೆ. ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ಈ ವಿವಾಹ ಜರುಗಿದೆ.

ಧನುಷ್ ಗೌಡ ಅವರು ‘ಗೀತಾ’ ಧಾರಾವಾಹಿಯಲ್ಲಿ ಹೀರೋ ಆಗಿ ನಟಿಸಿದ್ದರು. ಈ ಧಾರಾವಾಹಿ ಹಲವು ಎಪಿಸೋಡ್ಗಳನ್ನು ಪೂರ್ಣಗೊಳಿಸಿದೆ. ಇತ್ತೀಚೆಗೆ ಧಾರಾವಾಹಿ ಪೂರ್ಣಗೊಂಡಿದೆ.

ಅರಿಶಿಣ ಶಾಸ್ತ್ರದ ಫೋಟೋಗಳು ಸಖತ್ ವೈರಲ್ ಆಗಿವೆ. ಅರಿಶಿಣ ಹಚ್ಚಿ ಧನುಷ್ ಅವರು ಗಮನ ಸೆಳೆದಿದ್ದಾರೆ.

ವಿವಾಹ ಸಂದರ್ಭದಲ್ಲಿ ಸಂಜನಾ ಹಾಗೂ ಧನುಷ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಹೀಗೆ.

ಸಂಜನಾಗೆ ತಾಳಿ ಕಟ್ಟಿದರು ಧನುಷ್. ಈ ಸಂದರ್ಭದಲ್ಲಿ ಕುಟುಂಬದವರು ಹಾಗೂ ಆಪ್ತರು ಹಾಜರಿ ಹಾಕಿದ್ದರು.

ಧನುಷ್ ಅವರು ಆರತಕ್ಷತೆ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆದಿದೆ. ಈ ಫೋಟೋಗಳು ಗಮನ ಸೆಳೆದಿವೆ.

ಧನುಷ್ ಅವರ ಆರತಕ್ಷತರೆ ಕಾರ್ಯಕ್ರಮದಲ್ಲಿ ಭವ್ಯಾ ಗೌಡ ಸೇರಿ ಅನೇಕರು ಆಗಮಿಸಿದ್ದರು. ಕಿರುತೆರೆಯಲ್ಲಿರೋ ಅವರ ಪರಿಚಯಸ್ಥರು ಬಂದು ನವ ದಂಪತಿಗಳನ್ನು ಹರಿಸಿದರು.
Published On - 10:41 am, Sat, 27 April 24

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



