ಮನುಷ್ಯತ್ವ ಮರೆತು ಅನುಷಾ ರೈಗೆ ಹೊಡೆದ ಬಿಗ್ ಬಾಸ್ ಮನೆಯ ಸದಸ್ಯರು

ಬಿಗ್ ಬಾಸ್​ ಕಾರ್ಯಕ್ರಮವನ್ನು ಕುಟುಂಬ ಸಮೇತ ನೋಡುವ ಕಾರ್ಯಕ್ರಮ ಎಂದು ಕೆಲವರು ಹೇಳುತ್ತಾರೆ. ಆದರೆ ಬಿಗ್ ಬಾಸ್​ ಮನೆಯ ಒಳಗೆ ಸ್ಪರ್ಧಿಗಳು ನಡೆದುಕೊಳ್ಳುವ ರೀತಿ ನೋಡಿದರೆ ಈ ಕಾರ್ಯಕ್ರಮವನ್ನು ಶಾಂತಿ, ಸಮಾಧಾನದಿಂದ ಫ್ಯಾಮಿಲಿ ಆಡಿಯನ್ಸ್​ ನೋಡಲು ಸಾಧ್ಯವಿಲ್ಲ ಎನಿಸುತ್ತದೆ. ಕೆಲವು ಸ್ಪರ್ಧಿಗಳಿಂದ ಅಂತಹ ವರ್ತನೆ ಕಾಣಿಸುತ್ತಿದೆ.

ಮನುಷ್ಯತ್ವ ಮರೆತು ಅನುಷಾ ರೈಗೆ ಹೊಡೆದ ಬಿಗ್ ಬಾಸ್ ಮನೆಯ ಸದಸ್ಯರು
ಬಿಗ್ ಬಾಸ್
Follow us
ಮದನ್​ ಕುಮಾರ್​
|

Updated on: Oct 22, 2024 | 10:26 PM

ಟಾಸ್ಕ್​ ಆಡುವಾಗ ಬಿಗ್ ಬಾಸ್​ ಸ್ಪರ್ಧಿಗಳು ಮನುಷ್ಯತ್ವ ಮರೆಯುತ್ತಾರೆ. ಟಾಸ್ಕ್ ಗೆಲ್ಲುವುದೇ ಮುಖ್ಯ ಉದ್ದೇಶ ಆದ್ದರಿಂದ ಅದಕ್ಕಾಗಿ ಮಾನವೀಯತೆಯನ್ನು ಪಕ್ಕಕ್ಕೆ ಇಡುತ್ತಾರೆ. ಮಂಗಳವಾರದ (ಅ.22) ಸಂಚಿಕೆಯಲ್ಲಿ ಅದಕ್ಕೆ ಲೇಟೆಸ್ಟ್​ ಉದಾಹರಣೆ ಸಿಕ್ಕಿದೆ. ಅನುಷಾ ರೈ ಅವರು ಟಾಸ್ಕ್​ ಮಾಡುವಾಗ ಅವರ ಗಮನವನ್ನು ಕಡಿಸಲು ಹಲವು ಬಗೆಯ ಪ್ರಯತ್ನ ಮಾಡಲಾಗಿದೆ. ಮೈಗೆ, ಮುಖಕ್ಕೆ ನೀರು ಎರೆಚಲಾಗಿದೆ. ಅಷ್ಟೇ ಅಲ್ಲದೇ ದಿಂಬಿನಿಂದ ಹೊಡೆದು ಬೀಳಿಸಲಾಗಿದೆ. ಬೆನ್ನು ಮೂಳೆಗೆ ಪೆಟ್ಟಾಗುವ ರೀತಿಯಲ್ಲಿ ಅನುಷಾ ಅವರನ್ನು ಹೊಡೆದು ಬೀಳಿಸಿದ್ದಕ್ಕೆ ಭವ್ಯಾ ಗೌಡ ಖಂಡನೆ ವ್ಯಕ್ತಪಡಿಸಿದ್ದಾರೆ.

ಒಂದು ಸುತ್ತಿನ ಆಟ ಮುಗಿಯುವ ವೇಳೆಗಾಗಲೇ ಅನುಷಾ ರೈ ಅವರಿಗೆ ಪೆಟ್ಟಾಗಿತ್ತು. ಹಾಗಿದ್ದರೂ ಕೂಡ ಅವರು ಟಾಸ್ಕ್​ ಅನ್ನು ಬಿಟ್ಟುಕೊಡಬಾರದು ಎಂಬ ಕಾರಣದಿಂದ ಆಟ ಮುಂದುವರಿಸಿದರು. ಈಗಾಗಲೇ ಅವರಿಗೆ ನೋವಾಗಿದೆ ಎಂಬುದು ಗೊತ್ತಿದ್ದರೂ ಕೂಡ ಗೋಲ್ಡ್ ಸುರೇಶ್, ಶಿಶಿರ್, ತ್ರಿವಿಕ್ರಮ್ ಅವರು ಜೋರಾಗಿ ಹೊಡೆದಿದ್ದಾರೆ. ಅನುಷಾ ರೈ ಕೆಳಗೆ ಬಿದ್ದಾಗ ಮೋಕ್ಷಿತಾ ಪೈ, ಗೌತಮಿ ಜಾಧವ್ ಅವರು ಕಣ್ಣೀರು ಹಾಕಿದ್ದಾರೆ.

ಈ ಹೊಡೆದಾಟ ಆಗಿದ್ದರ ಬಗ್ಗೆ ಟಾಸ್ಕ್​ ಮುಗಿದ ಬಳಿಕ ಭವ್ಯಾ ಗೌಡ ಅವರು ಚರ್ಚೆ ಮಾಡಿದ್ದಾರೆ. ಹುಡುಗಿಯರನ್ನು ಟಾರ್ಗೆಟ್​ ಮಾಡಿ ಹೊಡೆದಿದ್ದು ಯಾಕೆ ಎಂದು ಅವರು ಹೇಳಿದ್ದಾರೆ. ಅವರ ಮಾತನ್ನು ತ್ರಿವಿಕ್ರಮ್, ಉಗ್ರಂ ಮಂಜು, ಶಿಶಿರ್ ಮುಂತಾದವರು ವಿರೋಧಿಸಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್​ ಸಲುವಾಗಿ ಇಷ್ಟೆಲ್ಲ ಹೊಡೆದಾಟ ನಡೆಯುತ್ತಿದೆ. ಅನುಷಾ ರೈ ಅವರು ಟಾಸ್ಕ್​ ಬಳಿಕ ಜೋರಾಗಿ ಅತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಜಗದೀಶ್

‘ಒಬ್ಬ ವ್ಯಕ್ತಿಗೆ ಆ ರೀತಿ ಹೊಡೆದಾಗ ತುಂಬ ನೋವಾಗುತ್ತದೆ. ಅದರ ಅರಿವು ಇದ್ದರೂ ಕೂಡ ಹೊಡೆದಿದ್ದಾರೆ’ ಎಂದು ಮೋಕ್ಷಿತಾ ಪೈ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪೆಟ್ಟಾಗುತ್ತದೆ ಎಂಬುದು ಗೊತ್ತಿದ್ದೇ ತಾವು ಹೊಡೆದಿದ್ದು ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಈ ಮಾತಿನಿಂದ ಮೋಕ್ಷಿತಾ ಹಾಗೂ ಗೌತಮಿ ಅವರಿಗೆ ನೋವಾಗಿದೆ. 10ನೇ ಸೀಸನ್​ನಲ್ಲಿ ಇದೇ ರೀತಿ ಘಟನೆಗಳು ನಡೆದಾಗ ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಅವರ ಕಣ್ಣಿಗೆ ಸಮಸ್ಯೆ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ